ಮಂಗಳವಾರ, ಏಪ್ರಿಲ್ 23, 2013

ನಿಗೂಢಗಳನ್ನು ಉಳಿಸಿ ಹೋದ ನಿಯಾಂಡರ್ತಲ್ ಮಾನವ

                            ನಿಗೂಢಗಳನ್ನು ಉಳಿಸಿ ಹೋದ ನಿಯಾಂಡರ್ತಲ್ ಮಾನವ



ಇಂದು ಭೂಮಿಯ ಮೇಲಿನ ಜೀವಿಗಳಲ್ಲಿ ಅತ್ಯಂತ ಪ್ರಬಲ ಜೀವಿಯೆಂದರೆ ಮಾನವ ಮಾತ್ರ. ಇಲ್ಲಿ 'ಪ್ರಬಲ' ಎನ್ನುವುದು ಆತನ ದೈಹಿಕ ಶಕ್ತಿಯ ಸೂಚಕವಲ್ಲ, ಬದಲಿಗೆ ಆತನ ಮಾನಸಿಕ ಶಕ್ತಿಯ ಸೂಚಕ. ಇರುವ ಜೀವಿಗಳಲ್ಲೆಲ್ಲಾ ಆಲೋಚಿಸುವ ಶಕ್ತಿ
ಹೊಂದಿರುವ, ಭೂತ, ವರ್ತಮಾನ ಮತ್ತು ಭವಿಷ್ಯಗಳ ಬಗೆಗಿನ ಕಲ್ಪನೆ ಹೊಂದಿರುವ ಜೀವಿ ಎಂದರೆ ಮಾನವನೊಬ್ಬನೇ ಇರಬಹುದು. ತನ್ನ ಇರುವಿಕೆಯಿಂದಾಗಿ ಹಾಗೂ ತನ್ನ ಕೃತ್ಯಗಳಿಂದಾಗಿ ಇಡೀ ಭೂಮಿಯ ಮೇಲಿನ ಭೌತಿಕ ಹಾಗೂ ಜೈವಿಕ ನಿಯಮಗಳನ್ನು ಬದಲಿಸಲು ಸಾಧ್ಯವಾಗದೇ ಇದ್ದರೂ ಆತ ಅವುಗಳ ಮೇಲೆ ಪ್ರಜ್ಞಾಪೂರ್ವಕವಾಗಿ ಮಹತ್ತರ ಪರಿಣಾಮ ಬೀರಬಲ್ಲ. ಈ ರೀತಿಯ ಕಾರ್ಯ ಬಹುಶಃ ಮತ್ತಾವ ಜೀವಿಯಿಂದಲೂ ಸಾಧ್ಯವಿಲ್ಲ. ತನ್ನ ಬುದ್ಧಿಮತ್ತೆ ಮತ್ತು ಸಂಸ್ಕೃತಿಯಿಂದ ಹಾಗೂ ತನ್ಮೂಲಕ ನಾಗರಿಕತೆಯಿಂದ ಮಾನವ ಇಂದು ಭೂಮಿಯ ಮೇಲಿನ ಏಕೈಕ 'ಅದ್ವಿತೀಯ' ಜೀವಿಯಾಗಿದ್ದಾನೆ. ಮಾನವಕೇಂದ್ರಿತ ಪರಿಕಲ್ಪನೆಯಿಂದ ಇಂದು ಮಾನವನೇ ಅತ್ಯಂತ ಶ್ರೇಷ್ಠ ಎನ್ನುವುದಾದಲ್ಲಿ ಜೈವಿಕವಾಗಿ ಮತ್ತು ಆನುವಂಶಿಕವಾಗಿ ಮಾನವನಿಗೆ ಸರಿದೂಗಬಲ್ಲ ಜೀವಿ ಮತ್ತೊಂದಿಲ್ಲ. ಆದರೆ ಇಂದು ಬದುಕಿರುವ ಜೀವಿಗಳಲ್ಲಿ ಮಾನವನಿಗೆ ಅತ್ಯಂತ ಹತ್ತಿರ ಬರಬಲ್ಲ ಜೀವಿ ಎಂದರೆ ವಾನರ ಚಿಂಪಾಂಜಿ. ಆನುವಂಶಿಕವಾಗಿ ಚಿಂಪಾಂಜಿ ಶೇ.98ರಷ್ಟು ಮಾನವನನ್ನು ಹೋಲುತ್ತದೆ. ಇತರ ವಾನರಗಳಾದ ಗೊರಿಲ್ಲಾ, ಒರಂಗುಟಾನ್ ಮುಂತಾದುವು ಮನುಷ್ಯನಿಂದ ಬಹಳಷ್ಟು ದೂರದಲ್ಲಿವೆ. ಆದರೆ ಮಾನವನಿಗೆ ಬಹುಪಾಲು ಸರಿಸಮನಾಗಿದ್ದ, ಮಾನವನ ಜೀವವಿಕಾಸದ ಹಾದಿಯಲ್ಲಿ ಜೊತೆಜೊತೆಯಲ್ಲೇ ನಡೆದುಬಂದ ಮತ್ತೊಬ್ಬ ಮಾನವನಿದ್ದ. ಸುಮಾರು ಎರಡು ಲಕ್ಷ ವರ್ಷಗಳ ಹಿಂದಿನಿಂದ ಇಪ್ಪತ್ತೆಂಟು ಸಾವಿರ ವರ್ಷಗಳವರೆಗೂ ಇಡೀ ಯೂರೋಪ್ ಅವನ 'ಸಾಮ್ರಾಜ್ಯ'ವಾಗಿತ್ತು. ಇಲ್ಲಿ ಸಾಮ್ರಾಜ್ಯ ಎಂದಾಕ್ಷಣ ಆತನನ್ನು ಒಬ್ಬ ರಾಜನಂತೆ ಅಥವಾ ಸಾಮ್ರಾಟನಂತೆ ಕಲ್ಪಿಸಿಕೊಳ್ಳುವುದು ಬೇಡ. ಅವನೂ ಸಹ ನಮ್ಮಂತಹ ಆಧುನಿಕ ಮಾನವರ ಪೂರ್ವಜರಂತೆ ಕಲ್ಲಿನ ಆಯುಧಗಳಿಂದ ಭೇಟೆಯಾಡಿ, ಗೆಡ್ಡೆ ಗೆಣಸು ಆಯ್ದುಕೊಂಡು ಬದುಕುತ್ತಿದ್ದ. ಅತ್ಯಂತ ಕಠಿಣ ಪರಿಸರದ ಪರಿಸ್ಥಿತಿಗಳಾದಂತಹ ಹಿಮಯುಗಗಳಲ್ಲೂ ಆತ ಯಶಸ್ವಿಯಾಗಿ ಬದುಕಿದ್ದ. ಆತನನ್ನು ನಿಯಾಂಡರ್ತಲ್ ಮಾನವನೆಂದು ವಿಜ್ಞಾನಿಗಳು ಕರೆಯುತ್ತಾರೆ. ಸುಮಾರು 1,20,000ದಿಂದ 1,50,000 ವರ್ಷಗಳ ಹಿಂದೆ ಆಪ್ರಿಕಾದಲ್ಲಿ ವಿಕಾಸ ಹೊಂದಿದ ಆಧುನಿಕ ಮಾನವ ಸುಮಾರು ಮುವ್ವತ್ತೈದು ಸಾವಿರ ವರ್ಷಗಳ ಹಿಂದೆ ಯೂರೋಪ್ ಪ್ರವೇಶಿಸಿದ. ಅಲ್ಲಿ ಆತ ಈ ನಿಯಾಂಡರ್ತಲ್ ಮಾನವನನ್ನು ಭೇಟಿಯಾಗಿಯೇ ಇರುತ್ತಾನೆ.


ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವ ಇಬ್ಬರೂ ಯೂರೋಪ್‌ನಲ್ಲಿ ಬದುಕಿದ್ದರು. ಆಧುನಿಕ ಮಾನವ ಯೂರೋಪ್ ಪ್ರವೇಶಿಸಿದ ಹತ್ತು ಹದಿನೈದು ಸಾವಿರ ವರ್ಷಗಳ ನಂತರ ನಿಯಾಂಡರ್ತಲ್ ಮಾನವ ನಿಗೂಢವಾಗಿ ನಿರ್ನಾಮವಾಗಿ ಹೋದ.
ಪರಿಸರಕ್ಕೆ ಯಶಸ್ವಿಯಾಗಿ ಹೊಂದಿಕೊಂಡಿದ್ದ ಅವನ ನಿರ್ನಾಮಕ್ಕೆ ಕಾರಣಗಳೇನು? ಆಧುನಿಕ ಮಾನವನೊಂದಿಗಿನ ಸಂಪನ್ಮೂಲಗಳನ್ನು ಪಡೆಯುವ ಸ್ಪರ್ಧೆಯಲ್ಲಿ ಆತ ನಿರ್ನಾಮವಾದನೆ? ಅಥವಾ ಆಧುನಿಕ ಮಾನವನೊಂದಿಗಿನ ಸಂಘರ್ಷದಿಂದಾಗಿ ಆತ ನಿರ್ನಾಮ ಹೊಂದಿದನೆ? ಆತನಲ್ಲಿ 'ಸಂಸ್ಕೃತಿ' ಎಂಬುದಿತ್ತೆ? ಆತನಿಗೆ ಕುಟುಂಬ ಮತ್ತು ಸಮಾಜ ಎಂಬುದರ ಪರಿಕಲ್ಪನೆಗಳಿತ್ತೆ? ಆತನ ಹಾಗೂ ಆಧುನಿಕ ಮಾನವನ ನಡುವೆ 'ಸಾಂಸ್ಕೃತಿಕ' ವಿನಿಮಯ ನಡೆದಿತ್ತೆ? ಅಥವಾ ಲೈಂಗಿಕ ಕ್ರಿಯೆಯ ಮೂಲಕ ಆನುವಂಶಿಕ ವಿನಿಮಯವಾದರೂ ನಡೆದಿತ್ತೆ? ಆತ ಒಂದು ಪ್ರತ್ಯೇಕ ಪ್ರಭೇದವಾಗಿ ಇಂದಿಗೂ ಉಳಿದುಕೊಂಡುಬಂದಿದ್ದಲ್ಲಿ ಇಂದಿನ ಸಮಾಜ ಹೇಗಿರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದುವರೆಗೂ ದೊರಕಿರುವ ನಿಯಾಂಡರ್ತಲ್ ಮಾನವನ ಅಸ್ಥಿಯ ಪಳೆಯುಳಿಕೆಗಳಿಂದ ಇಂದು ವಿಜ್ಞಾನಿಗಳು ಆತನ ಬಹುಪಾಲು ಡಿ.ಎನ್.ಎ. ಅನ್ನು ಸಂಶ್ಲೇಷಿಸಿ ಪ್ರತ್ಯೇಕಿಸಿದ್ದಾರೆ. ನಮ್ಮಲ್ಲಿನ ಇಂದಿನ ತಂತ್ರಜ್ಞಾನದಿಂದ ಆ ಡಿ.ಎನ್.ಎ. ಬಳಸಿ ನಿಯಾಂಡರ್ತಲ್ ಮಾನವನನ್ನು ಇಂದು ಮರುಸೃಷ್ಟಿಸಬಹುದು. ಅಕಸ್ಮಾತ್ ವಿಜ್ಞಾನಿಗಳು ಆ ರೀತಿ ಸೃಷ್ಟಿಸಿದಲ್ಲಿ ಇಂದಿನ ಸಮಾಜದಲ್ಲಿ ಆತನ ಸ್ಥಾನಮಾನಗಳೇನು? ಆತ ಬರೇ ಪ್ರಯೋಗ ಪಶುವಾಗಷ್ಟೇ ಇರಬೇಕೆ? ಈ ರೀತಿಯ ಹತ್ತು ಹಲವಾರು ಜಿಜ್ಞಾಸೆಗಳು ವಿಜ್ಞಾನಿಗಳನ್ನು ಕಾಡುತ್ತಿವೆ. ನಿಯಾಂಡರ್ತಲ್ ಮಾನವನ ಮೂಲದ ಶೋಧನೆ ನಮ್ಮ
ಜೈವಿಕ ಮತ್ತು ಸಾಂಸ್ಕೃತಿಕ ಮೂಲದ ಶೋಧನೆಯೇ ಆಗಿದೆ.

1826ರಲ್ಲಿ ಬೆಲ್ಜಿಯಂನ ಎಂಜಿಸ್ ಎಂಬಲ್ಲಿ ಮಾನವನ ತಲೆಬುರುಡೆಯ ಪಳೆಯುಳಿಕೆಯೊಂದು ದೊರಕಿತು. ಆಧುನಿಕ ಮಾನವನ ತಲೆಬುರುಡೆಗಿಂತ ತುಸುದೊಡ್ಡದಾಗಿದ್ದರಿಂದ ಅದನ್ನು ಯಾವುದೋ ಕಾಯಿಲೆಯುಳ್ಳ ವ್ಯಕ್ತಿಯ ತಲೆಬುರುಡೆಯಿರಬಹುದೆಂದು
ಭಾವಿಸಲಾಯಿತು. ಅದೇ ರೀತಿ ಮತ್ತೊಂದು 1848ರಲ್ಲಿ ಜಿಬ್ರಾಲ್ಟರ್‌ನ ಫೋರ್ಬ್ಸ್ ಕ್ವಾರಿಯೊಂದರಲ್ಲಿ ದೊರಕಿತು. ನಿಯಾಂಡರ್ತಲ್ ಮಾನವನಿಗೆ ಆ ಹೆಸರು ಬಂದದ್ದು ಜರ್ಮನಿಯಲ್ಲಿನ ಡಸೆಲ್‌ಡಾರ್ಫ್ ಬಳಿಯ ನಿಯಾಂಡರ್ ಕಣಿವೆಯಿಂದ. ಜರ್ಮನಿಯಲ್ಲಿ
`ತಲ್' ಎಂದರೆ ಕಣಿವೆ ಎಂದರ್ಥ. 1856ರಲ್ಲಿ ನಿಯಾಂಡರ್ ಕಣಿವೆಯಲ್ಲಿನ ಗುಹೆಯೊಂದರಲ್ಲಿ ಕೆಲವು ಮಾನವ ಪಳೆಯುಳಿಕೆಗಳು ಸಿಕ್ಕವು. ಅವು ಅಲ್ಲಿನ ಸ್ಥಳೀಯ ವಿಜ್ಞಾನದ ಅಧ್ಯಾಪಕರ ಕೈ ಸೇರಿದವು. ಆ ಸಮಯದಲ್ಲಿ ಯಾರಿಗೂ ಮಾನವ ವಿಕಾಸದ ದೀರ್ಘ ಇತಿಹಾಸದ ಅಥವಾ ಭೂಮಿಯ ಸುದೀರ್ಘ ಇತಿಹಾಸದ ಕಲ್ಪನೆಯೂ ಇರಲಿಲ್ಲ. ಮಾನವರು ಈಗಿರುವಂತೆಯೇ ಮೊದಲಿನಿಂದಲೂ ಇದ್ದಾರೆ ಎನ್ನುವುದು ಎಲ್ಲರ ನಂಬಿಕೆಯಾಗಿತ್ತು. ಹಾಗಾಗಿ ಆ ವಿಜ್ಞಾನದ ಅಧ್ಯಾಪಕ ಆ ಮೂಳೆಯ ಪಳೆಯುಳಿಕೆಗಳನ್ನು ಬೈಬಲ್ಲಿನ ಕತೆಯಲ್ಲಿನ ನೋವಾನ ಪ್ರವಾಹದಲ್ಲಿ ಸಿಲುಕಿದ ನಿರಾಶ್ರಿತನೊಬ್ಬನವು ಇರಬಹುದೆಂದು ಊಹಿಸಿದ. ಅದನ್ನು ನೋಡಿದ ಕೆಲವರು ಅವು ರಿಕೆಟ್ಸ್ ಕಾಯಿಲೆಯಿಂದ ನರಳುತ್ತಿದ್ದ ಯಾವನೋ ದಡ್ಡ ಸನ್ಯಾಸಿಯ ಮೂಳೆಗಳಿರಬಹುದೆಂದರು. ಇನ್ನು ಕೆಲವರು ಅವು ನೆಪೋಲಿಯನ್ ಯುದ್ಧಗಳ ಸಮಯದಲ್ಲಿ ಆ ಕಣಿವೆಯಲ್ಲಿ ಅವಿತುಕೊಂಡಿದ್ದ ಕೊಸಾಕ್ ಸೈನಿಕನದು ಇರಬಹುದೆಂದರು. ಆ ಪಳೆಯುಳಿಕೆಗಳನ್ನು ಅಭ್ಯಸಿಸಿದ ಜೋಹಾನ್ ಕಾರ್ಲ್ ಪುಲ್ರೋಟ್ ಆ ಪ್ರಾಗೈತಿಹಾಸಿಕ ಮಾನವನನ್ನು ನಿಯಾಂಡರ್ತಲ್ ಮಾನವನೆಂದು ಕರೆದರು. ಆ ನಿಯಾಂಡರ್ತಲ್ ಮಾನವನನ್ನು 1857ರ ಫೆಬ್ರವರಿಯಲ್ಲಿ ಜರ್ಮನಿಯ ಬಾನ್‌ನಲ್ಲಿನ ಲೋಯರ್ ರೈನ್ ಮೆಡಿಕಲ್ ಅಂಡ್ ನ್ಯಾಚುರಲ್ ಹಿಸ್ಟರಿ ಸೊಸೈಟಿಯಲ್ಲಿ ವಿಜ್ಞಾನ ಜಗತ್ತಿಗೆ ಆ ಪಳೆಯುಳಿಕೆಗಳನ್ನು ಪರಿಚಯಿಸಿದ ವಿಲಿಯಂ ಕಿಂಗ್‌ರವರು ಹೋಮೋ ನಿಯಾಂಡರ್ತಲೆನ್ಸಿಸ್ ಎಂಬ ಒಂದು ಹೊಸ ಪ್ರಭೇದವನ್ನು ಹೆಸರಿಸಿದರು. ನಮಗೆ ಸಿಕ್ಕಿರುವ ಪ್ರಾಗೈತಿಹಾಸಿಕ `ನರವಾನರ' ಪಳೆಯುಳಿಕೆಗಳಲ್ಲಿ ಅತಿ ಹೆಚ್ಚು ನಿಯಾಂಡರ್ತಲ್ ಮಾನವನದೇ ಆಗಿದೆ ಹಾಗೂ ನಮ್ಮ ಪ್ರಾಗೈತಿಹಾಸಿಕ ಪೂರ್ವಜ ಸಂಬಂಧಿಗಳಲ್ಲಿ ನಮಗೆ ಅತಿ ಹೆಚ್ಚು ತಿಳಿದಿರುವುದು ಅವನ ಬಗ್ಗೆಯೇ ಆಗಿದೆ.

ಸುಮಾರು 2,00,000 ವರ್ಷಗಳಿಂದ 28,000 ವರ್ಷಗಳ ಹಿಂದೆ ಈಗಿನ ಯೂರೋಪ್, ಮಧ್ಯ ಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾ ಪ್ರದೇಶಗಾಳಲ್ಲಿ ಬದುಕಿದ್ದ ಪ್ರಾಗೈತಿಹಾಸಿಕ ಮಾನವ ನಿಯಾಂಡರ್ತಲ್ ಮಾನವ. ಕೆಲವು ವಿಜ್ಞಾನಿಗಳು ಹೇಳುವಂತೆ ಭೂಮಿಯ ಮೇಲಿನ ಆ ಮಾನವನ ಒಟ್ಟು ಸಂಖ್ಯೆ ಹದಿನೈದು ಸಾವಿರವನ್ನೂ ಮೀರಿರಲಿಲ್ಲ. ಅವನು ವೈಜ್ಞಾನಿಕವಾಗಿ ಹೋಮೋ ನಿಯಾಂಡರ್ತಲೆನ್ಸಿಸ್ ಎಂಬ ಪ್ರತ್ಯೇಕ ಪ್ರಭೇದದಡಿ ವರ್ಗೀಕರಿಸಲಾಗಿದೆ. ಆಧುನಿಕ ಮಾನವ ಹೋಮೋ ಸೇಪಿಯೆನ್ಸ್ ಸೇಪಿಯೆನ್ಸ್ ಪ್ರಭೇದಕ್ಕೆ ಸೇರುತ್ತಾನೆ. ಹೋಮೋ ಸೇಪಿಯೆನ್ಸ್ ಎಂದರೆ 'ವಿವೇಕಿ ಮಾನವ' ಎಂದು. ಆಧುನಿಕ ಮಾನವನಿಗೆ ಆ ಮಾನವರು ಅತ್ಯಂತ ನಿಕಟ ಸಂಬಂಧಿಗಳಾಗಿದ್ದರೂ ಅವರು ಭೌತಿಕವಾಗಿ ಮತ್ತು ಆನುವಂಶಿಕವಾಗಿ ವಿಭಿನ್ನರಾಗಿದ್ದರು. ಮಧ್ಯಮ ಎತ್ತರದ ಅವರು ದೃಢಕಾಯರಾಗಿದ್ದರು, ದೊಡ್ಡ ಹಾಗೂ ಮುಂಚಾಚಿದ ಮುಖ, ದೊಡ್ಡ ಮೂಗು, ದಪ್ಪನೆ ಹುಬ್ಬುಗಳು, ತಗ್ಗಾದ ಇಳಿಜಾರಿನ ಹಣೆಯನ್ನು ಅವರು ಹೊಂದಿದ್ದರು. ಅವರ ಮಿದುಳು ನಮ್ಮಂತಹ ಆಧುನಿಕ ಮಾನವರಷ್ಟೇ ದಪ್ಪವಿತ್ತು. ನಿಯಾಂಡರ್ತಲ್ ಮಾನವನ ಮೊದಲು ದೊರೆತ ಪಳೆಯುಳಿಕೆಗಳಿಂದ ಅವನನ್ನು ದಡ್ಡ ಹಾಗೂ ಮೃಗೀಯ ಜೀವಿಯಂತೆ ಚಿತ್ರಿಸಲಾಗಿತ್ತು. ಆದರೆ ಈಗ ಅವನೂ ಸಹ ನೇರ ಎರಡು ಕಾಲುಗಳಿಂದ ನಡೆದಾಡುತ್ತಿದ್ದ, ಧಿರಿಸು ಧರಿಸುರಿತ್ತಿದ್ದ, ಬೆಂಕಿಯನ್ನು ಬಳಸುತ್ತಿದ್ದ, ಕಲ್ಲಿನ ಸಲಕರಣೆ ಅಯುಧಗಳನ್ನು ತಯಾರಿಸಿಕೊಳ್ಳುತ್ತಿದ್ದ, ತನ್ನದೇ 'ಸಂಸ್ಕೃತಿ'ಯನ್ನು ಹೊಂದಿದ್ದ ಹಾಗೂ ಸತ್ತವರನ್ನು ಹೂಳುತ್ತಿದ್ದ ಮಾನವನೆಂದು ತಿಳಿದುಬಂದಿದೆ. ಅವನು ಹಿಮಯುಗದ ಅತಿ ಕಠೋರ ಪರಿಸ್ಥಿತಿಗಳಿಗೂ ಯಶಸ್ವಿಯಾಗಿ ಹೊಂದಿಕೊಂಡು ಬದುಕಿದ್ದ ಹಾಗೂ ಒಂದು ಪ್ರತ್ಯೇಕ ಪ್ರಭೇದವಾಗಿ 1,50,000 ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿದ್ದ.
ಮಾನವನ ವಿಕಾಸ ಒಂದು ಅತ್ಯಂತ ದೀರ್ಘ ಚರಿತ್ರೆ. ಅದರಲ್ಲಿ ಸಾವಿರ, ಲಕ್ಷ ಅಥವಾ ಹತ್ತು ಲಕ್ಷ ವರ್ಷಗಳೆನ್ನುವುದು ಲೆಕ್ಕಕ್ಕೇ ಇಲ್ಲ. ಮಂಗನಂತಿದ್ದ ಪೂರ್ವಜರಿಂದ ಆಧುನಿಕ ಮಾನವನ ಭೌತಿಕ ರೂಪ ಮತ್ತು ನಡವಳಿಕೆಗಳ ವಿಕಾಸವಾಗಲು ಕನಿಷ್ಠ ಅರವತ್ತು ಲಕ್ಷ
ವರ್ಷಗಳ ಸಮಯ ತೆಗೆದುಕೊಂಡಿದೆ. ಅತ್ಯಂತ ಮೊದಲ ಮಾನವನ ನಡವಳಿಕೆ ಎನ್ನಬಹುದಾದ 'ದ್ವಿಪಾದಿ' ನಡಿಗೆ ಸುಮಾರು ನಲವತ್ತು ಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡಿತು. ಇತರ ಬಹುಮುಖ್ಯ ಮಾನವ ಲಕ್ಷಣಗಳಾದ ದೊಡ್ಡ ಮತ್ತು ಸಂಕೀರ್ಣ ಮಿದುಳು, ಆಯುಧ ಅಥವಾ ಸಲಕರಣೆಗಳನ್ನು ತಯಾರಿಸಿ ಬಳಸುವುದು ಮತ್ತು ಭಾಷೆಯ ಸಾಧ್ಯತೆ ಆಮೇಲೆ ಕಾಣಿಸಿಕೊಂಡಿದೆ. ಇನ್ನೂ ಮುಂಬರಿದ ಲಕ್ಷಣಗಳಾದ ಸಂಕೀರ್ಣ ಸಾಂಕೇತಿಕ ಅಭಿವ್ಯಕ್ತಿ ಎನ್ನಬಹುದಾದ ಕಲೆ, ಸಾಂಸ್ಕೃತಿಕ ವೈವಿಧ್ಯತೆ ತೀರಾ ಇತ್ತೀಚೆಗೆ, ಅಂದರೆ ಸುಮಾರು ಕಳೆದ ಒಂದು ಲಕ್ಷ ವರ್ಷಗಳಿಂದೀಚೆಗೆ ಕಾಣಿಸಿಕೊಂಡಿದೆ.
ಮನುಷ್ಯರೂ ಸಹ 'ನರವಾನರರು'. ಆಧುನಿಕ ಮಾನವ, ಚಿಂಪಾಂಜಿ ಮತ್ತು ಗೊರಿಲ್ಲಾ ಸುಮಾರು ಎಂಟರಿಂದ ಆರು ದಶಲಕ್ಷ ವರ್ಷಗಳ ಹಿಂದೆ ಬದುಕಿದ್ದ ಒಂದೇ ಗುಂಪಿನ ಪೂರ್ವಜರನ್ನು ಹಂಚಿಕೊಂಡಿದ್ದಾರೆ. ಆಧುನಿಕ ಮಾನವ ಮತ್ತು ಚಿಂಪಾಂಜಿ ಶೇ.98ರಷ್ಟು ಆನುವಂಶಿಕವಾಗಿ ಒಂದೇ ಆಗಿದ್ದಾರೆ. ಸುಮಾರು 22 ರಿಂದ 5.5 ದಶಲಕ್ಷ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ನೂರಕ್ಕೂ ಹೆಚ್ಚು ವಾನರ ಪ್ರಭೇದಗಳು ಬದುಕಿದ್ದವು. ಇಂದು ಐದು ಪ್ರಮುಖ ವಾನರ ಗುಂಪುಗಳ ಮಾತ್ರ ಭೂಮಿಯ ಮೇಲಿವೆ. ಆಧುನಿಕ ಮಾನವ ಮತ್ತು ಚಿಂಪಾಂಜಿಗಳ ಪೂರ್ವಜರು ವಿಕಾಸ ಹೊಂದಿದ್ದು ಆಫ್ರಿಕಾದಲ್ಲಿ ಹಾಗೂ ಬಹಳಷ್ಟು ಆಧುನಿಕ ಮಾನವನ ವಿಕಾಸ ಅದೇ ಖಂಡದಲ್ಲಿಯೇ ನಡೆದಿದೆ. ಆರರಿಂದ ಎರಡು ದಶಲಕ್ಷ ವರ್ಷಗಳ ಹಿಂದಿನ ಮೊದಲ ಮಾನವರ ಪಳೆಯುಳಿಕೆಗಳೆಲ್ಲಾ
ಆಫ್ರಿಕಾದಲ್ಲೇ ಸಿಕ್ಕಿವೆ. ನಮ್ಮ ಪೂರ್ವಜರ ಪೂರ್ವಜರ ವಿಕಾಸವೂ ಆಫ್ರಿಕಾದಲ್ಲಿಯೇ ನಡೆದಿದೆಯೆಂದು ನಂಬಲಾಗಿದ್ದು. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಬಹುಶಃ ಅವರ ವಿಕಾಸ ಯುರೇಶಿಯಾದಲ್ಲಿ ನಡೆದಿದೆ.
ಮೊಟ್ಟಮೊದಲ ನರವಾನರರು ಏಷಿಯಾದಿಂದ ಆಫ್ರಿಕಾ ಪ್ರವೇಶಿಸಿದ್ದು ಸುಮಾರು 2ರಿಂದ 1.7 ದಶಲಕ್ಷ ವರ್ಷಗಳ ಹಿಂದೆ. ಆದರೆ ಅವರು ಯೂರೋಪ್ ಪ್ರವೇಶಿಸಿದ್ದು ಇನ್ನೂ ತಡವಾಗಿ- ಸುಮಾರು ಒಂದು ದಶಲಕ್ಷ ವರ್ಷದಿಂದೀಚೆಗೆ. ಆಧುನಿಕ ಮಾನವ
ಭೂಮಿಯ ಎಲ್ಲೆಡೆಗೆ ಪಸರಿಸಿದ್ದು ತೀರಾ ಇತ್ತೀಚೆಗೆ- ಆಸ್ಟ್ರೇಲಿಯಾ ಖಂಡಕ್ಕೆ ಸುಮಾರು ಅರವತ್ತು ಸಾವಿರ ವರ್ಷಗಳಿಂದೀಚೆಗೆ ಹಾಗೂ ಅಮೆರಿಕಾ ಖಂಡಕ್ಕೆ ಸುಮಾರು ಮುವ್ವತ್ತೈದು ಸಾವಿರ ವರ್ಷಗಳಿಂದೀಚೆಗೆ. ಕೃಷಿಯ ಪ್ರಾರಂಭ ಮತ್ತು ಮೊದಲ ನಾಗರಿಕತೆಗಳ ಪ್ರಾರಂಭ ಹತ್ತು ಸಾವಿರ ವರ್ಷಗಳಿಂದೀಚೆಗೆ ಪ್ರಾರಂಭವಾಗಿವೆ.
ಆನುವಂಶಿಕ ವಿಜ್ಞಾನಿಗಳ ಪ್ರಕಾರ ಮಾನವ ಆಫ್ರಿಕಾದ ವಾನರಗಳಿಂದ ಎಂಟರಿಂದ ಐದು ದಶಲಕ್ಷ ವರ್ಷಗಳ ಹಿಂದೆ ಪ್ರತ್ಯೇಕವಾಗಿ ವಿಕಾಸಹೊಂದಲಾರಂಭಿಸಿದ. ಇದುವರೆಗೆ ದೊರಕಿರುವ ಅತ್ಯಂತ ಪ್ರಾಚೀನ ಮಾನವ ಪಳೆಯುಳಿಕೆ ಸುಮಾರು ಆರು ದಶಲಕ್ಷ
ವರ್ಷಗಳಷ್ಟು ಹಿಂದಿನದೆಂದು ಹೇಳಲಾಗಿದೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ ಈಗ ಭೂಮಿಯ ಮೇಲಿರುವ ಎಲ್ಲ ಮನುಷ್ಯರೂ 2,29,000ದಿಂದ 1,30,000 ವರ್ಷಗಳ ಹಿಂದಿದ್ದ ಆನುವಂಶಿಕ ಪೂರ್ವಜರ ಸಂತತಿಯವರಾಗಿದ್ದಾರೆ.
ನಿಯಾಂಡರ್ತಲ್ ಮಾನವನ ಪಳೆಯುಳಿಕೆಗಳಿಂದ ಪಡೆದ ಡಿ.ಎನ್.ಎ. ಅಧ್ಯಯನದಿಂದ ನಿಯಾಂಡರ್ತಲ್ ಮತ್ತು ಆಧುನಿಕ ಮಾನವರಿಬ್ಬರೂ ಒಬ್ಬನೇ ಪೂರ್ವಿಕನನ್ನು ಹೊಂದಿದ್ದು ಅವರಿಂದ ಎಂಟರಿಂದ ಐದು ಲಕ್ಷ ವರ್ಷಗಳ ಹಿಂದೆ ಕವಲೊಡೆದು
ಪ್ರತ್ಯೇಕವಾಗಿದ್ದಾರೆ ಹಾಗೂ ನಿಯಾಂಡರ್ತಲ್ ಮಾನವ ಸುಮಾರು ಐದು ಲಕ್ಷ ವರ್ಷಗಳ ಕಾಲ ಪ್ರತ್ಯೇಕವಾಗಿ ವಿಕಾಸಹೊಂದಿದ್ದಾನೆ.
ಆಧುನಿಕ ಮಾನವನ ವಿಕಾಸವಾದದ್ದು ಆಫ್ರಿಕಾದಲ್ಲಿ. ಅಲ್ಲಿಂದ ಹೊರ ಹೊರಟ ಆಧುನಿಕ ಮಾನವ ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆ ಯೂರೋಪ್ ಪ್ರವೇಶಿಸಿದಾಗ ಅಲ್ಲಿ ಆಗಲೇ ನಿಯಾಂಡರ್ತಲ್ ಮಾನವ ಲಕ್ಷಾಂತರ ವರ್ಷಗಳಿಂದ ಬದುಕಿ
ಬಾಳುತ್ತಿದ್ದ. ಆಧುನಿಕ `ವಿವೇಕಿ' ಮಾನವ ಅಲ್ಲಿಗೆ ಪ್ರವೇಶಿಸಿದ ೧೦,೦೦೦ ವರ್ಷಗಳಲ್ಲೇ ನಿಯಾಂಡರ್ತಲ್ ಮಾನವ ಸಂಪೂರ್ಣವಾಗಿ ನಿರ್ನಾಮ ಹೊಂದಿದ. ಹಲವಾರು ವಿಜ್ಞಾನಿಗಳ ಪ್ರಕಾರ ಆ ಎರಡೂ ಮಾನವ ಪ್ರಭೇದಗಳ ನಡುವಿನ ಸಂಘರ್ಷ ಅಥವಾ ಸ್ಪರ್ಧೆ ನಿಯಾಂಡರ್ತಲ್ ಮಾನವನ ನಿರ್ನಾಮಕ್ಕೆ ಕಾರಣವಾಗಿರಬಹುದು. ಆದರೂ ಅವರ ನಿರ್ನಾಮ ಇಂದಿಗೂ ವಿಜ್ಞಾನಿಗಳು ಅರಸುತ್ತಿರುವ ನಿಗೂಢವಾಗಿದೆ.
ನಿಯಾಂಡರ್ತಲ್ ಮಾನವನ ದೇಹ ರಚನೆ ಆಧುನಿಕ ಮಾನವರಂತೆಯೇ ಇದ್ದರೂ ಅವನ ತಡೆಬುರುಡೆ ಮತ್ತು ಇತರ ಅಸ್ಥಿಗಳಲ್ಲಿ ಗಮನಾರ್ಹ ಬದಲಾವಣೆಗಳಿತ್ತು. ಅವರ ತಲೆಬುರುಡೆ ಆಧುನಿಕ ಮಾನವನಿಗೆ ಹೋಲಿಸಿದಲ್ಲಿ ತುಸು ಹೆಚ್ಚು ಉದ್ದವಿತ್ತು
(ಹಿಂದಿನಿಂದ ಮುಂಭಾಗಕ್ಕೆ), ತಗ್ಗಾದ ಹಣೆ ಹಾಗೂ ಹುಬ್ಬುಗಳ ಮೂಳೆಗಳು ಉಬ್ಬಿದ್ದವು. ಸ್ವಲ್ಪ ಚಪ್ಪಟೆಯೆನ್ನಿಸುವ ಆಧುನಿಕ ಮಾನವನ ಮುಖಕ್ಕೆ ಹೋಲಿಸಿದಲ್ಲಿ ನಿಯಾಂಡರ್ತಲ್ ಮಾನವನ ಮುಖ ಮುಂಚಾಚಿತ್ತು. ಅವರ ಕೆನ್ನೆಯ ಮೂಳೆಗಳು ಹಿಂದಕ್ಕೆ
ಚಾಚಿದ್ದರಿಂದ ಮೂಗು ಹಾಗೂ ಹೊಳ್ಳೆಗಳು ದೊಡ್ಡದಾಗಿ ಕಾಣುತ್ತಿದ್ದವು. ಅವರ ದವಡೆಗಳು ಉದ್ದವಿದ್ದು ಬಲಿಷ್ಠವಾಗಿದ್ದವು. ನಿಯಾಂಡರ್ತಲ್‌ಗಳ ಸರಾಸರಿ ಎತ್ತರ 5 ಅಡಿ 3 ಅಂಗುಲ. ಹಿಮಯುಗದ ತೀವ್ರ ಚಳಿಗೆ ಹೊಂದಿಕೊಳ್ಳಲೋ ಏನೋ ದೇಹದಿಂದ
ಶಾಖದ ನಷ್ಟವನ್ನು ತಡೆಯುವಂತೆ ಅವರ ದೇಹ ಹಾಗೂ ಕೈಕಾಲುಗಳು ಕುಳ್ಳಾಗಿದ್ದವು. ಆಧುನಿಕ ಮಾನವನ ದೇಹ ರಚನೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಿರುವಂತೆ ನಿಯಾಂಡರ್ತಲ್ ಮಾನವನಲ್ಲೂ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳಿದ್ದವು.
ಅವನ ಆನುವಂಶಿಕ ಅಂಶಗಳ ವಿಶ್ಲೇಷಣೆಯಿಂದ ಅವನು ಕೆಂಪು ಕೂದಲು ಹೊಂದಿದ್ದ ಹಾಗೂ ಅವನ ಸರಾಸರಿ ಆಯಸ್ಸು ಕೇವಲ ಮುವ್ವತ್ತೈದು ವರ್ಷಗಳಷ್ಟೇ ಇತ್ತು. ಹದಿನೈದು ವರ್ಷ ವಯಸ್ಸಿಗೇ ಅವರು ವಯಸ್ಕರಾಗಿರುತ್ತಿದ್ದರು.
ಸುಮಾರು 75,000 ವರ್ಷಗಳ ಹಿಂದೆ ತನ್ನ ನಿಯಾಂಡರ್ತಲ್ ಮಾನವನ ಸಾಮ್ರಾಜ್ಯ ಇಡೀ ಯೂರೋಪ್‌ನಿಂದ ನೈ‌ಋತ್ಯ ಏಷಿಯಾದವರೆಗೆ ಮತ್ತು ಅಟ್ಲಾಂಟಿಕ್ ಕರಾವಳಿಯಿಂದ ಪಶ್ಚಿಮ ಏಷಿಯಾದವರೆಗೆ ಹಾಗೂ ಪೂರ್ವ  ಮೆಡಿಟರೇನಿಯನ್‌ವರೆಗೂ ಹಬ್ಬಿತ್ತು.
ಸುಮಾರು 34,000 ವರ್ಷಗಳಷ್ಟು ಹಳೆಯದಾದ ನಿಯಾಂಡರ್ತಲ್ ಮಾನವನ ಮೂಳೆಗಳ ಚೂರುಗಳು ದಕ್ಷಿಣ ಸೈಬೀರಿಯಾದಲ್ಲೂ ದೊರೆತಿವೆ. ಹಿಮಯುಗದ ತೀವ್ರ ಚಳಿಗೆ ಆತ ಯಶಸ್ವಿಯಾಗಿ ಹೊಂದುಕೊಂಡಿದ್ದ. ಹಿಮಯುಗದ ಅವಧಿಯಲ್ಲಿ ಇಡೀ ಯೂರೋಪ್ ಹಿಮದಿಂದ ಆವೃತವಾಗಿದ್ದಾಗ ಆತ ಚಳಿಯನ್ನಲ್ಲದೆ ತೀವ್ರ ಆಹಾರದ ಕೊರತೆಯನ್ನೂ ಸಹ ಎದುರಿಸಿದ್ದ. ಅಂತಹ ಚಳಿಯ ಸಮಯಗಳಲ್ಲಿ ಅವನು ಉತ್ತರದ ಸ್ಪೇನ್, ನೈ‌ಋತ್ಯ ಫ್ರಾನ್ಸ್ ಹಾಗೂ ದಕ್ಷಿಣದ ಯೂರೋಪ್‌ನಲ್ಲಿನ ಗುಹೆಗಳಲ್ಲಿ
ರಕ್ಷಣೆ ಪಡೆದಿದ್ದ. ನೈ‌ಋತ್ಯ ಏಷಿಯಾದಲ್ಲಿನ ನಿಯಾಂಡರ್ತಲ್ ಮಾನವ ಶುಷ್ಕ ಮತ್ತು ಶೀತಲ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಹಾಗೂ ಅವನ ದೇಹ ರಚನೆ ಯೂರೋಪ್‌ನ ನಿಯಾಂಡರ್ತಲ್ ಮಾನವನಿಗಿಂತ ಹಗುರವಾಗಿ ನಿರ್ಮಿಸಲ್ಪಟ್ಟಿತ್ತು.
ಇದುವರೆಗೆ ದೊರೆತಿರುವ ಬಹುಪಾಲು ನಿಯಾಂಡರ್ತಲ್ ಮಾನವನ ಮೂಳೆಯ ಪಳೆಯುಳಿಕೆಗಳು ಗುಹೆಗಳಲ್ಲೇ ದೊರೆತಿವೆ. ಅಂದರೆ ಅವನು ಗುಹೆಗಳಲ್ಲಿ ಮಾತ್ರ ವಾಸಿಸುತ್ತಿದ್ದ ಎಂದಲ್ಲ, ಬಯಲುಗಳಲ್ಲಿನ ಮೂಳೆಗಳಿಗೆ ವಾತಾವರಣದಿಂದ ರಕ್ಷಣೆ
ದೊರಕದೆ ಅವುಗಳ ಕುರುಹು ಅಳಿಸಿಹೋಗಿರಬಹುದು. ಅವನು ಕೃತಕ ಆಸರೆಗಳನ್ನು ನಿರ್ಮಿಸಿರುವು ಕುರುಹುಗಳೂ ದೊರೆತಿವೆ.
ತಮಗಿಂತಲೂ ಹಿಂದಿದ್ದ ಮಾನವ ಪ್ರಭೇದಗಳ ಹಾಗೆ ನಿಯಾಂಡರ್ತಲ್ ಮಾನವರೂ ಸಹ ಬೇಟೆಗಾರರು ಹಾಗೂ ಕಾಡಿನಲ್ಲಿ ಆಹಾರ ಸಂಗ್ರಹಿಸುವವರಾಗಿದ್ದರು. ಅವರು ಸಣ್ಣ ಗುಂಪುಗಳ ಅಲೆಮಾರಿಗಳಾಗಿದ್ದು ಅವರು 5ರಿಂದ 25 ಜನರಿರುವ ಗುಂಪುಗಳಲ್ಲಿ
ಇರುತ್ತಿದ್ದರು. ಬಹಳಷ್ಟು ಸಾರಿ ಒಂದು ಗುಂಪಿನ ನಿಯಾಂಡರ್ತಲ್ ಮಾನವರು ಮತ್ತೊಂದು ಗುಂಪಿನವರನ್ನು ತಮ್ಮ ಜೀವಿತಾವಧಿಯಲ್ಲಿ ಭೇಟಿಯಾಗುತ್ತಲೇ ಇರಲಿಲ್ಲ. ಅವರು ಎಲ್ಲ ರೀತಿಯ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡುವುದರಲ್ಲಿ
ನುರಿತವರಾಗಿದ್ದರೆನ್ನುವ ಸೂಚನೆಗಳಿವೆ. ನಿಯಾಂಡರ್ತಲ್ ಸ್ಥಳಗಳಲ್ಲಿ ದೊರೆತಿರುವ ಮೂಳೆಗಳಿಂದ ಅವರು ಕಾಡು ದನಗಳು, ಜಿಂಕೆಗಳು, ಕುದುರೆಗಳು, ಹಿಮಜಿಂಕೆಗಳು, ಮೀನು ಹಾಗೂ ಇತರ ಜಲಚರಗಳನ್ನು ಬೇಟೆಯಾಡುತ್ತಿದ್ದರೆಂದು ತಿಳಿದುಬಂದಿದೆ.
ಅಷ್ಟಲ್ಲದೆ ಅವರು ದೊಡ್ಡ ಗಾತ್ರದ ಪ್ರಾಣಿಗಳಾದ ವೂಲಿ ಮ್ಯಾಮತ್ ಮತ್ತು ವೂಲಿ ಘೇಂಡಾಮೃಗಗಳನ್ನೂ ಸಹ ಬೇಟೆಯಾಡುತ್ತಿದ್ದರು. ಅವರ ಮೂಳೆಗಳ ವಿಶ್ಲೇಷಣೆಯಿಂದ ಬಹುಪಾಲು ಅವರ ಆಹಾರ ಮಾಂಸವೇ ಆಗಿತ್ತೆಂಬುದು ತಿಳಿದುಬರುತ್ತದೆ. ಬೇಟೆಯ
ಜೊತೆಗೆ ಸತ್ತ ಪ್ರಾಣಿಗಳ ಮಾಂಸವನ್ನು ಸಹ ಅವರು ತಿನ್ನುತ್ತಿದ್ದರು. ನಿಯಾಂಡರ್ತಲ್ ವಾಸಸ್ಥಳಗಳಲ್ಲಿ ದೊರೆತಿರುವ ಬೀಜ ಹಾಗೂ ಸಸ್ಯದ ಉಳಿಕೆಗಳಿಂದ ಅವರು ಹಲವಾರು ಕಾಡು ಸಸ್ಯಗಳ ಉತ್ಪನ್ನಗಳನ್ನು ಸಹ ಸೇವಿಸುತ್ತಿದ್ದರೆಂದು ತಿಳಿದುಬಂದಿದೆ.
ನೈ‌ಋತ್ಯ ಫ್ರಾನ್ಸ್‌ನ ಗುಹೆಯೊಂದರಲ್ಲಿ ದೊರೆತ ಕೆಲವು ಮೂಳೆಗಳಿಂದ ಕೆಲವು ಪ್ರದೇಶಗಳ ನಿಯಾಂಡರ್ತಲ್ ಮಾನವ ನರಭಕ್ಷಕನಾಗಿರಬಹುದಾದ ಸಾಧ್ಯತೆಗಳಿವೆ. ಅಲ್ಲಿ ದೊರೆತ ಮಾನವರ ಮೂಳೆಗಳ ಮೇಲೆ ಮಾಂಸಕ್ಕಾಗಿ ಕಲ್ಲಿನ ಚಾಕುಗಳಿಂದ ಕೆರೆದ ಗುರುತುಗಳು ಕಂಡುಬಂದಿವೆ. ಕೆಲ ವಿಜ್ಞಾನಿಗಳು ಇದನ್ನು ಅಲ್ಲಗಳೆಯುತ್ತಾರೆ. ಇರಾಕ್ ಬಳಿಯ ಶಾನಿದಾರ್ ಗುಹೆಯಲ್ಲಿ ದೊರೆತ ಅಸ್ಥಿಪಂಜರಗಳಲ್ಲಿ ಕೆಲವುದರ ಮೂಳೆಗಳು ಮುರಿದಿದ್ದು, ತಲೆಬುರುಡೆಗೆ ಏಟಾಗಿದ್ದು ಆ ಗಾಯಗಳು ವಾಸಿಯಾಗಿರುವುದರ
ಚಿಹ್ನೆಗಳು ಕಂಡುಬಂದಿವೆ. ಒಂದರ ಬಲಗೈ ಸಂಪೂರ್ಣ ಕತ್ತರಿಸಿ ಹೋಗಿದ್ದು ಆ ಮೊಂಡು ಕೈನಲ್ಲಿಯೇ ಆತ ಬದುಕಿದ್ದುದು ಕಂಡುಬರುತ್ತದೆ. ಅಂದರೆ ಆ ವ್ಯಕ್ತಿಗಳು ಗಾಯಗೊಂಡಿದ್ದಾಗ ಅವರಿಗೆ ಯಾರಾದರೂ ಆರೈಕೆ ಮಾಡಿರಲೇಬೇಕು. ಲಾ ಶಾಪೆಲ್ ಆಕ್ಸ್ ಸೇಂಟ್ಸ್ ಎಂಬಲ್ಲಿ ಸಿಕ್ಕ ಮುದುಕನ ಪಳೆಯುಳಿಕೆಗಳನ್ನು ಗಮನಿಸಿದಾಗ ಆತನಿಗೆ ಎದೆಗೂಡಿನ ಮೂಳೆ ಮುರಿದಿತ್ತು ಹಾಗೂ ಆತನಿಗೆ ಸೊಂಟದ ತೀವ್ರ ಕೀಲು ನೋವು ಮತ್ತು ಬೆನ್ನು ಹುರಿಯ ರೋಗ ಕಾಡಿತ್ತು. ಅಷ್ಟಲ್ಲದೆ ವಸಡಿನ ರೋಗದಿಂದಾಗಿ ಆತ ತನ್ನ ಎಲ್ಲಾ ಹಲ್ಲುಗಳನ್ನು ಕಳೆದುಕೊಂಡಿದ್ದ. ಹಾಗಾಗಿ ಆತ ಬೇಟೆಯಾಡುವಂತಿರಲಿಲ್ಲ, ಸರಿಯಾಗಿ ಆಹಾರವನ್ನೂ ಅಗಿಯುವಂತಿರಲಿಲ್ಲ. ಅಷ್ಟಾದರೂ ಆತ ತನ್ನ ನಲವತ್ತನೇ ವಯಸ್ಸಿನವರೆಗೆ ಬದುಕಿದ್ದ. ಅಂತಹ ನಿಶ್ಶಕ್ತ ವ್ಯಕ್ತಿ ಇತರರ ಆರೈಕೆಯಿಲ್ಲದೆ, ಪೋಷಣೆಯಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ನಿಯಾಂಡರ್ತಲ್ ಮಾನವ ನರಭಕ್ಷಕನಲ್ಲ ಅವನು ಅನುಕಂಪದ ಭಾವನೆಯ, ಇತರರಿಗೆ ಸಹಾಯ ಮಾಡಬೇಕೆನ್ನುವ ಹಾಗೂ ಸಾಮಾಜಿಕ ಅಂತಸ್ಸಾಕ್ಷಿಯ ಸಾಧ್ಯತೆಯುಳ್ಳ ವ್ಯಕ್ತಿ ಎನ್ನುತ್ತಾರೆ. ಅಲ್ಲದೆ ಅವರಿಗೆ ಕೆಲವು ಸಸ್ಯಗಳ ಔಷಧೀಯ ಗುಣಗಳೂ ಸಹ ತಿಳಿದಿದ್ದಿರಬಹುದು.
ನಿಯಾಂಡರ್ತಲ್ ಮಾನವ ಹೆಚ್ಚು ಕ್ರೂರಿ ಹಾಗೂ ಮೃಗೀಯ ವರ್ತನೆಯನ್ನು ಹೊಂದಿದ್ದ  ಎನ್ನುವ ತಪ್ಪು ಕಲ್ಪನೆಯಿಂದಲೇ ಅವನನ್ನು ಅದೇ ರೀತಿ ಚಿತ್ರಿಸಿರುವ ಚಲನಚಿತ್ರಗಳು ಸಹ ಬಂದಿವೆ. ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿ ಪರಸ್ಪರ ಕಾದಾಡುತ್ತಿರುವ 'ಆಧುನಿಕ ಹಾಗೂ ವಿವೇಕಿ ಮಾನವ'ರಾಗಿರುವ ನಮ್ಮ ನಡತೆಯನ್ನು ನಿಯಾಂಡರ್ತಲ್ ಮಾನವನಿಗೆ ಹೋಲಿಸಿಕೊಂಡಲ್ಲಿ ಯಾರು ಅತಿ ಹೆಚ್ಚು ಕ್ರೂರಿಗಳು ಹಾಗೂ ಮೃಗೀಯ ವರ್ತನೆಯುಳ್ಳವರು ಎನ್ನುವುದು ನಮಗೇ ತಿಳಿಯುತ್ತದೆ.
ನಿಯಾಂಡರ್ತಲ್ ಮಾನವ ಕಲ್ಲಿನ ಆಯುಧಗಳನ್ನು ತಯಾರಿಸುವುದರಲ್ಲಿ ನಿಪುಣನಾಗಿದ್ದ. ಅವುಗಳನ್ನು ತನ್ನ ಅಸ್ತಿತ್ವಕ್ಕಾಗಿ ಅತ್ಯಂತ ಕುಶಲತೆಯಿಂದ ಬಳಸುತ್ತಿದ್ದ. ತ್ರಿಕೋನಾಕಾರದ ಆಯುಧಗಳನ್ನು ಕೋಲಿನ ಒಂದು ಕೊನೆಗೆ ಕಟ್ಟಿ ಅದನ್ನು ಭೇಟೆಯ
ಭರ್ಜಿಯಂತೆ ಬಳಸುತ್ತಿದ್ದ. ಪ್ರಾಣಿಗಳ ಮಾಂಸವನ್ನು ಕತ್ತರಿಸಿ ತೆಗೆಯಲು ಹಾಗೂ ಅವುಗಳ ಚರ್ಮವನ್ನು ಶುಚಿಗೊಳಿಸಿ ಧಿರಿಸಿನಂತೆ ಬಳಸಲು ಒಂದು ಕೊನೆ ಚೂಪಾಗಿರುವ ಹಾಗೂ ಮತ್ತೊಂದೆಡೆ ಕೈನಿಂದ ಹಿಡಿದುಕೊಳ್ಳಲು ಮೊಂಡಾಗಿರುವ ಆಯುಧಗಳನ್ನು
ತಯಾರಿಸಿಕೊಳ್ಳುತ್ತಿದ್ದ. ಅತ್ಯಂತ ಚೂಪಾದ ಅಂಚಿನ ಮಚ್ಚುಕತ್ತಿಯಂತಹ ಕಲ್ಲಿನ ಆಯುಧಗಳನ್ನು ಮೂಳೆಯನ್ನು ಒಡೆದು ಅದರೊಳಗಿನ ಮಜ್ಜೆಯನ್ನು ತೆಗೆಯಲು ಬಳಸುತ್ತಿದ್ದ. ಚೂಪಾದ ಕಲ್ಲಿನ ಆಯುಧಗಳನ್ನು ಬಳಸಿ ಕೋಲಿನ ಒಂದು ಕೊನೆಯನ್ನು ಚೂಪಾಗಿಸಿ ಅದನ್ನೂ ಸಹ ಭೇಟೆಗೆ ಭರ್ಜಿಯಂತೆ ಬಳಸುತ್ತಿದ್ದ. ಆದರೆ ನಿಯಾಂಡರ್ತಲ್ ಮಾನವ ಬಿಲ್ಲು ಮತ್ತು ಬಾಣಗಳನ್ನು ಅಭಿವೃದ್ಧಿಪಡಿಸಿಕೊಳ್ಳಲೇ ಇಲ್ಲ.
ನಿಯಾಂಡರ್ತಲ್ ಮಾನವ ಆಯುಧಗಳನ್ನು ತಯಾರಿಸಿಕೊಳ್ಳುತ್ತಿದ್ದ ತಂತ್ರಜ್ಞಾನವನ್ನು ಪ್ರಾಕ್ತನಶಾಸ್ತ್ರಜ್ಞರು 'ಮೌಸ್‌ಟೆರಿಯನ್' ಎಂದು ಕರೆಯುತ್ತಾರೆ. ಅವರು ಕ್ರಮೇಣ ತೆಳುವಾದ, ಉದ್ದನೆ ಕಲ್ಲಿನ ಅಲಗುಗಳುಳ್ಳ ಆಯುಧಗಳನ್ನು ಹಾಗೂ ಜಿಂಕೆಯ ಕೊಂಬು
ಹಾಗೂ ಪ್ರಾಣಿಗಳ ಮೂಳೆಗಳನ್ನೂ ಸಹ ಬಳಸಿ ಆಯುಧಗಳನ್ನು ತಯಾರಿಸುವ ಇನ್ನೂ ಹೆಚ್ಚಿನ ಮುಂಬರಿದ 'ಚಾಟೆಲ್‌ಪೆರ್ರೋನಿಯನ್' ತಂತ್ರಜ್ಞಾನವನ್ನೂ ಸಹ ಅಳವಡಿಸಿಕೊಂಡರೆಂದು ವಿಜ್ಞಾನಿಗಳು ಹೇಳುತ್ತಾರೆ. ಚಾಟೆಲ್‌ಪೆರ್ರೋನಿಯನ್ ತಂತ್ರಜ್ಞಾನ ಕಂಡುಬಂದಿರುವುದು 35,000 ವರ್ಷಗಳ ಹಿಂದಿನ ಪ್ರಾಕ್ತನ ಕುರುಹುಗಳಲ್ಲಿ. ಅಂದರೆ ನಿಯಾಂಡರ್ತಲ್ ಮಾನವ ಅದನ್ನು ಆಧುನಿಕ ಮಾನವನಿಂದ ಕಲಿತನೆ? ಆಧುನಿಕ ಮಾನವ ಯೂರೋಪ್ ಪ್ರವೇಶಿಸಿದ್ದು ಸಹ ಸುಮಾರು ಅದೇ ಸಮಯದಲ್ಲೇ ಹಾಗೂ ಅವರಲ್ಲಿ ಆಯುಧ ತಯಾರಿಕೆಯ ಆ ತಂತ್ರಜ್ಞಾನ ಆಗಲೇ ಅವರಲ್ಲಿತ್ತು. ಕೆಲವು ವಿಜ್ಞಾನಿಗಳು ಹೇಳುವಂತೆ ಆಧುನಿಕ ಮಾನವನ ಯೂರೋಪ್ ಪ್ರವೇಶದ ಸಾವಿರಾರು ವರ್ಷಗಳ ಮೊದಲೇ ನಿಯಾಂಡರ್ತಲ್ ಮಾನವ ಆ ತಂತ್ರಜ್ಞಾನವನ್ನು ಸ್ವಯಂ ತಾನೇ ಅಭಿವೃದ್ಧಿಪಡಿಸಿಕೊಂಡಿದ್ದ.
ಯೂರೋಪಿನಲ್ಲಿ ಕೆಲಸಮಯ ಇರುತ್ತಿದ್ದ ತೀವ್ರ ಚಳಿಯನ್ನು ತಡೆಯಲು ನಿಯಾಂಡರ್ತಲ್ ಮಾನವ ಬೆಚ್ಚನೆ ಹೊದಿಕೆಯ ಧಿರಿಸನ್ನು ಧರಿಸಿರಬೇಕಾಗಿತ್ತು. ಆದರೆ ಯಾವ ರೀತಿಯ ಧಿರಿಸು ಧರಿಸಿರುತ್ತಿದ್ದ ಎನ್ನುವುದರ ಬಗ್ಗೆ ತಿಳಿದುಬಂದಿಲ್ಲ. ಬಹುಪಾಲು ಆತ
ತಾನು ಭೇಟೆಯಾಡಿದ ಪ್ರಾಣಿಗಳ ಚರ್ಮದಲ್ಲಿನ ಮಾಂಸವನ್ನು ಕಲ್ಲಿನ ಆಯುಧಗಳಿಂದ ಕೆರೆದು ತೆಗೆದು ಅದನ್ನು ಹೊದಿಕೆಯಂತೆ ಬಳಸುತ್ತಿರಬಹುದು ಹಾಗೂ ಅದನ್ನು ಮೈಮೇಲಿರುವಂತೆ ಮಾಡಲು ಮೂಳೆಯ ಮುಳ್ಳುಗಳನ್ನು ಬಳಸುತ್ತಿದ್ದ. ಇದುವರೆಗೆ
ಸಿಕ್ಕಿರುವ ಕುರುಹುಗಳಿಂದ ಆತ ರಂಧ್ರವಿರುವ ಮೂಳೆಯ ಸೂಜಿಗಳನ್ನು ತಯಾರಿಸಿಲ್ಲ. ನಿಯಾಂಡರ್ತಲ್ ಮಾನವನಿಗೆ ಬೆಂಕಿಯನ್ನು ತಯಾರಿಸುವುದು ಹಾಗೂ ಅದನ್ನು ನಿಯಂತ್ರಿಸುವುದರ ಬಗ್ಗೆ ತಿಳಿದಿತ್ತು. ಹಲವಾರು ನಿಯಾಂಡರ್ತಲ್ ಸ್ಥಳಗಳಲ್ಲಿ ಬೂದಿಯ ಗುಡ್ಡೆಗಳು ಕಂಡುಬಂದಿವೆ.
ಸತ್ತವರನ್ನು ಹೂಳಲು ಪ್ರಾರಂಭಿಸಿದ ಮೊಟ್ಟಮೊದಲ ಮಾನವ ನಿಯಾಂಡರ್ತಲ್ ಮಾನವ. ಹಲವಾರು ಗುಹೆಯ ತಳಗಳಲ್ಲಿ, ಕಲ್ಲ ಆಸರೆಗಳಲ್ಲಿ ಮಣ್ಣಿನಲ್ಲಿ ಹೂತಿರುವ ಅಸ್ಥಿಗಳು ದೊರೆತಿವೆ. ಅವುಗಳ ಜೊತೆಯಲ್ಲಿ ಕಲ್ಲಿನ ಆಯುಧಗಳು ಹಾಗೂ ಕೆಲವು
ಪ್ರಾಣಿಗಳ ಮೂಳೆಗಳು ಸಹ ದೊರೆತಿವೆ. ಇರಾಕ್‌ನಲ್ಲಿನ ಶಾನಿದಾರ್ ಗುಹೆಯಲ್ಲಿನ ಅಂತಹ ಗುಂಡಿಯೊಂದರಲ್ಲಿ ಅಧಿಕ ಪ್ರಮಾಣದಲ್ಲಿ ಪರಾಗ ಕಂಡುಬಂದಿದ್ದು ಸತ್ತವರನ್ನು ಹೂಳುವ ಸಮಯದಲ್ಲಿ ಹೂಗಳನ್ನು ಬಳಸಿರುವುದು ಕಂಡುಬರುತ್ತದೆ.
ಹಿಮಾಲಯಾದ ಪಶ್ಚಿಮ ತಪ್ಪಲಿನಲ್ಲಿ ದೊರೆತಿರುವ ಒಂದು ನಿಯಾಂಡರ್ತಲ್ ಶಿಶುವಿನ 'ಸಮಾಧಿ'ಯಲ್ಲಿ ಮಗುವಿನ ಸುತ್ತಲೂ ಆರು ಜೋಡಿ ಪರ್ವತ ಮೇಕೆಯ ಕೊಂಬುಗಳನ್ನು ಇರಿಸಲಾಗಿದೆ. ಹಲವಾರು ನಿಯಾಂಡರ್ತಲ್ 'ಸಮಾಧಿ'ಗಳಲ್ಲಿ ದೊರೆತಿರುವ ಅಸ್ಥಿಗಳನ್ನು ಗರ್ಭದಲ್ಲಿನ ಶಿಶುವಿನ ರೀತಿ ಕೈ ಮತ್ತು ಮೊಣಕಾಲುಗಳನ್ನು ಮಡಚಿರುವುದು ಕಂಡುಬಂದಿದೆ. ಅಂದರೆ ಅವನಿಗೆ ಸಾವಿನ ಬಗ್ಗೆ ಅರಿವಿತ್ತು ಎಂಬುದು ಇದರ ಅರ್ಥವೆ? ಕೆಲ ವಿಜ್ಞಾನಿಗಳು ಈ ರೀತಿಯ ಹೂಳುವಿಕೆಯನ್ನು 'ಅಂತ್ಯ ಸಂಸ್ಕಾರದ ಸಂಪ್ರದಾಯಗಳು' ಹಾಗೂ ಅವರಿಗೆ ಪುನರ್ಜನ್ಮದಲ್ಲಿ ನಂಬಿಕೆಯಿತ್ತು ಮತ್ತು ಅವರಿಗೆ ಸಾಂಕೇತಿಕ ರೂಪದಲ್ಲಿ ಆಲೋಚಿಸುವ ಸಾಮರ್ಥ್ಯವಿತ್ತು ಎನ್ನುತ್ತಾರೆ. ಆದರೆ ಇತರರು ಈ ರೀತಿ ಹೂತಿರುವುದು ಕೇವಲ ಸಾಂದರ್ಭಿಕ ಅಷ್ಟೆ. ಬಹುಶಃ ಅವರು ಸತ್ತವರು ಕೊಳೆತು ಇತರ ಮಾಂಸಾಹಾರಿ ಪ್ರಾಣಿಗಳನ್ನು ಆಕರ್ಷಿಸದಿರಲಿ ಎಂದು ಹೂತಿರಬಹುದಷ್ಟೇ ಹೊರತು ಅವು ಯಾವುದರ ಸಂಕೇತವೂ ಅಲ್ಲ ಎನ್ನುತ್ತಾರೆ. ದೊರೆತಿರುವ ಹೂಗಳ ಪರಾಗ ಬಹುಶಃ ಯಾವುದಾದರೂ ಇಲಿ ಹೆಗ್ಗಣಗಳಂತಹ ಪ್ರಾಣಿಗಳು ಮಣ್ಣನ್ನು ಕೊರೆದು ಸಂಗ್ರಹಿಸಿರಬಹುದು.
ನಿಯಾಂಡರ್ತಲ್ ಮಾನವನ ಬಗ್ಗೆ ಸಂಶೋಧನೆ ಪ್ರಾರಂಭವಾದಾಗಿನಿಂದಲೂ ವಿಜ್ಞಾನಿಗಳನ್ನು ಕಾಡುತ್ತಿರುವ ಜಿಜ್ಞಾಸೆ ಆತ ಭಾಷೆಯೊಂದನ್ನು ಹೊಂದಿದ್ದನೆ ಎಂಬುದು. ಭಾಷೆ ಆಲೋಚನೆಗಳನ್ನು ಸಾಂಕೇತಿಕವಾಗಿ ಸಂವಹಿಸುತ್ತದೆ. ನಿಯಾಂಡರ್ತಲ್ ಮಾನವ ಆ ರೀತಿಯ ಯಾವುದೇ ಚಿಹ್ನೆ, ಸಂಕೇತಗಳನ್ನು ಉಳಿಸಿಲ್ಲ. ಪ್ರಾಚೀನ ಆಧುನಿಕ ಮಾನವರಾದ ಕ್ರೋ ಮ್ಯಾಗ್ನನ್‌ಗಳ ಹಾಗೆ ಯಾವುದೇ ಗುಹಾ ಚಿತ್ರಗಳನ್ನು, ಆಕೃತಿಗಳನ್ನು ರಚಿಸಿಲ್ಲ. ಇಸ್ರೇಲ್‌ನ ಕೆಬಾರಾದಲ್ಲಿ ದೊರಕಿರುವ ಒಂದು ನಿಯಾಂಡರ್ತಲ್ ಮಾನವನ ಅಸ್ಥಿಪಂಜರದ ತಲೆಬುರುಡೆಯಲ್ಲಿ ಹೈಯಾಯ್ಡ್ ಮೂಳೆ ಇರುವುದು ಕಂಡುಬಂದಿದೆ. ಈ ಮೂಳೆ ನಾಲಿಗೆಯ ತಳದಲ್ಲಿ ಇರುತ್ತದೆ ಹಾಗೂ ಧ್ವನಿಪೆಟ್ಟಿಗೆಯ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ಗಮನಿಸಿರುವ ವಿಜ್ಞಾನಿಗಳು ನಿಯಾಂಡರ್ತಲ್
ಮಾನವನಿಗೆ ಮಾತನಾಡಬಲ್ಲ ಸಾಮರ್ಥ್ಯವಿತ್ತು ಎನ್ನುತ್ತಾರೆ. ಅವರು ಮಾತನಾಡಬಲ್ಲವರಾಗಿದ್ದರು ಎನ್ನುವುದಕ್ಕೆ ಸಿಕ್ಕಿರುವ ಮತ್ತೊಂದು ಪುರಾವೆ ಎಂದರೆ ಡಿ.ಎನ್.ಎ.ನಲ್ಲಿನ ಫಾಕ್ಸ್‌ಪಿ2 ಎನ್ನುವ ವಂಶವಾಹಿ. ಮಾನವ ಮಾತನಾಡಲು ಈ ವಂಶವಾಹಿ
ಅತ್ಯವಶ್ಯಕ ಎನ್ನುವ ವಿಜ್ಞಾನಿಗಳಿಗೆ ಇದು ನಿಯಾಂಡರ್ತಲ್ ಮಾನವನ ವಂಶವಾಹಿಯಲ್ಲಿ ಕಂಡುಬಂದಿದೆ. ಇದು ನಿಯಾಂಡರ್ತಲ್ ಮತ್ತು ಆಧುನಿಕ ಮಾನವ ಈ ಎರಡೂ ಪ್ರಭೇದಗಳ ಪೂರ್ವಜನಲ್ಲಿಯೇ ಇದು ರೂಪುಗೊಂಡಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಆದರೆ ನಿಯಾಂಡರ್ತಲ್ ಮಾನವನಲ್ಲಿ ನಾವು ಸಂಸ್ಕೃತಿ ಎಂದು ಕರೆಯಬಹುದಾದ ಯಾವುದೇ 'ಸಂಸ್ಕೃತಿ'ಯ ಕುರುಹುಗಳು ಅಥವಾ ಸಾಂಕೇತಿಕ ಅರ್ಥ ಕೊಡುವ ಯಾವುದೇ ವಸ್ತುಗಳು ಕಂಡುಬಂದಿಲ್ಲ. ನಿಯಾಂಡರ್ತಲ್ ಸ್ಥಳಗಳಲ್ಲಿ ಇದುವರೆಗೆ ದೊರಕಿರುವುದೆಂದರೆ ಅವನ ಕಲ್ಲಿನ ಆಯುಧಗಳ ಜೊತೆಗೆ ತೂತನ್ನು ಕೊರೆದಿರುವ ಪ್ರಾಣಿಗಳ ಹಲ್ಲು ಹಾಗೂ ಮೂಳೆಯ ಚೂರುಗಳು ಮತ್ತು ನಯವಾಗಿ ಪಾಲಿಶ್ ಮಾಡಿರುವ ಮ್ಯಾಮತ್‌ನ ದಂತದ ಚೂರು. ಬಹುಶಃ ಆತ ಅವುಗಳನ್ನು ಬಿಲ್ಲೆಗಳ ಹಾಗೆ
ಕುತ್ತಿಗೆಗೆ ತೂಗುಹಾಕಿಕೊಂಡಿರಬಹುದು. ಅವನ ನಂತರದ ಯೂರೋಪ್‌ನ 'ವಾರಸುದಾರ'ರಾದ ಕ್ರೋ-ಮ್ಯಾಗ್ನನ್‌ಗಳೆಂದು ಕರೆಯಲ್ಪಡುವ ಆಧುನಿಕ ಮಾನವರು ಹುಲುಸಾಗಿ ಬಿಟ್ಟುಹೋಗಿರುವ ಗುಹಾ ಚಿತ್ರಗಳು, ಮನುಷ್ಯಾಕೃತಿಗಾಳು, ಕೆತ್ತನೆಗಳು, ಮಣಿ ಮುಂತಾದುವುಗಳ್ಯಾವುವೂ ನಿಯಾಂಡರ್ತಲ್ ಮಾನವನ ಕುರುಹುಗಳಲ್ಲಿ ಕಂಡುಬಂದಿಲ್ಲ. ಹಾಗಾಗಿ ಆತನಲ್ಲಿ ಅಂತರ್ಗತ ಬುದ್ಧಿಮತ್ತೆಯಿದ್ದರೂ ನಾವು ಇಂದು ಕರೆಯಲ್ಪಡುವ ಯಾವುದೇ ಸಾಂಕೇತಿಕ ಆಲೋಚನೆಗಳಾಗಲೀ ಅಥವಾ ಭಾಷೆಯಾಗಲೀ ಹೊಂದಿರಲಿಲ್ಲ.
ಕೆಲವು ವಿಜ್ಞಾನಿಗಳ ಪ್ರಕಾರ ನಿಯಾಂಡರ್ತಲ್ ಮಾನವನ ದೇಹ ಆಧುನಿಕ ಮಾನವನ ದೇಹದಂತೆ ನೀಳವಾಗಿರಲಿಲ್ಲ ಅಲ್ಲದೆ ಆತ ಬಳಸುತ್ತಿದ್ದ ಭೇಟೆಯ ಭರ್ಜಿಗಳು ದಪ್ಪವಾಗಿದ್ದು ದೂರದಿಂದ ಎಸೆಯಲು ಸಾಧ್ಯವಾಗದ ಕಾರಣ ಆತ ಭೇಟೆಯಾಡುವಾಗ ಪ್ರಾಣಿಗಳ
ತೀರಾ ಹತ್ತಿರಕ್ಕೆ ಹೋಗುತ್ತಿದ್ದ ಅಲ್ಲದೇ ಇಡೀ ಗುಂಪು ಭೇಟೆಯಲ್ಲಿ ಸಮನ್ವಯತೆಯಿಂದ ತೊಡಗಬೇಕಾಗಿದ್ದುದರಿಂದ ಆತ ಪರಸ್ಪರ ಸಂವಹಿಸಿಕೊಳ್ಳಲೇ ಬೇಕಾಗಿತ್ತು. ಹಾಗಾಗಿ ಆತ ಭಾಷೆ ಅಥವಾ ಸಂಕೇತಗಳನ್ನು ಬಳಸುತ್ತಿದ್ದ. ಬಹುಶಃ ಆತನ ಭಾಷೆ
ಪ್ರಾರಂಭಾವಸ್ಥೆಯ ಗುಟುರುಗಳನ್ನೊಳಗೊಂಡಿತ್ತು ಎನ್ನುತ್ತಾರೆ ಕೆಲವು ವಿಜ್ಞಾನಿಗಳು.
ಆಧುನಿಕ ಮಾನವನ 'ಸಾಂಸ್ಕೃತಿಕ ಸಾರ್ವಭೌಮತ್ವ'ವೇ ನಿಯಾಂಡರ್ತಲ್ ಮಾನವನ ಅವನತಿಗೆ ಕಾರಣವಾಗಿರಬಹುದೆಂದು ವಿಜ್ಞಾನಿ ವೀವರ್ ತಿಳಿಸುತ್ತಾನೆ. ಆಧುನಿಕ ಮಾನವ ಹೊಸ ಸಾಂಸ್ಕೃತಿಕ ಸಾಧ್ಯತೆಗಳನ್ನು ಪಡೆದುಕೊಂಡಂತೆ ಆತ ತನ್ನ ಸುತ್ತಲಿನ ಪರಿಸರವನ್ನು ತನಗಾಗಿ ಸಶಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾನೆ ಆತ. ಐವತ್ತು ಸಾವಿರ ವರ್ಷದ ಹಿಂದಿನಿಂದಲೂ ನಿಯಾಂಡರ್ತಲ್ ಮಾನವ ಕಣ್ಮರೆಯಾಗಲು ಪ್ರಾರಂಭವಾದಂತೆ ಆಧುನಿಕ ಮಾನವನ 'ಕಲೆ ಮತ್ತು ಸಂಸ್ಕೃತಿ' ಸಮೃದ್ಧವಾಗುತ್ತಾ
ಬಂದಿತು. ಅದೇ ಸಮಯದಿಂದಲೇ ನಮಗೆ ಗುಹಾ ಚಿತ್ರಗಳು, ಕಲ್ಲಿನ ಮೂರ್ತಿಗಳು, ಮಣಿ ಮುಂತಾದ ವಸ್ತುಗಳು ಕಾಣಸಿಗುತ್ತವೆ. ವೀವರ್ ಹೇಳುವಂತೆ, 'ಕಲೆ ಮಾನವನ ಅನ್ವೇಷಣೆಯ ಸಾಧ್ಯತೆಯ ಸೂಚಕ. ಇತರರ ಅನ್ವೇಷಣೆಯ ಆಧಾರದ ಮೇಲೆ ನೀವು
ಹೊಸತನ್ನು ನಿರ್ಮಿಸುತ್ತಾ ಹೋದಲ್ಲಿ ತಂತ್ರಜ್ಞಾನ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಇದೇ ಆಧುನಿಕ ಮಾನವನು ಅತ್ಯಂತ ಯಶಸ್ವಿಯಾಗಲು ಹಾಗೂ ಆತ ಭೂಮಿಯಲ್ಲೆಡೆ ಪಸರಿಸಲು ಸಾಧ್ಯವಾಯಿತು'.
ಟ್ರಿಂಕಾಸ್ ಮುಂತಾದ ವಿಜ್ಞಾನಿಗಳು ಈ ವಾದವನ್ನು ಸ್ಪಷ್ಟವಾಗಿ ಅಲ್ಲಗಳೆಯುತ್ತಾರೆ. ಅವರ ಪ್ರಕಾರ ನಿಯಾಂಡರ್ತಲ್ ಮತ್ತು ಆಧುನಿಕ ಮಾನವನ ನಡುವೆ ಯಾವುದೇ ರೀತಿಯ ಜೈವಿಕ ಅಥವಾ ಸಾಮಾಜಿಕ ವ್ಯತ್ಯಾಸಗಳಿರಲಿಲ್ಲ. 'ಅವರೂ ಕಲ್ಲಿನ ಆಯುಧ ಸಲಕರಣೆಗಳನ್ನು ಬಳಸುತ್ತಿದ್ದರು, ಆಧುನಿಕ ಮಾನವನೂ ಸಹ ಅವುಗಳನ್ನೇ ಬಳಸುತ್ತಿದ್ದ. ಅವರೂ ಸತ್ತವರನ್ನು ಹೂಳುತ್ತಿದ್ದರು, ಇವರೂ ಹೂಳುತ್ತಿದ್ದರು. ಅವರೂ ಯಶಸ್ವಿಯಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಇವರೂ ಆಡುತ್ತಿದ್ದರು. ಐವತ್ತು ಸಾವಿರದಿಂದ ಒಂದು ಲಕ್ಷ ವರ್ಷದ ಹಿಂದೆ ಇವರಿಬ್ಬರ ನಡುವೆ ಯಾವ ವ್ಯತ್ಯಾಸವೂ ಇರಲಿಲ್ಲ. ಇದೊಂದು ರೀತಿಯ ಕಾಲ್ಚೆಂಡಿನಾಟವಿದ್ದಂತೆ. ಯಾರಾದರೊಬ್ಬರು ಪಂದ್ಯದಲ್ಲಿ ಗೆಲ್ಲಲೇಬೇಕು. ಈ ಪಂದ್ಯದಲ್ಲಿ ಆಧುನಿಕ ಮಾನವ ಗೆದ್ದಿದ್ದಾನಷ್ಟೆ' ಎನ್ನುತ್ತಾರೆ ಟ್ರಿಂಕಾಸ್.

ನಿಯಾಂಡರ್ತಲ್ ಮಾನವನ ಮೂಲ
ನಿಯಾಂಡರ್ತಲ್ ಮಾನವನ ಬಗೆಗಿನ ಬಹುಪಾಲು ಎಲ್ಲಾ ಅಧ್ಯಯನಗಳು ಅವನು ಆಧುನಿಕ ಮಾನವನೊಂದಿಗಿನ ಸಂಬಂಧವನ್ನು ಶೋಧಿಸಲು ಪ್ರಯತ್ನಿಸುತ್ತಿವೆ. ಅವುಗಳಲ್ಲಿನ ಮೂರು ಸಿದ್ಧಾಂತಗಳು ಮುಖ್ಯವಾದುವು. ಮೊದಲನೆಯ ಸಿದ್ಧಾಂತ,
ನಿಯಾಂಡರ್ತಲ್ ಮಾನವ ಮೊದಲು ವಿಕಾಸ ಹೊಂದಿದ ಹಾಗೂ ಆಧುನಿಕ ಮಾನವನಾದ ಹೋಮೋ ಸೇಪಿಯೆನ್ಸ್‌ನ ಅವನಿಂದ ವಿಕಾಸ ಹೊಂದಿದ್ದಾನೆ ಎನ್ನುವುದು. ಎರಡನೆಯದು, ನಿಯಾಂಡರ್ತಲ್ ಮಾನವ ಪ್ರಭೇದ ಆಧುನಿಕ ಮಾನವನಾದ ಹೋಮೋ
ಸೇಪಿಯೆನ್ಸ್‌ನ ಉಪಪ್ರಭೇದವೆನ್ನುವುದು. ಅದನ್ನು ಹೋಮೋ ಸೇಪಿಯೆನ್ಸ್ ನಿಯಾಂಡರ್ತಲೆನ್ಸಿಸ್ ಎಂದೂ ಕರೆದರು. ಈ ಸಿದ್ಧಾಂತವನ್ನು ಬೆಂಬಲಿಸುವ ವಿಜ್ಞಾನಿಗಳ ಪ್ರಕಾರ ಈ ಎರಡೂ ಪ್ರಭೇದಗಳ ನಡುವೆ ಆನುವಂಶಿಕ ವಿನಿಮಯ ಸಾಧ್ಯವಾಗುತ್ತದೆ ಹಾಗೂ ಆ ರೀತಿಯ ಆನುವಂಶಿಕ ವಿನಿಮಯ ನಡೆದಿದೆ ಎನ್ನುವುದನ್ನು ಪಳೆಯುಳಿಕೆಗಳಲ್ಲಿ ಕಾಣಬಹುದು ಎನ್ನುತ್ತಾರೆ. ಮೂರನೆಯ ಸಿದ್ಧಾಂತದ ಪ್ರಕಾರ ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವ ಇಬ್ಬರೂ ಎರಡು ಪ್ರತ್ಯೇಕ ಪ್ರಭೇದಗಳಿಗೆ ಸೇರಿದವರು
ಹಾಗೂ ಇಬ್ಬರೂ ವಿಭಿನ್ನ ಪೂರ್ವಜರನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಆಧುನಿಕ ಮಾನವ ನಿಯಾಂಡರ್ತಲ್ ಮಾನವನಿಗಿಂತ ಇನ್ನೂ ಹಿಂದೆಯೇ ವಿಕಾಸ ಹೊಂದಿದವನು ಮತ್ತು ಕ್ರಮೇಣ ಎರಡೂ ಪ್ರಭೇದಗಳು ಒಂದು ಪ್ರದೇಶದಲ್ಲಿ ಸೇರಿದಂತೆ ಆಧುನಿಕ
ಮಾನವನ ಕೈ ಮೇಲಾಗಿ ಅವನು ನಿಯಾಂಡರ್ತಲ್ ಮಾನವನ ಸಂಪೂರ್ಣ ಅವನತಿಗೆ ಕಾರಣನಾದ.
ಒಟ್ಟಾರೆಯಾಗಿ ನಿಯಾಂಡರ್ತಲ್ ಮಾನವನ ಪ್ರಶ್ನೆಯನ್ನು ಈ ಕೆಳಗಿನ ಎರಡು ದೃಷ್ಟಿಕೋನಗಳಲ್ಲಿ ಯಾವುದಾದರೊಂದನ್ನು ಸದ್ಯಕ್ಕೆ ಒಪ್ಪಿಕೊಳ್ಳುವುದರ ಮೂಲಕ ಬಗೆಹರಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಮೊದಲನೆಯದು, ನಿಯಾಂಡರ್ತಲ್ ಮಾನವನನ್ನು ದೈಹಿಕವಾಗಿ ಆಧುನಿಕವಾಗಿರುವ ಮಾನವರು ಕ್ಷಿಪ್ರವಾಗಿ ಅವರ ಸ್ಥಾನ ಆಕ್ರಮಿಸಿ ಸಂಪೂರ್ಣವಾಗಿ ಅವರನ್ನು ನಿರ್ನಾಮ ಮಾಡಿ ಅವರ ಸ್ಥಾನ ಆಕ್ರಮಿಸಿದರು (ಇದನ್ನು ಪ್ರತಿಪಾದಿಸುವವರು ಆಧುನಿಕ ಮಾನವನ 'ಆಫ್ರಿಕಾದಿಂದ ಹೊರನಡೆದ' ಮಾನವನ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದವರು). ಇದು 'ಬದಲಿ' ಸಿದ್ಧಾಂತ. ಎರಡನೆಯದು, ಹಲವಾರು ಸ್ಥಳಗಳಲ್ಲಿ ನಿಯಾಂಡರ್ತಲ್ ಮಾನವ ಕ್ರಮೇಣ ಆಧುನಿಕ ಮಾನವನಾಗಿ ಸ್ವತಃ ರೂಪಾಂತರ ಹೊಂದಿದ. ಅಂದರೆ, ನಿಯಾಂಡರ್ತಲ್ ಮಾನವ ಆಧುನಿಕ ಮಾನವನೊಂದಿಗೆ ಆನುವಂಶಿಕವಾಗಿ 'ಸಮ್ಮಿಶ್ರ'ಗೊಂಡಿರುವವನು. ಮೊದಲನೆಯ ದೃಷ್ಟಿಕೋನದಲ್ಲಿ ನಿಯಾಂಡರ್ತಲ್ ಮಾನವನನ್ನು ಪ್ರತ್ಯೇಕ ಪ್ರಭೇದವೆಂದು ಪರಿಗಣಿಸಲಾಗಿದೆ. ಅಂದರೆ, ಆತ ಆಧುನಿಕ ಮಾನವನೊಂದಿಗೆ ಲೈಂಗಿಕ ವಿಧಾನಗಳ ಮೂಲಕ ಬೆರೆಯಲು ಸಾಧ್ಯವಿಲ್ಲ. ಆದರೆ ಎರಡನೆಯ ದೃಷ್ಟಿಕೋನದಲ್ಲಿ ನಿಯಾಂಡರ್ತಲ್ ಮಾನವನನ್ನು ಆಧುನಿಕ ಮಾನವ ಸೇರಿರುವ ಹೋಮೋ ಸೇಪಿಯೆನ್ಸ್ ಪ್ರಭೇದಕ್ಕೇ ಸೇರಿದವನು, ಆದರೆ ಅವನ ದೈಹಿಕ ಆಕಾರ ಇತ್ಯಾದಿಗಳು ಈಗಿನ ಮಾನವರಂತೆ ಪ್ರಾದೇಶಿಕ ವ್ಯತ್ಯಾಸಗಳನ್ನು ಹೊಂದಿವೆ ಅಥವಾ ಅತಿ ಹೆಚ್ಚೆಂದರೆ ಆತ ಹೋಮೋ ಸೇಪಿಯೆನ್ಸ್‌ನ ಉಪಪ್ರಭೇದವಾಗಿರಬಹುದು. ಆದರೆ ದೈಹಿಕ ವ್ಯತ್ಯಾಸಗಳ ಪರಿಗಣನೆಯಿಂದ ಈ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ.
ಯೂರೋಪ್‌ನಲ್ಲಿ ದೊರಕಿರುವ ಮಾನವನ ಅತ್ಯಂತ ಪ್ರಾಚೀನ ಕುರುಹು ಸಿಕ್ಕಿರುವುದು ಉತ್ತರ ಸ್ಪೇನ್‌ನಲ್ಲಿನ ಅಟಪುರ್ಕಾ ಬೆಟ್ಟಗಳಲ್ಲಿ ದೊರಕಿರುವ ಸುಮಾರು 12 ಲಕ್ಷ ವರ್ಷಗಳಷ್ಟು ಹಳೆಯದಾದ ಒಂದು ದವಡೆ ಮತ್ತು ಹಲ್ಲಿನ ಪಳೆಯುಳಿಕೆ. ಇಟಲಿಯ ಸೆಪ್ರಾನೊದಲ್ಲಿ ದೊರಕಿರುವ ತಲೆಬುರುಡೆಯ ಚಿಪ್ಪಿನ ಪಳೆಯುಳಿಕೆ ಸುಮಾರು 9 ಲಕ್ಷ ವರ್ಷಗಳಷ್ಟು ಹಳೆಯದು. ಅದೇ ಉತ್ತರ ಸ್ಪೇನ್‌ನಲ್ಲಿನ ಅಟಪುರ್ಕಾ ಬೆಟ್ಟಗಳಲ್ಲಿ ದೊರಕಿರುವ ಮತ್ತೊಂದು ಮಾನವ ಪಳೆಯುಳಿಕೆ ಸುಮಾರು 7.8 ಲಕ್ಷ ವರ್ಷಗಳಷ್ಟು ಹಳೆಯದು. ಈ ಎಲ್ಲಾ ಪಳೆಯುಳಿಕೆಗಳು ಮಾನವನ ವಿವಿಧ ಪ್ರಭೇದಗಳಿಗೆ ಸೇರಿರುವುದಾಗಿವೆ. ನಿಯಾಂಡರ್ತಲ್ ಮಾನವನಿಗೆ ಸೇರಿರಬಹುದೆನ್ನಲಾದ ಕುರುಹು ನಾಲ್ಕು ಲಕ್ಷದಿಂದ ಎರಡು ಲಕ್ಷ ವರ್ಷಗಳಷ್ಟು ಹಿಂದಿನ ಪಳೆಯುಳಿಕೆಗಳಲ್ಲಿ ಕಂಡುಬಂದಿವೆ.
ಅವುಗಳಲ್ಲಿ ಹೋಮೋ ಹೀಡೆಲ್‌ಬರ್ಗೆನ್‌ಸಿಸ್ ಪ್ರಭೇದಕ್ಕೆ ಸೇರಿರಬಹುದಾದ ಪಳೆಯುಳಿಕೆಗಳೂ ಇವೆ. ಬಹುಪಾಲು ಪ್ರಾಗೈತಿಹಾಸಿಕ ಮಾನವಶಾಸ್ತ್ರಜ್ಞರ ಪ್ರಕಾರ ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವನ ಪೂರ್ವಜ ಹೋಮೋ ಹೀಡೆಲ್‌ಬರ್ಗೆನ್ಸಿಸ್. ಆ ಪೂರ್ವಜನಿಂದ ಆಧುನಿಕ ಮಾನವ ಆಫ್ರಿಕಾದಲ್ಲಿ ಮತ್ತು ನಿಯಾಂಡರ್ತಲ್ ಮಾನವ ಯೂರೋಪ್‌ನಲ್ಲಿ ವಿಕಾಸ ಹೊಂದಿರುವರು. ಹೋಮೋ ಸೇಪಿಯೆನ್ ಪ್ರಭೇದದ ಮೊದಲ ಆಧುನಿಕ ಮಾನವರನ್ನು ಕ್ರೋ-ಮ್ಯಾಗ್ನನ್‌ಗಳೆಂದು ಕರೆಯಲಾಗುತ್ತದೆ. ಅವರು ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆ ಯೂರೋಪ್ ಪ್ರವೇಶಿಸಿದಾಗ ಆ ಪ್ರದೇಶದ ಏಕೈಕ ಮಾನವ ವಾಸಿಗಳಾಗಿದ್ದವರು ನಿಯಾಂಡರ್ತಲ್ ಮಾನವರು. ಅಲ್ಲಿ ಅವರಿಬ್ಬರೂ ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಆ ಪ್ರದೇಶವನ್ನು ಹಂಚಿಕೊಂಡು ಬದುಕಿದರು. ಅವರಿಬ್ಬರ ನಡುವೆ ಲೈಂಗಿಕ ಕ್ರಿಯೆಯ ಮೂಲಕ ಆನುವಂಶಿಕ ಅಂಶಗಳ ಹಂಚಿಕೆ ನಡೆಯಿತೆ? ಕೆಲ ವಿಜ್ಞಾನಿಗಳು ಹೇಳುವಂತೆ ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವ- ಮಾನವ ವಂಶವೃಕ್ಷದ ಎರಡು ಕೊಂಬೆಗಳಷ್ಟೆ ಹಾಗೂ ಮುಖ್ಯವಾಗಿ ದೈಹಿಕ ಚಹರೆಗಳಲ್ಲಿ ವಿಭಿನ್ನತೆಯನ್ನು ಹೊಂದಿರುವವರು, ಹಾಗಾಗಿ ಅವರಿಬ್ಬರ ನಡುವೆ ಲೈಂಗಿಕ ಕ್ರಿಯೆಯ ಮೂಲಕ
ಸಂತಾನಾಭಿವೃದ್ಧಿ ಸಾಧ್ಯವಾಗುತ್ತದೆ. ಬಹುಶಃ ಇಂದಿನ ಯೂರೋಪಿಯನ್ ಮೂಲದ ಜನರಲ್ಲಿ ನಿಯಾಂಡರ್ತಲ್ ಮಾನವರ ವಂಶವಾಹಿಗಳಿರಬಹುದು. ಉದಾಹರಣೆಗೆ, ಅವರ ಕೆಂಪು ತಲೆಗೂದಲು ನಿಯಾಂಡರ್ತಲ್ ಮಾನವರ ಬಳುವಳಿಯೆ?
ಲೀಪ್‌ಜಿಗ್‌ನಲ್ಲಿನ ಮ್ಯಾಕ್ಸ್‌ಪ್ಲಾಂಕ್ ಇನ್‌ಸ್ಟಿಟ್ಯೂಟ್ ಆಫ್ ಎವೊಲ್ಯೂಶನರಿ ಆಂಥ್ರೊಪಾಲಜಿಯ ವಿಜ್ಞಾನಿ ಸ್ವಾಂಟೆ ಪಾಬೋರವರು 454 ಜೀವವಿಜ್ಞಾನಿಗಳ ಜೊತೆಗೂಡಿ ಪಳೆಯುಳಿಕೆಗಳ ತುಣುಕುಗಳಿಂದ ನಿಯಾಂಡರ್ತಲ್ ಮಾನವನ ಡಿ.ಎನ್.ಎ. ಅನ್ನು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವ ಸುಮಾರು 6,90,000 ದಿಂದ 5,50,000ದಿಂದ ವರ್ಷಗಳ ಹಿಂದೆ ಒಂದೇ ಪೂರ್ವಜನಿಂದ ಕವಲೊಡೆದು ಪ್ರತ್ಯೇಕವಾಗಿ ವಿಕಾಸಹೊಂದಲು ಆರಂಭಿಸಿದರು. ತೀರಾ ಹಳೆಯದಾದ ಪಳೆಯುಳಿಕೆಗಳಲ್ಲಿನ ಡಿ.ಎನ್.ಎ. ವಿಶ್ಲೇಷಣೆ ಕೊಂಚ ಏರುಪೇರಾದ ಫಲಿತಾಂಶಗಳನ್ನು ಕೊಡಬಹುದಾದರೂ ಸಿಕ್ಕಿರುವ ಪಳೆಯುಳಿಕೆಗಳ ಅಧ್ಯಯನವೂ ಅವರ ಫಲಿತಾಂಶ ನಿಖರವಾಗಿದೆಯೆನ್ನುವಂತಿವೆ.
ಆಧುನಿಕ ಮಾನವನ, ನಿಯಾಂಡರ್ತಲ್ ಮಾನವನ ಚಿಂಪಾಂಜಿಗಳ ಆನುವಂಶಿಕ ಮಾಹಿತಿ ಭಂಡಾರವನ್ನು ತುಲನೆ ಮಾಡಿನೋಡಲಾಗಿದೆ. ನಿಯಾಂಡರ್ತಲ್ ಮಾನವನ ಬಹುಪಾಲು ಆನುವಂಶಿಕ ಮಾಹಿತಿ ಆಧುನಿಕ ಮಾನವನ ಆನುವಂಶಿಕ ಮಾಹಿತಿಯಂತೆಯೇ ಇದ್ದರೂ ಸಹ ಅದು ಕೆಲಭಾಗಗಳಲ್ಲಿ ಅದು ಚಿಂಪಾಂಜಿಗಳದನ್ನು ಹೋಲುತ್ತದೆ. ಬಹುಶಃ ಆ ಭಾಗಗಳಲ್ಲಿ ವಿಕಾಸದ ಹಾದಿಯಲ್ಲಿ ಆಧುನಿಕ ಮಾನವ 'ಮಾನವ'ನಾಗುವಂತಹ ಬದಲಾವಣೆಗಳನ್ನು ಪಡೆದುಕೊಂಡಿದ್ದಾನೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವನ ನಡುವಿನ ಸಂಬಂಧ ಅತ್ಯಂತ ಮುಖ್ಯವಾದುದು. ಏಕೆಂದರೆ ಈ ಸಂಬಂಧದ ಅಧ್ಯಯನದಲ್ಲಿಯೇ ನಿಯಾಂಡರ್ತಲ್ ಮಾನವನ ನಿರ್ನಾಮಕ್ಕೆ ಉತ್ತರವೂ ಸಿಗಬಹುದು. ಆಧುನಿಕ ಮಾನವನಲ್ಲಿನ ಆನುವಂಶಿಕ ಲಕ್ಷಣಗಳಿಗೆ ನಿಯಾಂಡರ್ತಲ್ ಮಾನವನ ಕೊಡುಗೆ ಏನಾದರೂ ಇದ್ದಲ್ಲಿ ಯೂರೋಪ್‌ನ ಜನಗಳಲ್ಲಿ ಆ ಲಕ್ಷಣಗಳು ಇರಬಹುದೆಂದು ವಿಜ್ಞಾನಿ ಸ್ವಾಂಟೆ ಪಾಬೊ ಮತ್ತು ಆತನ ಸಹ ವಿಜ್ಞಾನಿಗಳು ಯೂರೋಪ್‌ನಲ್ಲಿನ ಹಾಗೂ ಇತರ ವಿವಿಧ ಐದು ಗುಂಪುಗಳ ಜನರ ಡಿ.ಎನ್.ಎ.ನೊಂದಿಗೆ ಹೋಲಿಸಿ ನೋಡಿದರು. ಆದರೆ ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವನ ನಡುವೆ ಆನುವಂಶಿಕ ವಿನಿಮಯ ನಡೆದಿದ್ದರೂ ಆನುವಂಶಿಕ ಲಕ್ಷಣಗಳಿಗೆ ನಿಯಾಂಡರ್ತಲ್ ಮಾನವನ ಕೊಡುಗೆ ತೀರಾ ಗೌಣ ಎನ್ನುವ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.
ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವರ ನಡುವೆ ಲೈಂಗಿಕ ಕ್ರಿಯೆಯ ಮೂಲಕ ಆನುವಂಶಿಕ ಅಂಶಗಳ ಹಂಚಿಕೆ ನಡೆದಿರಬಹುದಾದ ಸಾಧ್ಯತೆಯನ್ನು ಬೆಂಬಲಿಸುವ ವಿಜ್ಞಾನಿಗಳು ತಮ್ಮ ವಾದವನ್ನು ಸಮರ್ಥಿಸಲು ಪಳೆಯುಳಿಕೆಗಳ ಮೊರೆ ಹೋಗುತ್ತಾರೆ.
ಅವರ ಪ್ರಕಾರ ತೀರಾ ಇತ್ತೀಚಿನ ನಿಯಾಂಡರ್ತಲ್ ಮಾನವನ ಪಳೆಯುಳಿಕೆಗಳು 'ಆಧುನಿಕ'ವೆನ್ನುವಂತೆ ತೋರುತ್ತವೆ ಹಾಗೂ ಆಧುನಿಕ ಮಾನವನ ಮೊದಲ ಪಳೆಯುಳಿಕೆಗಳಲ್ಲಿ 'ನಿಯಾಂಡರ್ತಲ್' ರೀತಿಯ ಅಂಶಗಳು ಕಂಡುಬರುತ್ತವೆ. ಆದರೆ ಈ ಆಧಾರವಷ್ಟೇ ಅವರಿಬ್ಬರ ನಡುವೆ ಆನುವಂಶಿಕ ಸಮ್ಮಿಶ್ರತೆ ನಡೆದಿದೆ ಎಂದು ಸಾಬೀತುಗೊಳಿಸುವುದಿಲ್ಲ.
ನಿಯಾಂಡರ್ತಲ್ ಮಾನವನ ಬಗ್ಗೆ ಹೆಚ್ಚು ಹೆಚ್ಚು ಅರಿತಷ್ಟು ಆತ ಹೋಮೋ ನಿಯಾಂಡರ್ತಲೆನ್ಸಿಸ್ ಎಂಬ ಪ್ರತ್ಯೇಕ ಪ್ರಭೇದವಾಗಿದ್ದ ಎನ್ನುವುದರ ಕುರುಹುಗಳೇ ಹೆಚ್ಚು ಹೆಚ್ಚು ದೊರಕುತ್ತಾ ಹೋಗುತ್ತವೆ. 1990ರ ದಶಕದಲ್ಲಿ ನಿಯಾಂಡರ್ತಲ್ ಮಾನವನ
ಪಳೆಯುಳಿಕೆಗಳಿಂದ ಪಡೆದ ಡಿ.ಎನ್.ಎ. ಅನ್ನು ಪ್ರತ್ಯೇಕಿಸಿ ಅದನ್ನು ಆಧುನಿಕ ಮಾನವರ ಡಿ.ಎನ್.ಎ.ನೊಂದಿಗೆ ಹೋಲಿಸಿ ನೋಡಲಾಗಿದೆ. ಇದರ ಮೊದಲ ಫಲಿತಾಂಶಗಳಿಂದ ಅವರು ಆಧುನಿಕ ಮಾನವನಿಗಿಂತ ಆನುವಂಶಿಕವಾಗಿ ದೂರದವರೆಂದು ತಿಳಿದುಬಂದಿದೆ.
2005ರಲ್ಲಿ ವಿಜ್ಞಾನಿಗಳು ನಿಯಾಂಡರ್ತಲ್ ಮಾನವನ ಇಡೀ ಪೂರಕ ಆನುವಂಶಿಕ ಮಾಹಿತಿಯನ್ನು (ಜೀನೋಮ್) ಸರಣಿ ಮಾಡುವ ಪ್ರಾಯೋಜನೆಯನ್ನು ಕೈಗೆತ್ತಿಕೊಂಡರು. 2009ರಲ್ಲಿ ನಿಯಾಂಡರ್ತಲ್ ಮಾನವನ ಸಂಪೂರ್ಣ ಪೂರಕ ಆನುವಂಶಿಕ ಮಾಹಿತಿಯ ಮೊದಲ ಕರಡನ್ನು ಸಿದ್ಧಪಡಿಸಲಾಗಿದೆ. ಇದರ ಫಲಿತಾಂಶಗಳು ಸಹ ಈ ಎರಡು ಮಾನವ ಪ್ರಭೇದಗಳು ಆನುವಂಶಿಕ ಮಾಹಿತಿಯನ್ನು ಹಂಚಿಕೊಂಡಿವೆ ಎನ್ನುವುದನ್ನು ಸಮರ್ಥಿಸುವುದಿಲ್ಲ. ಅಲ್ಲದೆ ಈ ಎರಡು ಪ್ರಭೇದಗಳ ನಡುವಿನ ವಿಸ್ತಾರ ಆನುವಂಶಿಕ ವ್ಯತ್ಯಾಸ ನಿಯಾಂಡರ್ತಲ್ ಮಾನವ ಆಧುನಿಕ ಮಾನವನ ಪೂರ್ವಜನಾಗಿರಬಹುದು ಎನ್ನುವುದನ್ನೂ ಸಹ ಸೂಚಿಸುವುದಿಲ್ಲ ಹಾಗೂ ಅವನು ಒಂದು ಪ್ರತ್ಯೇಕ ಪ್ರಭೇದವಾಗಿದ್ದ ಎಂಬುದನ್ನೇ ಸಮರ್ಥಿಸುತ್ತವೆ. ಆದರೂ ಆಧುನಿಕ ಮಾನವನಲ್ಲಿ ಕಂಡು ಬಂದಿರುವ ಕನಿಷ್ಠ ಎರಡು ವಂಶವಾಹಿಗಳ ಮೂಲ ನಿಯಾಂಡರ್ತಲ್ ಮಾನವನೇ ಆಗಿರಬಹುದೆನ್ನುತ್ತಾರೆ ವಿಜ್ಞಾನಿಗಳು. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಲೇ ಇದೆ.
ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವರಿಬ್ಬರೂ ಪ್ರತ್ಯೇಕ ಪ್ರಭೇದಗಳೆಂದಲ್ಲಿ ಈ  ಎರಡೂ ಪ್ರಭೇದಗಳು ಒಂದೇ ಪ್ರದೇಶದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಪರಸ್ಪರ ಸ್ಪರ್ಧೆ ನಡೆಸಿದ್ದಾರೆ. ಈ ಸ್ಪರ್ಧೆ ಎಲ್ಲಿಗೆ ಮುಟ್ಟಿತೆನ್ನುವುದನ್ನು ಹೇಳುವುದು ಅಸಾಧ್ಯ. ಆದರೆ ಕ್ರಮೇಣ ಎಲ್ಲೆಲ್ಲಿ ಆಧುನಿಕ ಮಾನವ ಕಾಲಿಟ್ಟನೋ ಅಲ್ಲಲ್ಲಿಂದ ನಿಯಾಂಡರ್ತಲ್ ಮಾನವ ಕಣ್ಮರೆಯಾಗುತ್ತಾ ಹೋಗಿದ್ದಾನೆ. ಕೊನೆಗೆ ಆತ ಸಂಪೂರ್ಣವಾಗಿ ಕಣ್ಮರೆಯಾದನೆ? ಅಥವಾ ಆತ ಇನ್ನೂ ನಮ್ಮ ವಂಶವಾಹಿಗಳಲ್ಲಿ ನಮ್ಮೊಂದಿಗೆ ಜೀವಿಸಿದ್ದಾನೆಯೆ?

ಅನ್ಯಗ್ರಹ ಜೀವಿಗಳಿವೆಯೆ?


ಅನ್ಯಗ್ರಹ ಜೀವಿಗಳಿವೆಯೆ?


ಮೊದಲಿನಿಂದಲೂ ಮಾನವನನ್ನು ಒಂದು ರೀತಿಯ ವಿಚಿತ್ರದ ಒಂಟಿತನ ಕಾಡುತ್ತಿದೆ. ಅವನಲ್ಲಿನ ವೈಜ್ಞಾನಿಕ ಅರಿವು ಹೆಚ್ಚಿದಂತೆ ಅವನ ಕುತೂಹಲವೂ ಬೆಳೆಯುತ್ತಿದೆ. ಈ ವಿಶ್ವ ಅನಂತವಾದುದೂ ಹಾಗೂ ಅದರಲ್ಲಿ ಕೋಟಿ ಕೋಟಿಗಟ್ಟಲೆ ನಕ್ಷತ್ರಗಳೂ, ನಮ್ಮ ಭೂಮಿಯಂತಹ ಲೆಕ್ಕವಿಡಲಾಗದಷ್ಟು ಗ್ರಹಗಳಿವೆ ಎಂದು ತಿಳಿದ ನಂತರವಂತೂ ಅವನ ಒಂಟಿತನ ಇನ್ನೂ ಹೆಚ್ಚಾಗಿದೆ. ಈ ಅನಂತ ಅಖಂಡ ವಿಶ್ವದಲ್ಲಿ ಧೂಳಿನ ಕಣದಂತಹ ಈ ಭೂಮಿಯ ಮೇಲೆ ಮಾತ್ರ ನಾಗರಿಕತೆ ಇದೆಯೆ? ಅಥವಾ ಹಲವಾರು ಕೋಟಿ ಗ್ರಹಗಳ ಮೇಲೆ ಮಾನವನಿಗಿಂತಲೂ ಹೆಚ್ಚಿಗೆ ಬುದ್ಧಿವಂತರಾಗಿರುವ, ತಾಂತ್ರಿಕತೆ, ವಿಜ್ಞಾನದಲ್ಲಿ ಅಭಿವೃದ್ಧಿ ಹೊಂದಿರುವ ಜೀವಿಗಳಿರಬಹುದೆ? ಅಥವಾ ಈ ವಿಶ್ವದಲ್ಲಿ ಮಾನವ ಒಬ್ಬಂಟಿಯೆ? ಈ ವಿಶ್ವದಲ್ಲಿ ಇತರ ನಾಗರಿಕತೆಗಳು ಇವೆಯೆ? ಈ ಪ್ರಶ್ನೆ ಶತಶತಮಾನಗಳಿಂದ ಮಾನವನನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಇಂದಿಗೂ ಸಮರ್ಪಕ ಉತ್ತರ ದೊರೆತಿಲ್ಲ.

ಮಾನವ ಮೊದಲಿನಿಂದಲೂ ಕುತೂಹಲಜೀವಿ. ಅವನು ಕುತೂಹಲದಿಂದ ಅರಸದ ಸ್ಥಳವೇ ಇಲ್ಲ. ವಿಜ್ಞಾನ ಬೆಳೆದಂತೆ ಮಾನವ ವಿಶ್ವದಲ್ಲಿ ಇನ್ನಿತರೆಡೆ ಜೀವಿಗಳಿರಬಹುದೇ ಎಂಬ ತನ್ನ ಹುಡುಕಾಟವನ್ನು ಆರಂಭಿಸಿದ್ದಾನೆ. 'ನ್ಯಾಸಾ'ದ ವಿಜ್ಞಾನಿ ದಿವಂಗತ ಕಾರ್ಲ್ ಸಾಗನ್ ಹೇಳಿದ್ದಂತೆ ಮಾನವನ ಈ ರೀತಿಯ ಪ್ರಯತ್ನ ಒಂದು ರೀತಿಯಲ್ಲಿ ಅವನದೇ ಮೂಲಗಳ ಹುಡುಕಾಟದ ಪ್ರಯತ್ನ.
ನಮ್ಮ ಸೌರವ್ಯೂಹದ ಹೊರಗೂ ಇತರ ಗ್ರಹಗಳಿವೆ ಎಂದು ಖಾತ್ರಿಯಾದ ಮೇಲೆ ಮಾನವನ ಅನ್ವೇಷಣೆಯ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಸೂರ್ಯನಂತಹುದೇ ಮೂರು ಡಜನಿಗಿಂತ ಹೆಚ್ಚು ನಕ್ಷತ್ರಗಳಿಗೆ ಗುರು ಗ್ರಹದ ದ್ರವ್ಯರಾಶಿ ಹೊಂದಿರುವ ಗ್ರಹಗಳು ಪತ್ತೆಯಾಗಿದ್ದು ಅವುಗಳ ನಡುವೆ ಭೂಮಿಯಂತಹುದೇ ಗ್ರಹಗಳೂ ಇರುವ ಸಾಧ್ಯತೆಗಳಿವೆ. ಭೂಮಿಯ ಮೇಲಿನ ಜೀವವಿಕಾಸದ ಚರಿತ್ರೆಯನ್ನು ಅಧ್ಯಯನ ಮಾಡಿರುವ ವಿಜ್ಞಾನಿಗಳು ಜೀವವಿಕಾಸ ವಿಶ್ವದ ಇತರೆಡೆಯೂ ಏಕಾಗಿರಬಾರದು ಎನ್ನುತ್ತಾರೆ. ಭೌಗೋಳಿಕ ಸಮಯದ ಲೆಕ್ಕದಲ್ಲಿ ಭೂಮಿಯ ಮೇಲೆ ಜೀವವಿಕಾಸ ಅತ್ಯಂತ ಕ್ಷಿಪ್ರವಾಗಿಯೇ ಆಗಿದೆ. ಭೂಮಿಯ ಮೇಲೆ ದೊರಕಿರುವ ಜೀವದ ಅತ್ಯಂತ ಪುರಾತನ ಪುರಾವೆಯೆಂದರೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ದೊರಕಿರುವ 3.5 ಬಿಲಿಯನ್ ವರ್ಷಗಳ ಹಿಂದಿನ ಶಿಲೆಗಳಲ್ಲಿನ ಬ್ಯಾಕ್ಟೀರಿಯಾಗಳ ಪಳೆಯುಳಿಕೆಗಳು. ಈ ಬ್ಯಾಕ್ಟೀರಿಯಾಗಳು ಅತ್ಯಂತ ಅಭಿವೃದ್ಧಿ ಹೊಂದಿರುವುದಾಗಿರುವುದರಿಂದ ಅವೂ ಸಹ ಸುದೀರ್ಘ ವಿಕಾಸದ ಹಂತಗಳನ್ನು ಹಾದು ಬಂದಿವೆ. ಅಂದರೆ ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ಜೀವ ವಿಕಾಸ ಸುಮಾರು ನಾಲ್ಕು ಬಿಲಿಯನ್ ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ಭೂಮಿಯ ಈಗಿನ ವಯಸ್ಸು 4.6 ಬಿಲಿಯನ್ ವರ್ಷಗಳಷ್ಟಾಗಿರುವುದರಿಂದ ಭೂಮಿ ರಚನೆಯಾದ ಅತಿ ಶೀಘ್ರದಲ್ಲೇ ಇಲ್ಲಿ ಜೀವವಿಕಾಸ ಪ್ರಾರಂಭವಾಗಿದೆ. ಜೀವದ ಸೃಷ್ಟಿ ಮತ್ತು ವಿಕಾಸಕ್ಕೆ ಗ್ರಹಗಳು ಮತ್ತು ಅವುಗಳಲ್ಲಿ ಭೂಮಿಯಂತಹ ಪರಿಸರ ಅವಶ್ಯಕವಿದೆ ಎನ್ನುವುದಾದಲ್ಲಿ ವಿಶ್ವದಾದ್ಯಂತ ಜೀವವಿಕಾಸವಾಗಿರುವ ಸಾಧ್ಯತೆಗಳಿವೆ. ಅದರಿಂದಾಗಿಯೇ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಕ್ರಿಶ್ಚಿಯನ್ ಡೆ ದುವೆ, `ನಮ್ಮ ಭೂಮಿಯ ಮೇಲೆ ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಇದ್ದಂತಹ ಭೌತಿಕ ಪರಿಸ್ಥಿತಿಗಳು ಇರುವೆಡೆಯೆಲ್ಲೆಲ್ಲಾ ಜೀವ ವಿಕಾಸ ಆಗೇ ಇರುತ್ತದೆ' ಎಂದಿದ್ದಾರೆ. ಹಾಗಾದರೆ ಈ ವಿಶ್ವದಲ್ಲಿ ಅಸಂಖ್ಯಾತ ಜೀವಿಗಳಿವೆ ಎಂದು ನಂಬಲು ಕಾರಣವೂ ಇದ್ದಂತಾಗಿದೆ. ಜೀವಿಗಳು ಇದ್ದಲ್ಲಿ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಗಳೂ ಇವೆಯೆಂದು ಅರ್ಥವೆ?

ಕೆಲವು ವಿಜ್ಞಾನಿಗಳ ಪ್ರಕಾರ ಆದಿಮ ಜೀವ ಒಮ್ಮೆ ವಿಕಾಸವಾಯಿತೆಂದರೆ ಅದು ಪ್ರಾಕೃತಿಕ ಆಯ್ಕೆಯ (Natural Selection) ಮೂಲಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದೆಡೆಗೆ ವಿಕಾಸ ಹೊಂದಲೇಬೇಕು. ಹಾಗಾದರೆ ಅಂತಹ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ಅನ್ಯಗ್ರಹ ವಾಸಿಗಳು ಇರುವುದಾದಲ್ಲಿ ಅವರೇಕೆ ನಮಗೆ ಕಾಣಿಸಿಕೊಂಡಿಲ್ಲ? ವಿಜ್ಞಾನಿಗಳಾದ ಫ್ರಾಂಕ್ ಡ್ರೇಕ್ ಮತ್ತು ಕಾರ್ಲ್ ಸಾಗನ್ರವರು ನಮ್ಮ ಆಕಾಶಗಂಗೆಯಲ್ಲಿರಬಹುದಾದ ಅಭಿವೃದ್ಧಿಹೊಂದಿದ ನಾಗರಿಕತೆಗಳ ಸಂಖ್ಯೆಯನ್ನು ಅಂದಾಜುಮಾಡಲು 1976ರಲ್ಲೇ ಸಮೀಕರಣವೊಂದನ್ನು ರಚಿಸಿದರು (ಅದನ್ನು ಡ್ರೇಕ್ ಸಮೀಕರಣ ಎನ್ನುತ್ತಾರೆ). ಆ ಸಮೀಕರಣವನ್ನು ಆಕಾಶಗಂಗೆಯಲ್ಲಿರಬಹುದಾದ ಗ್ರಹಗಳ ಸಂಖ್ಯೆಯ ಅಂದಾಜು, ಆ ಗ್ರಹಗಳಲ್ಲಿ ಜೀವಿಗಳಿಗೆ ಆಸರೆ ನೀಡಬಹುದಾದಂತಹ ಗ್ರಹಗಳ ಶೇಕಡಾವಾರು ಹಾಗೂ ಅಂಥ ಗ್ರಹಗಳಲ್ಲಿ ಜೀವರಾಶಿಯನ್ನು ಹೊಂದಿದ್ದು ಅವು ತಾಂತ್ರಿಕವಾಗಿ ಮುಂದುವರಿದಿರಬಹುದಾದ ಗ್ರಹಗಳ ಶೇಕಡಾವಾರನ್ನು ಒಳಗೊಂಡಿತ್ತು. ಆಗಿನ ಅವರ ವೈಜ್ಞಾನಿಕ ಲೆಕ್ಕಾಚಾರದ ಪ್ರಕಾರ ನಮ್ಮದೇ ಹಾಲುಹಾದಿ ಆಕಾಶಗಂಗೆಯಲ್ಲಿ ಕಾರ್ಲ್ ಸಾಗನ್ರವರ ಅಂದಾಜಿನ ಪ್ರಕಾರ ಹತ್ತು ಲಕ್ಷ ನಾಗರಿಕತೆಗಳಿರಬಹುದು.

ಕೆಲವರ ಅಂದಾಜಿನ ಪ್ರಕಾರ ಈ ವಿಶ್ವದಲ್ಲಿ ಸುಮಾರು ಹತ್ತು ಲಕ್ಷ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆಗಳಿರಬಹುದು. ಹತ್ತು ಲಕ್ಷ ಎನ್ನುವುದು ಊಹೆಯ ಅತಿರೇಕ ಎನ್ನಿಸಿದರೂ, ಈ ಅಗಾಧ ಅನಂತ ವಿಶ್ವಕ್ಕೆ ಹೋಲಿಸಿದರೆ ಈ ಹತ್ತು ಲಕ್ಷದ ಸಂಖ್ಯೆ ಅತಿಯೇನಲ್ಲ. ಏಕೆಂದರೆ, ನಮ್ಮ ಭೂಮಿಯಿರುವ ಹಾಲು ಹಾದಿ ಆಕಾಶಗಂಗೆಯಲ್ಲಿಯೇ (Milky Way Galaxy) ಸುಮಾರು ಹತ್ತು ಸಾವಿರ ಕೋಟಿ ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರವೂ ಸಹ ನಮ್ಮ ಸೂರ್ಯನಂತಹುದೇ- ಅದಕ್ಕಿಂತ ಹಿರಿದಾದ ಅಥವಾ ಕಿರಿದಾದ ನಕ್ಷತ್ರಗಳು. ಅಲ್ಲದೆ ವಿಜ್ಞಾನಿಗಳ ಲೆಕ್ಕಾಚಾರಗಳ ಪ್ರಕಾರ ಈ ವಿಶ್ವದಲ್ಲಿ ಈ ತರಹೆಯ ಹತ್ತು ಸಾವಿರ ಕೋಟಿ ಆಕಾಶಗಂಗೆಗಳಿರಬಹುದು!! ಈ ರೀತಿಯ ನಮ್ಮ ಊಹೆಗೂ ನಿಲುಕದ ಅಸಂಖ್ಯ ನಕ್ಷತ್ರಗಳ ಗ್ರಹಗಳಲ್ಲಿ ಜೀವಿಗಳ ಅನ್ವೇಷಣೆ ನಡೆಸುವುದು ಸಾಗರದಲ್ಲಿ ಒಂದು ಸೂಜಿಯನ್ನು ಹುಡುಕಿದಷ್ಟೇ ಕಷ್ಟವಾದುದು. ನಾವು ಅನ್ವೇಷಿಸುತ್ತಿರುವ ನಮ್ಮ ಆಕಾಶಗಂಗೆಯಲ್ಲಿನ ಹತ್ತಿರದ ನಕ್ಷತ್ರ ಎಂದರೆ ಆ ಆಕಾಶಗಂಗೆಯ ವಿಸ್ತಾರದಲ್ಲಿ ಅದು ನಮ್ಮಿಂದ ಕೇವಲ ಶೇ.1ರಷ್ಟು ದೂರ ಮಾತ್ರವಿದೆ.

ನಮ್ಮ ಸೌರವ್ಯೂಹವಿರುವ ಹಾಲು ಹಾದಿ ಆಕಾಶಗಂಗೆ

ಕಳೆದ ಕೆಲವು ದಶಕಗಳಿಂದೀಚೆಗೆ ವಿಜ್ಞಾನ ಜಗತ್ತಿನಲ್ಲಾಗಿರುವ ಸಾಧನೆಗಳಿಂದ ಅದರಲ್ಲೂ ಬಾಹ್ಯಾಕಾಶ ವಿಜ್ಞಾನದಲ್ಲಿ 'ರೇಡಿಯೋ ಅಸ್ಟ್ರಾನಮಿ'ಯ ಅವಿಷ್ಕಾರದಿಂದಾಗಿ ಈ ವಿಶ್ವಕ್ಕೇ ಒಂದು ಕಿಟಕಿಯನ್ನು ತೆರೆದಂತಾಗಿದೆ. ಅದರ ಮೂಲಕ ನಾವು ವಿಶ್ವದ ಇನ್ನಿತರೆಡೆಗೆ ಸಂದೇಶಗಳನ್ನು ಕಳುಹಿಸಲು ಹಾಗೂ ವಿಶ್ವದ ಇನ್ನಿತರೆಡೆಗಳಿಂದ ಬರಬಹುದಾದ ಸಂದೇಶಗಳನ್ನು ಆಲಿಸಲು ಸಾಧ್ಯವಾಗುತ್ತದೆ. ರೇಡಿಯೋ ಸಂಕೇತಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ. ವಿಶ್ವದ ಇನ್ನಿತರೆಡೆ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆಗಳಿದ್ದಲ್ಲಿ ಅವರು ಈಗಾಗಲೇ ರೇಡಿಯೋ ವಿಜ್ಞಾನದ ಅವಿಷ್ಕಾರ ನಡೆಸೇ ಇರುತ್ತಾರೆ. ಇನ್ನೂ ಅಭಿವೃದ್ಧಿ ಹೊಂದಿದ ನಾಗರೀಕತೆಗಳಿದ್ದಲ್ಲಿ ಅವರು ಇತರ ಸಂಪರ್ಕ ವಿಧಾನಗಳನ್ನು ಅನುಸರಿಸಬಹುದು. ಆದರೆ ಒಂದು 'ಹಿಂದುಳಿದ ನಾಗರಿಕತೆ'ಯನ್ನು ಸಂಪರ್ಕಿಸಬೇಕಾದಲ್ಲಿ ರೇಡಿಯೋ ಸಂಕೇತಗಳನ್ನೇ ಕಳುಹಿಸಬೇಕಾಗುತ್ತದೆ.

ಅಕಸ್ಮಾತ್ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿಗಳಿದ್ದಲ್ಲಿ ಅವು ನಮ್ಮನ್ನು ಹೇಗೆ ಸಂಪರ್ಕಿಸುತ್ತವೆ?
ವಿಶ್ವದ ಬೇರೆ ನಾಗರಿಕತೆಗಳಿಂದ ಬರಬಹುದಾದ ರೇಡಿಯೋ ಸಂಕೇತಗಳನ್ನು ಆಲಿಸುವ ಸಾಧ್ಯತೆಗಳ ಬಗೆಗೆ ಮೊಟ್ಟಮೊದಲ ಬಾರಿಗೆ ಭೌತಶಾಸ್ತ್ರಜ್ಞರಾದ ಗ್ಯುಸೆಪ್ ಕೊಕ್ಕೋನಿ ಮತ್ತು ಫಿಲಿಪ್ ಮೋರಿಸನ್ `ನೇಚರ್' ಪತ್ರಿಕೆಯಲ್ಲಿ 1956ರಲ್ಲಿ ಪ್ರಕಟವಾದ ತಮ್ಮ ಪ್ರಬಂಧದಲ್ಲಿ ಚರ್ಚಿಸಿದರು. ಅದರಂತೆಯೇ ಮೊದಲ ಪ್ರಯತ್ನ 1959 ಹಾಗೂ 1960ರಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಅದನ್ನು 'ಪ್ರಾಜೆಕ್ಟ್ ಓಜ್ಮಾ' ಎಂದು ಕರೆದರು. 1992ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನ್ಯಾಸಾ' ಸಹ ಈ ರೇಡಿಯೋ ಸಂಕೇತಗಳನ್ನು ಆಲಿಸುವ ಬೃಹತ್ ಪ್ರಯತ್ನ ಆರಂಭಿಸಿತು. ಅದನ್ನು 'ಸೆಟಿ' (SETI = Search For Extra Terrestrial Intelligence) ಎಂದು ಕರೆದರು. ಅತಿ ದೊಡ್ಡ ಹಾಗೂ ಸೂಕ್ಷ್ಮ ರೇಡಿಯೋ ಟೆಲಿಸ್ಕೋಪ್ಗಳನ್ನು ಸ್ಥಾಪಿಸಿ ಅದರ ಮೂಲಕ ರೇಡಿಯೋ ಸಂಕೇತಗಳನ್ನು ಆಲಿಸುವ ಪ್ರಯತ್ನ ನಡೆಸಿದೆ. ಅಂಥದ್ದೊಂದು ಪ್ಯೋರ್ಟೊ ರಿಕೋದಲ್ಲಿ ಸ್ಥಾಪಿಸಿರುವ ರೇಡಿಯೋ ಟೆಲಿಸ್ಕೋಪ್ ವಿಶ್ವದಲ್ಲೇ ಅತಿ ದೊಡ್ಡದು ಹಾಗೂ ಅದು 1300 ಜ್ಯೋತಿರ್ವರ್ಷಗಳಷ್ಟು ದೂರ ಇರುವ ನಕ್ಷತ್ರಪುಂಜಗಳಿಂದಲೂ ಸಹ ಸಂಕೇತಗಳನ್ನು ಗ್ರಹಿಸಬಲ್ಲುದು (1 ಜ್ಯೋತಿರ್ವರ್ಷ ಎಂದರೆ ಬೆಳಕು ಸತತವಾಗಿ 1 ವರ್ಷ ಚಲಿಸುವ ದೂರ ಅಂದರೆ, 300000 ಕಿ.ಮೀ. x 365 ದಿನಗಳು x 24 ಗಂಟೆಗಳು x 60 ನಿಮಿಷಗಳು x 60 ಸೆಕೆಂಡುಗಳು = 9460800000000 ಕಿ.ಮೀ. 1300 ಜ್ಯೋತಿರ್ವರ್ಷ ಎಂದರೆ 1300 x 9460800000000 = 12299040000000000 ಕಿ.ಮೀ). ಆದರೆ ಇದುವರೆಗೂ ಯಾವುದೇ ರೇಡಿಯೋ ಸಂಕೇತಗಳನ್ನು ಗ್ರಹಿಸಲಾಗಿಲ್ಲ.
ಚಿತ್ರ 2: ನ್ಯಾಸಾದ `ಸೆಟಿ' ಕಾರ್ಯಕ್ರಮದ ರೇಡಿಯೋ ಟೆಲಿಸ್ಕೋಪ್ಗಳು

ಮಂಗಳ ಅಥವಾ ಚಂದ್ರಗ್ರಹದ ಮೇಲೆ ಜೀವಿಗಳಿವೆ ಎಂದು ನಂಬಿ ಅವುಗಳನ್ನು ಸಂಪರ್ಕಿಸುವ ಪ್ರಯತ್ನ 150 ವರ್ಷಗಳ ಹಿಂದೆಯೇ ನಡೆಯಿತು. ಜರ್ಮನಿಯ ಗಣಿತಶಾಸತ್ರಜ್ಞ ಕಾರ್ಲ್ ಗಾಸ್ (1777-1855) ಸೈಬೀರಿಯಾದಲ್ಲಿ ಪೈಥಾಗೊರಸ್ನ ಪ್ರಮೇಯದ ಯೂಕ್ಲಿಡ್ ನಿರೂಪಣೆಯನ್ನು ದೈತ್ಯಾಕಾರದಲ್ಲಿ ಚಿತ್ರರೂಪದಲ್ಲಿ ರಚಿಸಬೇಕೆಂಬ ಸಲಹೆ ನೀಡಿದ. ಅವುಗಳನ್ನು ತಮ್ಮ ದೂರದರ್ಶಕಗಳಲ್ಲಿ ನೋಡುವ ಸೆಲೆನೈಟರು (ಚಂದ್ರಗ್ರಹ ವಾಸಿಗಳು) ಅದನ್ನು ಯಾರೋ ಬುದ್ಧಿವಂತ ಜೀವಗಳು ರಚಿಸಿದ್ದಾರೆಂದು ತಿಳಿದು ನಮ್ಮೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದ.

1869ರಲ್ಲಿ ಫ್ರೆಂಚ್ ವಿಚಾರವಾದಿ ಚಾರ್ಲ್ಸ್ ಕ್ರೋಸ್ ಪ್ಯಾರಾಬೊಲಾ ಕನ್ನಡಿಗಳನ್ನು ಬಳಸಿ ಶಕ್ತಿಯುತ ವಿದ್ಯುತ್ ಬೆಳಕನ್ನು ಮಂಗಳ ಅಥವಾ ಶುಕ್ರ ಗ್ರಹಗಳ ಮೇಲೆ ಕೇಂದ್ರೀಕರಿಸಿ ಅವುಗಳನ್ನು ಆನ್- ಆಫ್ ಮಾಡಿ ಸಂಕೇತಗಳ ಮೂಲಕ ಸಂದೇಶಗಳನ್ನು ಕಳುಹಿಸಬಹುದೆಂಬ ಸಲಹೆ ನೀಡಿದ.

1896ರಲ್ಲಿ ಖ್ಯಾತ ಜೀವವಿಕಾಸ ಸಿದ್ಧಾಂತದ ರೂವಾರಿ ಚಾಲ್ಸ್ ಡಾರ್ವಿನ್ನ ನೆಂಟನಾದ ಸರ್ ಫ್ರಾನ್ಸಿಸ್ ಗಾಲ್ಟನ್ ಅನ್ಯಗ್ರಹ ಜೀವಿಗಳನ್ನು ಸಂಪರ್ಕಿಸಲು ಗಣಿತಶಾಸ್ತ್ರ ಆಧಾರಿತ ಭಾಷೆಯೊಂದನ್ನು ಆತ ರೂಪಿಸಿರುವುದಾಗಿ ಲೇಖನವೊಂದನ್ನು ಪ್ರಕಟಿಸಿದ.
1920ರ ದಶಕದಲ್ಲಿ ಮಂಗಳ ಗ್ರಹದಲ್ಲಿ ನಾಗರಿಕತೆ ಇದೆಯೆಂದು ಖಡಾಖಂಡಿತವಾಗಿ ನಂಬಿದ್ದ ಹಲವಾರು ವಿಜ್ಞಾನಿಗಳು ಅವರನ್ನು ಸಂಪರ್ಕಿಸುವ ಬಗ್ಗೆ ಯೋಜಿಸಿದರು. ರೇಡಿಯೋ ಪರಿಣಿತರಾದ ನಿಕೊಲಾ ಟೆಸ್ಲಾ, ಮಾರ್ಕೋನಿ ಮತ್ತು ಡೇವಿಡ್ ಟಾಡ್ ಮುಂತಾದವರು ಮೊದಲಿಗೆ ರೇಡಿಯೋ ತರಂಗಗಳನ್ನು ಬಳಸುವ ಬಗ್ಗೆ ಚಿಂತಿಸಿದರು. ಮಾರ್ಕೋನಿ ತನ್ನ ರೇಡಿಯೋ ಸಲಕರಣೆಯಲ್ಲಿ ಆಗಾಗ ವಿಚಿತ್ರ ಶಬ್ದಗಳನ್ನು ಆಲಿಸುತ್ತಿದ್ದು ಅದು ಬೇರೆ ಗ್ರಹದಿಂದ ಬರುತ್ತಿರುವ ಸಂದೇಶವೇ ಆಗಿದೆ ಎಂದು ನಂಬಿದ್ದಾನೆ ಎಂದು 1920, ಜನವರಿ 27ರ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಮಂಗಳ ಮತ್ತು ಇತರ ಗ್ರಹಗಳಲ್ಲಿ ಜೀವಿಗಳಿರಬಹುದೆಂದು ಆಲ್ಬರ್ಟ್ ಐನ್ಸ್ಟೈನ್ ಸಹ ನಂಬಿದ್ದರಂತೆ!

1960ರಲ್ಲಿ ಡಚ್ ಗಣಿತಶಾಸ್ತ್ರಜ್ಞ ಹ್ಯಾನ್ಸ್ ಫ್ರಾಯ್ಡೆಂತಲ್ ಗಣಿತ ತತ್ವಗಳಾಧಾರಿತ ಭಾಷೆಯೊಂದನ್ನು ಅಭಿವೃದ್ಧಿಪಡಿಸಿ ಅದನ್ನು `ಲಿಂಕೋಸ್' (ಲಿಂಗ್ವಾ ಕಾಸ್ಮಿಕಾ) ಎಂದು ಕರೆದು ಅದರ ಮೂಲಕ ಸಮಯ, ಆಕಾಶ, ದ್ರವ್ಯರಾಶಿ ಮತ್ತು ಚಲನೆಯ ತತ್ವಗಳನ್ನು ಅನ್ಯಗ್ರಹ ಜೀವಿಗಳೊಂದಿಗೆ ವಿನಿಮಯ ಮಾಡಿಕೊಳ್ಳಬೇಕೆಂದು ತಿಳಿಸಿದ.

`ಸೆಟಿ'ಯ ಸಂಶೋಧಕರ ಪ್ರಕಾರ ನಮ್ಮ ಭೂಮಿ ಮತ್ತು ಇತರ ಸೌರವ್ಯೂಹದ ಗ್ರಹಗಳಿಗೆ ಅನ್ವಯಿಸುವ ಭೌತಿಕ ನಿಯಮಗಳು ಇಡೀ ವಿಶ್ವಕ್ಕೇ ಅನ್ವಯಿಸುತ್ತದೆ. ಹಾಗಿರುವಾಗ ನಾವು ಇತರ ಅನ್ಯಗ್ರಹ ಜೀವಿಗಳನ್ನು ಗಣಿತ, ಭೌತಶಾಸ್ತ್ರ, ರಾಸಾಯನಶಾಸ್ತ್ರ ಮುಂತಾದವುಗಳ ಮೂಲಭೂತ ತತ್ವಗಳ ಮೂಲಕವೇ ಸಂಪರ್ಕಿಸಬಹುದು. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲ. ಪಿಟ್ಸ್ಬರ್ಗ್ ವಿಶ್ವವಿದ್ಯಾನಿಲಯದ ನಿಕೊಲಾಸ್ ರೆಶ್ಚೆರ್ ಎಂಬ ತತ್ವಶಾಸ್ತ್ರದ ವಿದ್ವಾಂಸರ ಪ್ರಕಾರ ಅನ್ಯಗ್ರಹ ಜೀವಿಗಳ ಅವಶ್ಯಕತೆಗಳು, ಇಂದ್ರಿಯಗಳು ಮತ್ತು ನಡತೆ ನಮಗಿಂತ ವಿಭಿನ್ನವಾಗಿಯೇ ಇರಬಹುದು. ಆ ಜೀವಿಗಳು ಎಲ್ಲಾ ಸಾರ್ವತ್ರಿಕ ನಿಯಮಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರೂ ನಮ್ಮಲ್ಲಿನ ವಿಜ್ಞಾನದಂತೆಯೇ ಅವರದೂ ಇರಲೇಬೇಕೆಂದೇನೂ ಇಲ್ಲ. ಕೃತಕ ಬುದ್ಧಿಮತ್ತೆಯ ತಜ್ಞ ಮಾರ್ವಿನ್ ಮಿನ್ಸ್ಕಿ ಹೇಳುವಂತೆ ಅನ್ಯಗ್ರಹ ಜೀವಿಗಳು ಅವು ಹೇಗೇ ವಿಕಾಸ ಹೊಂದಿರಲಿ, ಅವು ನಮ್ಮಂತೆಯೇ ಆಲೋಚಿಸುತ್ತವೆ ಎನ್ನುತ್ತಾರೆ. ಏಕೆಂದರೆ, ಅವೂ ಸಹ ನಮ್ಮಂತೆಯೇ ಸ್ಥಳ, ಸಮಯ ಮತ್ತು ಸಂಪನ್ಮೂಲಗಳಂತಹ ಪರಿಮಿತವಾಗಿರುವ ಸಮಸ್ಯೆಗಳನ್ನೇ ಎದುರಿಸಬೇಕಾಗಿರುತ್ತವೆ. ಅವುಗಳನ್ನು ನಿಭಾಯಿಸಲು ನಾವು ಕಂಡುಕೊಂಡಂತಹ ಮೂಲಭೂತ ವಿಧಾನಗಳನ್ನೇ ಅವೂ ಸಹ ಅನುಸರಿಸಬೇಕಾಗುತ್ತದೆ. ಹಾಗಾಗಿ ಅನ್ಯಗ್ರಹ ಜೀವಿಗಳೂ ಸಹ ನಾವು ಗ್ರಹಿಸಬಲ್ಲ ಚಿಂತನಾ ಕ್ರಮ ಮತ್ತು ಸಂಪರ್ಕ ವಿಧಾನಗಳನ್ನೇ ಅಭಿವೃದ್ಧಿಪಡಿಸಿಕೊಂಡಿರುತ್ತವೆ ಎನ್ನುತ್ತಾರೆ. ಇವುಗಳ ಹಿನ್ನೆಲೆಯಲ್ಲಿ ಗಣಿತಶಾಸ್ತ್ರ ಎಲ್ಲಾ ಭಾಷೆಯ ಮತ್ತು ಸಾಂಸ್ಕೃತಿಕ ಗಡಿಗಳನ್ನೂ ಮೀರಿ `ಸಾರ್ವತ್ರಿಕ ಗ್ರಹಿಕೆ'ಯ ಸಂಪರ್ಕಸಾಧನವಾಗಬಹುದು ಎನ್ನುವುದು ಅವರ ಅಭಿಪ್ರಾಯ.
ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ಅನ್ಯಗ್ರಹ ವಾಸಿಗಳು ಇರುವುದಾದಲ್ಲಿ ಅವರೇಕೆ ನಮಗೆ ಕಾಣಿಸಿಕೊಂಡಿಲ್ಲ? ಈ ಪ್ರಶ್ನೆಯನ್ನು ಖ್ಯಾತ ಅಣುಭೌತಶಾಸ್ತ್ರಜ್ಞ ಎನ್ರಿಕೊ ಫರ್ಮಿ 1950ರಲ್ಲೇ ಕೇಳಿದ್ದರು. ಈ ಪ್ರಶ್ನೆಯನ್ನೇ `ಫರ್ಮಿ ವಿರೋಧಾಭಾಸ' (ಫರ್ಮಿ ಪ್ಯಾರಾಡಾಕ್ಸ್) ಎನ್ನುತ್ತಾರೆ. ಈ ಪ್ರಶ್ನೆಗೆ ಎರಡು ಮಗ್ಗುಲುಗಳಿವೆ- ಒಂದು, ಇತರ ಅನ್ಯಗ್ರಹ ನಾಗರಿಕತೆಗಳಿಂದ ಬಂದಿರಬಹುದಾದ ರೇಡಿಯೋ ಸಂಕೇತಗಳನ್ನು ಗ್ರಹಿಸುವಲ್ಲಿ ನಮ್ಮ ವಿಫಲತೆ ಹಾಗೂ ಮತ್ತೊಂದು ಈ ಭೂಮಿಗೆ ಯಾವಾಗಲಾದರೂ ಅನ್ಯಗ್ರಹ ಜೀವಿಗಳು ಭೇಟಿ ನೀಡಿದ್ದಾರೆನ್ನಲು ಇದುವರೆಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕದಿರುವುದು.

ಇದುವರೆವಿಗೂ ಈ ಎರಡೂ ವಿಷಯಗಳಲ್ಲಿ ಯಾವುದೇ ಯಶಸ್ಸು ದೊರಕಿಲ್ಲ. ಹಾಗೆಂದ ಮಾತ್ರಕ್ಕೆ ಅನ್ಯಗ್ರಹ ಜೀವಿಗಳು ಇಲ್ಲವೇ ಇಲ್ಲ ಎಂಬ ತೀರ್ಮಾನಕ್ಕೆ ಬರಲಾಗದು, ಏಕೆಂದರೆ ನಾವಿನ್ನೂ ಈ ಹುಡುಕಾಟದ ಪ್ರಾಥಮಿಕ ಹಂತದಲ್ಲಷ್ಟೇ ಇದ್ದೇವೆ ಹಾಗೂ ನಮ್ಮ ಅನ್ವೇಷಣೆ ಈ ಅನಂತ ವಿಶ್ವದ ಸೂಜಿಮೊನೆಗಿಂತ ಚಿಕ್ಕ ಸ್ಥಳದಲ್ಲಷ್ಟೇ ನಡೆದಿದೆ. ಆದರೂ ರೇಡಿಯೋ ಸಂಕೇತ ಕಳುಹಿಸುವ ಸಾಧ್ಯತೆಯಿರುವ ನಾಗರಿಕತೆಗಳ ಬಗೆಗೆ ಕೆಲವು ಕರಡು ನಿರ್ಧಾರಗಳನ್ನಂತೂ ತೆಗೆದುಕೊಳ್ಳಬಹುದು.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪಾಲ್ ಹೋರೋವಿಟ್ಜ್ರ ಪ್ರಕಾರ ನಮ್ಮ ಹಾಲುಹಾದಿ ಆಕಾಶಗಂಗೆಯೊಳಗೆ ಸೂರ್ಯನಿಂದ 1000 ಜ್ಯೋತಿವರ್ಷ ವಿಸ್ತಾರದೊಳಗೆ ಸುಮಾರು ಹತ್ತು ಲಕ್ಷ ಸೂರ್ಯನಂತಹುದೇ ನಕ್ಷತ್ರಗಳಿವೆ, ಅಂದರೆ ಕಡಿಮೆಯೆಂದರೂ ನಮ್ಮ ಆಕಾಶಗಂಗೆಯಲ್ಲಿಯೇ ಒಂದು ಸಾವಿರ ನಾಗರಿಕತೆಗಳಿರಬಹುದು. ನಮ್ಮ ಭೂಮಿಯ ವಯಸ್ಸು 4.6 ಬಿಲಿಯನ್ ವರ್ಷಗಳಷ್ಟಾಗಿದೆ ಹಾಗೂ ಇಲ್ಲಿ ಜೀವ ವಿಕಾಸ ಏನಿಲ್ಲವೆಂದರೂ 3.5 ಬಿಲಿಯನ್ ವರ್ಷಗಳಷ್ಟು ಹಿಂದೆಯೇ ಪ್ರಾರಂಭವಾಗಿದೆ. ಆದರೆ ನಮ್ಮ ಭೂಮಿಯಿರುವ ಆಕಾಶಗಂಗೆಯ ವಯಸ್ಸು 12 ಬಿಲಿಯನ್ ವರ್ಷಗಳು. ಬಹಳ ಹಿಂದೆಯೇ ಈ ಆಕಾಶಗಂಗೆಯಲ್ಲಿ ಭೂಮಿಯಂತಹ ಗ್ರಹಗಳು ರೂಪುಗೊಂಡಿರಬಹುದು ಹಾಗೂ ಅವುಗಳಲ್ಲಿ ಜೀವವಿಕಾಸವಾಗಿ ನಾಗರಿಕತೆ ಇದ್ದಿರಬಹುದು. ಒಂದಷ್ಟು ವರ್ಷಗಳ ನಂತರ ಅವು ನಶಿಸಿಯೂ ಹೋಗಿರಬಹುದು ಅದೇ ರೀತಿ ತಡವಾಗಿ ರೂಪುಗೊಂಡ ಗ್ರಹಗಳಲ್ಲಿ ಜೀವವಿಕಾಸ ನಡೆಯುತ್ತಲೂ ಇರಬಹುದು. ಈ ರೀತಿ ನಾಗರಿಕತೆಗಳ ವಿಕಾಸ ಸಾಕಷ್ಟು ಗ್ರಹಗಳಲ್ಲಿ ನಡೆದಿರುವುದಾದರೆ ನಮಗೆ ಏಕೆ ಇದುವರೆವಿಗೂ ಅವುಗಳ ಅಸ್ತಿತ್ವದ ಬಗ್ಗೆ ಒಂದೂ ಪುರಾವೆ ದೊರೆತಿಲ್ಲ?

ಈ ವಿಶ್ವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿರುವ ನಾಗರಿಕತೆಗಳು ಇವೆಯೆಂದು ನಂಬಿದರೂ ಸಹ ಅವು ಏಕೆ ಭೂಮಿಗೆ ಇದುವರೆವಿಗೆ ಭೇಟಿ ನೀಡಿಲ್ಲ? ಈ ವಿಷಯದ ಬಗೆಗೆ 1975ರಲ್ಲೇ ಖಗೋಳಶಾಸ್ತ್ರಜ್ಞ ಮೈಕೆಲ್ ಎಚ್. ಹಾರ್ಟ್ ಮತ್ತು ಇಂಜಿನಿಯರ್ ಆದ ಡೇವಿಡ್ ವ್ಯೂಯಿಂಗ್ ತಮ್ಮ ಲೇಖನಗಳಲ್ಲಿ ಚರ್ಚಿಸಿದ್ದಾರೆ. ಹಾರುವ ತಟ್ಟೆಗಳ ಬಗೆಗಿನ ಕತೆಗಳಲ್ಲಿ ಎಷ್ಟು ಸತ್ಯವಿದೆ ಎಷ್ಟು ಪೊಳ್ಳಿದೆ ಎನ್ನುವುದರ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಾಗಿದೆ. ಅನ್ಯಗ್ರಹ ಜೀವಿಗಳು ಭೂಮಿಗೆ ಭೇಟಿ ನೀಡಿಲ್ಲ ಎನ್ನಲು ನಾಲ್ಕು ಕಾರಣಗಳನ್ನು ಹೇಳಬಹುದು: ಮೊದಲ ಕಾರಣ ಬಹುಶಃ ದೂರದ ಅಂತರಿಕ್ಷ ಯಾನ ಸಾಧ್ಯವಿಲ್ಲ. ಇದು ನಿಜವಾದರೆ ಅನ್ಯಗ್ರಹ ಜೀವಿಗಳು ನಮ್ಮಲ್ಲಿಗೆ ಬರಬೇಕೆಂದರೂ ಸಾಧ್ಯವಿಲ್ಲ. ಎರಡನೇ ಕಾರಣ, ಅನ್ಯಗ್ರಹ ಜೀವಿಗಳು ಈಗಾಗಲೇ ತಮ್ಮ ಅನ್ವೇಷಣೆ ನಡೆಸುತ್ತಿರಬಹುದು, ಆದರೆ ಅವರ ಪಯಣ ಇನ್ನೂ ಭೂಮಿಯವರೆಗೆ ತಲುಪಿಲ್ಲ. ಮೂರನೆಯ ಕಾರಣ, ದೂರದ ಅಂತರಿಕ್ಷ ಯಾನ ಸಾಧ್ಯವಿದೆ, ಆದರೆ ಅನ್ಯಗ್ರಹ ಜೀವಿಗಳು ಆ ಯಾನವನ್ನು ಕೈಗೊಳ್ಳದಿರಲು ನಿರ್ಧರಿಸಿದ್ದಾರೆ. ಕೊನೆಯ ಹಾಗೂ ನಾಲ್ಕನೆಯ ಕಾರಣ, ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಿದ್ದಾರೆ ಆದರೆ, ಅವರು ನಮ್ಮ ತಂಟೆಗೆ ಬರಬಾರದೆಂದು ನಿರ್ಧರಿಸಿದ್ದಾರೆ.

`ಫರ್ಮಿ ವಿರೋಧಾಭಾಸ'ದ ಈ ಕಾರಣಗಳೆಲ್ಲವೂ ನಿಜವಾದದ್ದಾದರೆ, ಈ ಆಕಾಶಗಂಗೆಯಲ್ಲಿನ ಅತ್ಯಂತ ಬುದ್ಧಿವಂತ, ತಾಂತ್ರಿಕವಾಗಿ ಮುಂದುವರಿದ ಜೀವಿಗಳು ನಾವು ಮಾತ್ರ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಮೊದಲ ಕಾರಣವಾದ `ಬಹುಶಃ ದೂರದ ಅಂತರಿಕ್ಷ ಯಾನ ಸಾಧ್ಯವಿಲ್ಲ' ಎನ್ನುವುದನ್ನು ತಿರಸ್ಕರಿಸಬೇಕಾಗುತ್ತದೆ, ಏಕೆಂದರೆ ನಮಗೆ ತಿಳಿದಿರುವ ಭೌತಶಾಸ್ತ್ರದ ಮತ್ತು ಇಂಜಿನಿಯರಿಂಗ್ ತತ್ವಗಳು ದೂರದ ಅಂತರಿಕ್ಷ ಯಾನವನ್ನು ನಿರಾಕರಿಸುವುದಿಲ್ಲ. ಅಂತರಿಕ್ಷ ಯುಗದ ಪ್ರಾರಂಭದ ಸಮಯಗಳಲ್ಲಿಯೇ ಬೆಳಕಿನ ವೇಗದ ಶೇ.೧೦ರಿಂದ ೨೦ರಷ್ಟು ವೇಗದಲ್ಲಿ ಪ್ರಯಾಣ ಮಾಡುವುದು ಸಾಧ್ಯವೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂದರೆ ಈ ವೇಗದಲ್ಲಿ ಪ್ರಯಾಣ ಮಾಡಿದರೆ ಕೆಲವೇ ದಶಕಗಳಲ್ಲಿ ಹತ್ತಿರದ ನಕ್ಷತ್ರಗಳನ್ನು ತಲುಪಬಹುದು. ಅದೇ ರೀತಿ ಎರಡನೇ ಕಾರಣವನ್ನೂ ತಿರಸ್ಕರಿಸಬೇಕಾಗುತ್ತದೆ. ಮುಂದುವರಿದ ರಾಕೆಟ್ ತಂತ್ರಜ್ಞಾನವನ್ನು ಹೊಂದಿರುವ ಯಾವುದೇ ನಾಗರಿಕತೆ `ಅಂತರಿಕ್ಷ ಅಲ್ಪಾವಧಿ'ಯಲ್ಲಿ ಇಡೀ ಆಕಾಶಗಂಗೆಯ ಭೂಮಿಯಂತಹ ಗ್ರಹಗಳನ್ನು ತಮ್ಮ ಕಾಲೊನಿಗಳಾಗಿ ಮಾಡಿಕೊಂಡುಬಿಡಬಹುದು. ಉದಾಹರಣೆಗೆ, ನಾಗರಿಕತೆಯೊಂದು ತನ್ನ ಜೀವಿಗಳನ್ನು ತನಗೆ ಹತ್ತಿರವಿರುವ ಗ್ರಹಗಳಿಗೆ ನೆಲೆಸಲು ಕಳುಹಿಸಿಕೊಡುತ್ತದೆ ಎಂದಿಟ್ಟುಕೊಳ್ಳೋಣ. ಆ ಹೊಸಗ್ರಹಗಳಲ್ಲಿ ನೆಲೆಗೊಂಡ ಜೀವಿಗಳು ಸ್ವತಃ ತಾವಾಗಿಯೇ ತಮ್ಮ ಜೀವಿಗಳನ್ನು ಅದಕ್ಕೆ ಹತ್ತಿರದ ಇತರ ಗ್ರಹಗಳಿಗೆ ನೆಲೆಸಲು ಕಳುಹಿಸಿಕೊಡುತ್ತದೆ. ಇದು ಹೀಗೆಯೇ ಒಂದು ಎರಡಾಗುವ, ಎರಡು ನಾಲ್ಕಾಗುವ, ನಾಲ್ಕು ಎಂಟಾಗುವ, ಎಂಟು ಹದಿನಾರಾಗುವ ಲೆಕ್ಕದಲ್ಲಿ ಪಸರಿಸುತ್ತಾ ಹೋಗುತ್ತದೆ. ಇದರಿಂದಾಗಿ ನೆಲೆಯೋಗ್ಯ ಗ್ರಹಗಳಲ್ಲೆಲ್ಲಾ ಕಾಲೊನಿಗಳು ಏರ್ಪಡುತ್ತವೆ.

ಪ್ರತಿಯೊಂದು ಕಾಲೊನಿಯ ನಡುವೆಯೂ ಸರಾಸರಿ 10 ಜ್ಯೋತಿರ್ವರ್ಷಗಳ ಅಂತರವಿದ್ದು ಹೊಸ ಕಾಲೊನಿಯೊಂದು ನೆಲೆಸಿ ಅಲ್ಲಿಂದ ಮತ್ತೊಂದು ಕಾಲೊನಿಯನ್ನು ಇತರ ಗ್ರಹಗಳಿಗೆ ಕಳುಹಿಸಿಕೊಡಲು ಸುಮಾರು 400 ವರ್ಷಗಳ ಸಮಯ ಬೇಕೆಂದಿಟ್ಟುಕೊಳ್ಳೋಣ. ನಮ್ಮ ಆಕಾಶಗಂಗೆಯು ಒಂದು ಲಕ್ಷ ಜ್ಯೋತಿರ್ವರ್ಷಗಳಷ್ಟು ವಿಸ್ತಾರವಾಗಿರುವುದರಿಂದ ಇಡೀ ಆಕಾಶಗಂಗೆ ಕಾಲೊನಿಗಳಿಂದ ನೆಲೆಸಲು ಸುಮಾರು ಐದು ದಶಲಕ್ಷ ವರ್ಷಗಳು ಬೇಕಾಗುತ್ತದೆ. ಈ ಐದು ದಶಲಕ್ಷ ವರ್ಷಗಳು ನಮ್ಮಂಥ ಹುಲುಮಾನವರಿಗೆ ಅತ್ಯಂತ ದೀರ್ಘ ಸಮಯ ಎನ್ನಿಸಿದರೂ ಅದು ಆಕಾಶಗಂಗೆಯ ವಯಸ್ಸಿನ ಕೇವಲ ಶೇ.0.05ರಷ್ಟು ಮಾತ್ರವಾಗಿದೆ. ಖಗೋಳದ ಮತ್ತು ಜೈವಿಕ ಸಮಯಾವಧಿಗಳ ಲೆಕ್ಕದಲ್ಲಿ ಇದು ಅತ್ಯಂತ `ಕ್ಷಿಪ್ರ'ವೆನ್ನಿಸುವ ಸಮಯ.
ಕಾಲೊನಿಯೊಂದು ನೆಲೆಸಿ ಅಲ್ಲಿಂದ ಮತ್ತೊಂದು ಕಾಲೊನಿಯನ್ನು ಇತರ ಗ್ರಹಗಳಿಗೆ ಕಳುಹಿಸಿಕೊಡಲು 400 ವರ್ಷಗಳ ಸಮಯ ತೀರಾ ಕಡಿಮೆಯೆನ್ನಿಸಿದರೆ, ಆ ಸಮಯವನ್ನು ಐದು ಸಾವಿರ ವರ್ಷಗಳಿಗೇರಿಸಬಹುದು, ಏಕೆಂದರೆ ಮನುಷ್ಯ ತನ್ನ ಮೊದಲ ನಗರ ನಿರ್ಮಾಣಗಳಿಂದ ಅಂತರಿಕ್ಷಯಾನದವರೆಗೆ ಅಭಿವೃದ್ಧಿಹೊಂದಲು ಅಷ್ಟೇ ಸಮಯವನ್ನು ತೆಗೆದುಕೊಂಡಿದ್ದಾನೆ. ಹಾಗಾದಲ್ಲಿ ಇಡೀ ಆಕಾಶಗಂಗೆ ಕಾಲೊನಿಗಳಿಂದ ನೆಲೆಸಲು ಸುಮಾರು ಐವತ್ತು ದಶಲಕ್ಷ ವರ್ಷಗಳು ಬೇಕಾಗುತ್ತದೆ. ಅಂದರೆ ಆ ರೀತಿ ವಿಕಾಸಗೊಂಡ ಮೊಟ್ಟ ಮೊದಲ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆ ಈ ರೀತಿ ಕಾಲೊನಿಗಳನ್ನು ಸ್ಥಾಪಿಸುವ ಕೆಲಸವನ್ನು ಇತರ ಗ್ರಹಗಳಲ್ಲಿ ಜೀವಿಗಳು ವಿಕಾಸಹೊಂದುವ ಮೊದಲೇ ನಡೆಸಿರಬೇಕು. ಅಂದರೆ ಇದು ಬಿಲಿಯಗಟ್ಟಲೆ ವರ್ಷಗಳ ಹಿಂದೆಯೇ, ಭೂಮಿಯ ಮೇಲೆ ಇನ್ನೂ ಸೂಕ್ಷ್ಮಜೀವಿಗಳು ಮಾತ್ರ ಇದ್ದಾಗ, ಹೊರಗಿನ `ಕೈಚಳಕಕ್ಕೆ' ತಾನು ತೆರೆದುಕೊಂಡಿದ್ದಾಗ ನಡೆದಿರಬೇಕು. ಆದರೂ ಭೂಮಿಯ ಮೇಲೆ ಆ ರೀತಿಯ ಕೈಚಳಕ ನಡೆದಿರುವುದಕ್ಕೆ ಯಾವುದೇ ಪುರಾವೆಯಿಲ್ಲ- ಯಾವುದೇ ಭೌತಿಕ ರಚನೆಗಳಾಗಲಿ, ರಾಸಾಯನಿಕ ಅಂಶಗಳಾಗಲಿ, ಯಾವುದೇ ಜೈವಿಕ ಪ್ರಭಾವಗಳಾಗಲೀ ಭೂಮಿಯ ಮೇಲೆ ಕಂಡುಬಂದಿಲ್ಲ. ಭೂಮಿಯ ಮೇಲೆ ಈ ರೀತಿಯ ಕೈಚಳಕದಿಂದ `ಜೀವದ ಬೀಜವನ್ನು ಬಿತ್ತಲಾಗಿದೆ' ಎಂದು ಕೆಲವು ಕೆಲವು ವಿಜ್ಞಾನಿಗಳ ಊಹಿಸುತ್ತಾರೆ. ಅದನ್ನು ನಂಬಿದರೂ ಸಹ ಆ ಬಿತ್ತನೆಯ ಸಮಯದಿಂದ ಜೀವರಾಶಿಯ ಮೇಲ್ವಿಚಾರಣೆಗೆ ಯಾವ `ರೈತ'ನೂ ಬಂದಿಲ್ಲ.

ದೂರದ ಅಂತರಿಕ್ಷ ಯಾನ ಸಾಧ್ಯವಿದೆ, ಆದರೆ ಅನ್ಯಗ್ರಹ ಜೀವಿಗಳು ಆ ಯಾನವನ್ನು ಕೈಗೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನುವ ಮೂರನೆಯ ಕಾರಣವನ್ನೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ನಕ್ಷತ್ರವೂ ಶಾಶ್ವತವಲ್ಲ- ಒಂದಲ್ಲ ಒಂದು ದಿನ ಅದು ಉರಿದು ತನ್ನಲ್ಲಿನ ಜಲಜನಕದ ಇಂಧನ ಖಾಲಿಯಾದ ಮೇಲೆ `ಕೆಂಪು ದೈತ್ಯ' (Red Giant) ಆಗಲೇ ಬೇಕು. ಸೂರ್ಯ ಕಂದಿಹೋಗಿ ಗ್ರಹ ನಾಶವಾಗುತ್ತಿರುವಾಗ ಯಾವ ತಾಂತ್ರಿಕವಾಗಿ ಮುಂದುವರಿದ ನಾಗರಿಕತೆಯೂ ತಮ್ಮ ಸಂಪೂರ್ಣ ವಿನಾಶವನ್ನು ಎದುರುನೋಡುತ್ತಾ ಕೂಡುವುದಿಲ್ಲ. ಅದು ಇತರ ಗ್ರಹಗಳತ್ತ ನೆಲೆ ಅರಸಿಹೊರಡಲೇ ಬೇಕಾಗುತ್ತದೆ. ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಿದ್ದಾರೆ ಆದರೆ, ಅವರು ನಮ್ಮ ತಂಟೆಗೆ ಬರಬಾರದೆಂದು ನಿರ್ಧರಿಸಿದ್ದಾರೆ ಎನ್ನುವ ಕೊನೆಯ ಕಾರಣದ ತಿರಸ್ಕಾರಕ್ಕೆ ನಮ್ಮನ್ನೇ ಉದಾಹರಣೆಯಾಗಿ ಕೊಡಬೇಕಾಗುತ್ತದೆ. ನಮ್ಮನ್ನು ನಾವು ತಾಂತ್ರಿಕವಾಗಿ ಮುಂದುವರಿದವರು ಎಂದು ಪರಿಗಣಿಸಿಕೊಳ್ಳುವುದಾದಲ್ಲಿ ನಾವು ನಮ್ಮಷ್ಟಕ್ಕೆ ನಾವೇ ಇದ್ದೇವೆಯೆ? ಈಗಾಗಲೇ ಚಂದ್ರನ ಮೇಲೆ ಕಾಲಿರಿಸಿದ್ದಲ್ಲದೆ, ಮಂಗಳನ ಮೇಲೂ ಕಾಲಿರಿಸಲು ಸಿದ್ಧವಾಗುತ್ತಿದ್ದೇವೆ. ಮಾನವ ನಿರ್ಮಿತ ಉಪಗ್ರಹಗಳು, ಇತರ ಉಪಕರಣಗಳು ಕುತೂಹಲದ ಅನ್ವೇಷಣೆಯಲ್ಲಿ ಸೌರವ್ಯೂಹವನ್ನೇ ದಾಟಿ ಹೊರಹೊರಟಿವೆ. ಇಂದಲ್ಲ ನಾಳೆ, ಇತರ ಗ್ರಹಗಳಲ್ಲಿ ನಮ್ಮ ಕಾಲೊನಿಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆದೇ ನಡೆಯುತ್ತವೆ. ಹಾಗಾಗಿ ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಾ ಇದ್ದರೂ ಅವರು ಸುಮ್ಮನಿರುವುದು ಸಾಧ್ಯವಿಲ್ಲ.

ಹಾಗಾದರೆ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಗಳ ವಿರಳತೆಗೆ/ಇಲ್ಲವೇ ಇಲ್ಲವೆನ್ನಲು ಕಾರಣವೇನು? ಕೆಲವು ವಿಜ್ಞಾನಿಗಳು ಹೇಳುವಂತೆ ಜೀವ ವಿಕಾಸಕ್ಕೆ ಕೆಲವು ರಾಸಾಯನಿಕಗಳು ಅತ್ಯವಶ್ಯಕ, ಅಂದರೆ ಜಲಜನಕ ಮತ್ತು ಹೀಲಿಯಂಗಿಂತ ಹೆಚ್ಚು ತೂಕದ ಧಾತು(Elements)ಗಳಾಗಿರುವಂತಹ ಪ್ರಮುಖವಾಗಿ ಇಂಗಾಲ, ಸಾರಜನಕ ಮತ್ತು ಆಮ್ಲಜನಕ ಭೂಮಿಯ ಮೇಲಿನ ಜೀವರಾಶಿಗಾಗಲೀ ಅಥವಾ ಅನ್ಯಗ್ರಹ ಜೀವರಾಶಿಗಾಗಲೀ ಅತ್ಯವಶ್ಯಕ. ಈ ಧಾತುಗಳು ನಕ್ಷತ್ರಗಳಲ್ಲಿ ನಡೆಯುವ ಅಣುಪ್ರಕ್ರಿಯೆಗಳಲ್ಲಿ ಉತ್ಪತ್ತಿಯಾಗುತ್ತವೆ. ನಮ್ಮ ನಕ್ಷತ್ರವಾದ ಸೂರ್ಯನಲ್ಲಿ ಅದರ ವಯಸ್ಸಿಗೆ ಹೋಲಿಸಿದಲ್ಲಿ ಈ ಧಾತುಗಳು ಯಥೇಚ್ಛವಾಗಿವೆ ಹಾಗಾಗಿ ಇಲ್ಲಿ ಜೀವವಿಕಾಸವಾಗಿದೆ, ಬಹಳ ಹಿಂದೆ ಇದು ಕಡಿಮೆಯಿತ್ತು, ಹಾಗಾಗಿ ಬೇರೆಡೆ ಜೀವವಿಕಾಸವಾಗಿರುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಈ ವಾದದ ಸಮರ್ಥನೆಯೂ ಕಷ್ಟ, ಏಕೆಂದರೆ ಜೀವವಿಕಾಸಕ್ಕೆ ಅವಶ್ಯಕ ಧಾತುವಿನ ಸಂದಿಗ್ಧ ಪ್ರಮಾಣ ಎಷ್ಟೆಂಬುದು ವಿಜ್ಞಾನಿಗಳಿಗೂ ತಿಳಿದಿಲ್ಲ. ಸೂರ್ಯನಲ್ಲಿರುವ ಧಾತುವಿನ ಪ್ರಮಾಣದ ಹತ್ತನೇ ಒಂದು ಭಾಗವಿದ್ದರೂ ಜೀವವಿಕಾಸ ಸಾಧ್ಯವಾಗುತ್ತದೆ ಎನ್ನುವುದಾದಲ್ಲಿ ಅಷ್ಟು ಪ್ರಮಾಣದ ಧಾತುವನ್ನು ಹೊಂದಿರುವ ಹಾಗೂ ವಯಸ್ಸಿನಲ್ಲಿ ಸೂರ್ಯನಿಗಿಂತ ಹಿರಿಯವಾದ ನಕ್ಷತ್ರಗಳು ನಮ್ಮ ಆಕಾಶಗಂಗೆಯಲ್ಲಿ ಸಾಕಷ್ಟಿದ್ದು ಅಲ್ಲಿಯೂ ಜೀವವಿಕಾಸವಾಗಬೇಕಿತ್ತು. ಹಾಗಾಗಿ ಅದೇ ಕಾರಣವಲ್ಲ ಎನ್ನುತ್ತಾರೆ ಜಾರ್ಜ್ ಮುಸರ್ ಎನ್ನುವ ವಿಜ್ಞಾನಿ.

ಅದಕ್ಕೆ ಮತ್ತೊಂದು ಉದಾಹರಣೆಯಂದರೆ ನಮಗೆ ಹತ್ತಿರವಿರುವ 47 ಉರ್ಸೆ ಮೆಜೋರಿಸ್ ಎನ್ನುವ ನಕ್ಷತ್ರ. ಆ ನಕ್ಷತ್ರ ನಮ್ಮ ಗುರುಗ್ರಹ ಗಾತ್ರದ ಗ್ರಹ ಹೊಂದಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆ ನಕ್ಷತ್ರದಲ್ಲೂ ನಮ್ಮ ಸೂರ್ಯನಲ್ಲಿರುವಂತಹ ಧಾತುಗಳು ಅದೇ ಪ್ರಮಾಣದಲ್ಲಿವೆ ಹಾಗೂ ಆ ನಕ್ಷತ್ರದ ವಯಸ್ಸು ಸುಮಾರು ಏಳು ಬಿಲಿಯನ್ ವರ್ಷಗಳೆಂದು ಅಂದಾಜುಮಾಡಲಾಗಿದೆ. ಆ ನಕ್ಷತ್ರ ಮತ್ತು ಅದರ ಗ್ರಹವನ್ನು ಸೂರ್ಯ ಮತ್ತು ಭೂಮಿಯ ವಯಸ್ಸಿಗೆ ಹೋಲಿಸಿಕೊಂಡಲ್ಲಿ ಅಲ್ಲಿ 2.5 ಬಿಲಿಯನ್ ವರ್ಷಗಳ ಹಿಂದೆಯೇ ಜೀವವಿಕಾಸವಾಗಬೇಕಾಗಿತ್ತು. ಅದೇ ತರಹದ ನಕ್ಷತ್ರ ಮತ್ತು ಗ್ರಹಗಳು ನಮ್ಮ ಆಕಾಶಗಂಗೆಯಲ್ಲಿ, ವಿಶೇಷವಾಗಿ ಅದರ ಕೇಂದ್ರಭಾಗದಲ್ಲಿ ಕೋಟಿಗಟ್ಟಲೆ ಇವೆ. ಆದುದರಿಂದ `ಫರ್ಮಿ ವಿರೋಧಾಭಾಸ'ವನ್ನು ವಿವರಿಸಲು ರಾಸಾಯನಿಕ ವಿಕಾಸ ಸಮರ್ಥವಾಗಲಾರದು.

ಭೂಮಿಯ ಮೇಲಿನ ಜೀವವಿಕಾಸದ ಚರಿತ್ರೆಯೇ ಇದಕ್ಕೆ ವಿವರಣೆ ನೀಡಬಲ್ಲುದು ಎನ್ನುತ್ತಾರೆ ಕೆಲವು ವಿಜ್ಞಾನಿಗಳು. ಭೂಮಿಯ ರಚನೆಯ ಬಹುಪಾಲು ಪ್ರಾರಂಭದಿಂದಲೇ ಜೀವಿಗಳು ಕಂಡುಬಂದಿವೆ, ಆದರೆ ಅವು ಬ್ಯಾಕ್ಟೀರಿಯಾದಂತಹ ಏಕಕೋಶಿಕ ಸೂಕ್ಷ್ಮಜೀವಿಗಳಾಗಿದ್ದವು (Single-Celled microorganisms). ಸಸ್ಯ, ಪ್ರಾಣಿಗಳಂತಹ ಬಹುಕೋಶಿಕ ಜೀವಿಗಳು 700 ಮಿಲಿಯನ್ ವರ್ಷಗಳವರೆಗೂ ಕಾಣಿಸಿಕೊಳ್ಳಲಿಲ್ಲ. ಅಂದರೆ, ಮುನ್ನೂರು ಬಿಲಿಯನ್ ವರ್ಷಗಳಿಗಿಂತ ಹೆಚ್ಚಿನ ಕಾಲ ಭೂಮಿ ಕೇವಲ ಏಕಕೋಶಿಕ ಸೂಕ್ಷ್ಮಜೀವಿಗಳ ಸಾಮ್ರಾಜ್ಯವಾಗಿತ್ತು. ಈ ದೀರ್ಘಾವಧಿಯನ್ನು ಗಮನಿಸಿದರೆ ಏಕಕೋಶಿಕ ಸೂಕ್ಷ್ಮಜೀವಿಗಳಿಂದ ಬಹುಕೋಶಿಕ ಜೀವಿಗಳ ರೂಪಾಂತರ ತೀರಾ ಸಂಕೀರ್ಣವಾದುದು. ಹಾಗಾಗಿ ಲಕ್ಷಾಂತರ ಗ್ರಹಗಳಲ್ಲಿ ಜೀವವಿಕಾಸವಾಗಿ ಏಕಕೋಶಿಕ ಸೂಕ್ಷ್ಮಜೀವಿಗಳಿದ್ದರೂ ಅವು ಬಹುಕೋಶಿಕ ಜೀವಿಗಳಾಗಿ ರೂಪಾಂತರ ಹೊಂದಿರುವ ಸಾಧ್ಯತೆಗಳು ತೀರಾ ಕಡಿಮೆ. ಬ್ಯಾಕ್ಟೀರಿಯಾಗಳು ದೀರ್ಘಕಾಲ ಭೂಮಿಯ ಮೇಲಿದ್ದು ದ್ಯುತಿಸಂಶ್ಲೇಷಣೆಯ (Photosynthesis) ಮೂಲಕ ವಾತಾವರಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡಿ ಬಹುಕೋಶಿಕ ಜೀವಿಗಳ ವಿಕಾಸಕ್ಕೆ ಅನುವುಮಾಡಿಕೊಟ್ಟಿದೆ ಹಾಗಾಗಿ ಬ್ಯಾಕ್ಟೀರಿಯಾದಂತಹ ಏಕಕೋಶಿಕ ಜೀವಿಗಳು ಸುದೀರ್ಘ ಕಾಲ ಇರುವುದು ಅತ್ಯವಶ್ಯಕ ಎನ್ನುವುದಾದರೆ ಇತರ ಗ್ರಹಗಳಲ್ಲಿಯೂ ಅವುಗಳದೇ ಸುದೀರ್ಘ ಸಮಯದ ನಂತರ ಏಕಕೋಶಿಕ ಸೂಕ್ಷ್ಮಜೀವಿಗಳು ಬಹುಕೋಶಿಕ ಜೀವಿಗಳಾಗಿ ವಿಕಾಸ ಹೊಂದಿರಬಹುದು. ಆ ರೀತಿ ವಿಕಾಸಹೊಂದಿದೆ ಎಂದಿಟ್ಟುಕೊಳ್ಳೋಣ. ಆ ರೀತಿಯ ಬಹುಕೋಶಿಕ ಜೀವಿಗಳು ಬುದ್ಧಿವಂತ ಅದರಲ್ಲೂ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ಜೀವಿಗಳಾಗುವ ಸಾಧ್ಯತೆಗಳು ಎಷ್ಟಿರುತ್ತದೆ? ಖ್ಯಾತ ವಿಜ್ಞಾನಿ ಸ್ಟೀಫನ್ ಜೇ ಗೌಲ್ಡ್ ತಮ್ಮ ಪುಸ್ತಕ ವಂಡರ್ಫುಲ್ ಲೈಫ್ನಲ್ಲಿ ಹೇಳಿರುವಂತೆ ಭೂಮಿಯ ಮೇಲೆ ಬುದ್ಧಿವಂತ ಜೀವಿಗಳ ವಿಕಾಸ ಹಲವಾರು ಅತ್ಯವಶ್ಯಕ ಹಾಗೂ ಆಕಸ್ಮಿಕ ಪರಿಸರದ ಪರಿಣಾಮಗಳಿಂದ ಉಂಟಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಭೂಮಿಯ ಮೇಲಿನ ಡೈನೊಸಾರ್ಗಳದು. ಭೂಮಿಯ ಮೇಲೆ ಸುಮಾರು 140 ದಶಲಕ್ಷ ವರ್ಷಗಳವರೆಗೆ ಅವುಗಳದೇ ಮೇಲುಗೈ ಆಗಿತ್ತು. ಅಷ್ಟಾದರೂ ಅವು ತಾಂತ್ರಿಕ ನಾಗರಿಕತೆಯಾಗಿ ಅಭಿವೃದ್ಧಿಹೊಂದಲಿಲ್ಲ. ಕೇವಲ ಒಂದು ಆಕಸ್ಮಿಕ ಪ್ರಾಕೃತಿಕ ಘಟನೆಯಿಂದಾಗಿ ಅವುಗಳ ವಿನಾಶವಾಯಿತು. ಅಕಸ್ಮಾತ್ ಅವು ವಿನಾಶ ಹೊಂದಿರದಿದ್ದಲ್ಲಿ ಜೀವವಿಕಾಸದ ಚರಿತ್ರೆಯೇ ಬೇರೆಯಾಗಿರುತ್ತಿತ್ತು. ಭೂಮಿಯ ಮೇಲಿನ ಬುದ್ಧಿವಂತ ಜೀವಿಗಳ ವಿಕಾಸಕ್ಕೆ ಬಹಳಷ್ಟು ಸಂಖ್ಯೆಯ ಆಕಸ್ಮಿಕ ಘಟನೆಗಳು ಕಾರಣವಾಗಿವೆ ಹಾಗೂ ಅವುಗಳಲ್ಲಿ ಕೆಲವು ಕಾರಣಗಳು ನಡೆಯುವುದರ ಸಾಧ್ಯತೆ ತೀರಾ ಕಡಿಮೆಯಿದೆ. ಭೌತಶಾಸ್ತ್ರಜ್ಞ ಬ್ರಾಂಡನ್ ಕಾರ್ಟರ್, `ನಮ್ಮ ಭೂಮಿಗೆ ಇದ್ದಂತಹ ಅನುಕೂಲ ಪರಿಸ್ಥಿತಿ ಮತ್ತು ಸಂದರ್ಭಗಳು ಇದ್ದರೂ ಈ ವಿಶ್ವದಲ್ಲಿ ನಮ್ಮಂತಹುದೇ ನಾಗರಿಕತೆಗಳು ಇರುವ ಸಾಧ್ಯತೆಗಳು ತೀರಾ ವಿರಳ' ಎಂದು 1983ರಲ್ಲೇ ಹೇಳಿದ್ದಾರೆ. ಅದೆಷ್ಟು ವಿರಳವೆಂದರೆ ಸ್ಟೀಫನ್ ಜೇ ಗೌಲ್ಡ್ ಹೇಳುವಂತೆ ನಮ್ಮ ಭೂಮಿಯ ಚರಿತ್ರೆಯನ್ನು ಒಂದು `ಟೇಪ್' ಎಂದುಕೊಂಡು ಅದನ್ನು `ರೀವೈಂಡ್' ಮಾಡಿ ಮತ್ತೊಮ್ಮೆ `ಪ್ಲೇ' ಮಾಡಿದರೆ ಭೂಮಿಯ ಮತ್ತು ಅದರ ಮೇಲಿನ ಜೀವರಾಶಿಯ ಚರಿತ್ರೆ ಪುನರಾವರ್ತಿತವಾಗುವುದಿಲ್ಲ, ಅದರ ಚರಿತ್ರೆ ಬೇರೊಂದು ದಿಕ್ಕಿನಲ್ಲೇ ನಡೆಯುತ್ತದೆ. ಆಗ ಭೂಮಿಯ ಮೇಲೆ ಜೀವವಿಕಾಸವಾಗುವ ಸಾಧ್ಯತೆ ಇತರ ಗ್ರಹಗಳಲ್ಲಿರುವಂತೆಯೇ ಇರುತ್ತದೆ. ಬಹುಶಃ ಜೀವವಿಕಾಸವಾಗುವುದೇ ಇಲ್ಲ! ವಿಕಾಸವಾದರೂ ಜೀವರಾಶಿ ಈಗಿರುವಂತೆಯೇ ಇರುತ್ತದೆಯೇ? ಆ ಜೀವರಾಶಿ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಯಾಗುತ್ತದೆಯೆ?

ನಮ್ಮ ಸೌರವ್ಯೂಹದಲ್ಲಿ
ನಮ್ಮ ಸೌರವ್ಯೂಹದಲ್ಲಿನ ಇತರ ಗ್ರಹಗಳು ಅಥವಾ ಅವುಗಳ ಉಪಗ್ರಹಗಳ ಮೇಲೆ ಜೀವವಿಕಾಸವಾಗಿರಬಹುದೆ? ಆ ರೀತಿ ಜೀವಿಗಳು ಇರಬಹುದಾದಲ್ಲಿ ಮಂಗಳ ಗ್ರಹ ಮತ್ತು ಗುರುಗ್ರಹದ ಉಪಗ್ರಹವಾದ ಯೂರೋಪಾದಲ್ಲಿ ಇರುವ ಅಥವಾ ಇದ್ದಿರಬಹುದಾದ ಸಾಧ್ಯತೆ ಇದೆಯೆನ್ನುತ್ತಾರೆ ವಿಜ್ಞಾನಿಗಳು.

ಇಂದಿನ ಮಂಗಳ ಗ್ರಹ ಜೀವಿಗಳಿಗೆ ಆಸರೆ ನೀಡುವ ಪರಿಸರವನ್ನು ಹೊಂದಿಲ್ಲ. ಅಲ್ಲಿನ ಸರಾಸರಿ ಉಷ್ಣಾಂಶ 220 ಕೆಲ್ವಿನ್ಗಿಂತ ಹೆಚ್ಚಾಗುವುದಿಲ್ಲ. ಅಂದರೆ ನೀರು ಹೆಪ್ಪುಗಟ್ಟುವ ಉಷ್ಣತೆಗಿಂತ 53 ಕೆಲ್ವಿನ್ ಕಡಿಮೆ. ಆದರೂ ಮಂಗಳನಲ್ಲಿ ದ್ರವ ರೂಪದ ನೀರು ಈ ಹಿಂದೆ ಇತ್ತೆಂಬುದಕ್ಕೆ ಪುರಾವೆಗಳಿವೆ. ದ್ರವ ರೂಪದ ನೀರು ಈಗಲೂ ಮಂಗಳನೊಳಗೆ ಇರಬಹುದು. ಮಂಗಳನ ಮೈಮೇಲೆ ನೀರು ಹರಿದಿತ್ತೆನ್ನುವ ಕಾಲುವೆಗಳು ಸಾಕಷ್ಟಿವೆ. 1877ರಲ್ಲೇ ಇಟಲಿಯ ವಿಜ್ಞಾನಿ ಜೇವಾನ್ನಿ ಶಿಯಾಪರೆಲ್ಲಿ ದೂರದರ್ಶಕದ ಮೂಲಕವೇ ಮಂಗಳನ ಮೇಲಿನ ಕಾಲುವೆಗಳನ್ನು ಕಂಡಿದ್ದ. 1908ರಲ್ಲಿ ಅಮೆರಿಕದ ವಿಜ್ಞಾನಿ ಪರ್ಸಿವಲ್ ಲೊವೆಲ್ ಎಂಬಾತ ಆ ಕಾಲುವೆಗಳನ್ನು ಮಂಗಳ ಗ್ರಹದ ಜೀವಿಗಳು ನೀರಾವರಿಗಾಗಿ ನಿರ್ಮಿಸಿರುವುದೆಂದೂ, ಮಂಗಳ ಗ್ರಹದಲ್ಲಿ ಜೀವಿಗಳು ಹಾಗೂ ನಾಗರಿಕತೆಯಿದೆಯೆಂದು ತನ್ನ ಕೃತಿ `ಮಾರ್ಸ್ ಅಸ್ ದ ಅಬೋಡ್ ಆಫ್ ಲೈಫ್'ನಲ್ಲಿ ತಿಳಿಸಿದ. ಮಂಗಳ ಗ್ರಹದ `ಜೀವಿ'ಗಳು ಬಹಳಷ್ಟು ಸಾಹಿತಿಗಳನ್ನು ಕಾಡಿವೆ ಹಾಗೂ ಅವುಗಳ ಬಗೆಗೆ ಸಾಕಷ್ಟು ಕತೆ, ಕಾದಂಬರಿಗಳು ಪ್ರಕಟವಾಗಿವೆ. 1897ರಲ್ಲಿ ಪ್ರಕಟವಾದ ಎಚ್.ಜಿ.ವೆಲ್ಸ್ರ ಕಾದಂಬರಿ `ದ ವಾರ್ ಆಫ್ ದ ವರ್ಲ್ಡ್ಸ್' ಬಹು ಪ್ರಖ್ಯಾತವಾದುದು. ಆ ಕಾಲ್ಪನಿಕ ಕಾದಂಬರಿಯಲ್ಲಿ ಮಂಗಳಗ್ರಹದ ಜೀವಿಗಳು ಭೂಮಿಯ ಮೇಲೆ ದಾಳಿ ನಡೆಸುತ್ತವೆ. 1938ರ ವಿಶ್ವಯುದ್ಧದ ಸಮಯದಲ್ಲಿ ಗಾಬರಿಗೊಂಡಿದ್ದ ಅಮೆರಿಕದ ಜನಕ್ಕೆ ಆರ್ಸನ್ ವೆಲ್ಸ್ ಎಂಬಾತ ತಯಾರಿಸಿದ `ದ ವಾರ್ ಆಫ್ ದ ವರ್ಲ್ಡ್ಸ್'ನ ಬಾನುಲಿ ಆವೃತ್ತಿ ಬಿತ್ತರಗೊಂಡಾಗ ಮಂಗಳ ಗ್ರಹದ ಜೀವಿಗಳು ನಿಜವಾಗಿಯೂ ಭೂಮಿಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೆದರಿ ಕಂಗಾಲಾಗಿ ಮನೆಬಿಟ್ಟು ಬೀದಿಗಳಿಗೆ ಓಡಿಬಂದಿದ್ದರು.

ಭೂಮಿಯಲ್ಲಿ ಜೀವದ ಬಿತ್ತನೆ ಮಂಗಳಗ್ರಹದಿಂದಲೇ ಬಂದಿದೆಯೆಂಬ ವಾದಗಳೂ ಇವೆ. 19ನೇ ಶತಮಾನದ ಕೊನೆಯಲ್ಲಿ ಗ್ರೀಕ್ ರಸಾಯನ ಶಾಸ್ತ್ರಜ್ಞ ಸ್ವಾಂತೆ ಅರ್ಹೇನಿಯಸ್ ತನ್ನ ಪುಸ್ತಕ `ವರ್ಲ್ಡ್ಸ್ ಇನ್ ದ ಮೇಕಿಂಗ್'ನಲ್ಲಿ ಒಂದು ವಾದ ಮುಂದಿಟ್ಟ. ಅದೇನೆಂದರೆ, ಈ ವಿಶ್ವದಲ್ಲಿ ಜೀವರಾಶಿ ಮೊದಲಿನಿಂದಲೂ ಇದ್ದೇ ಇದೆ ಹಾಗೂ ಅದು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಆಗಾಗ ವರ್ಗಾಯಿಸಲ್ಪಡುತ್ತಿರುತ್ತದೆ ಎಂಬುದು. ಇನ್ನು ಕೆಲವು ವಿಜ್ಞಾನಿಗಳು ಭೂಮಿಯಲ್ಲಿನ ಜೀವರಾಶಿಯ ಮೂಲ ಮಂಗಳಗ್ರಹವೇ ಎಂದು ಹೇಳುತ್ತಾರೆ. ಲಕ್ಷಾಂತರ ವರ್ಷಗಳ ಹಿಂದೆ ಮಂಗಳಗ್ರಹದಲ್ಲಿ ಜೀವರಾಶಿ ಇದ್ದು ಅದು ಈಗ ನಶಿಸಿಹೋಗಿದೆ. ಅಲ್ಲಿ ಜೀವರಾಶಿ ಇದ್ದಾಗ ಮಂಗಳ ಗ್ರಹಕ್ಕೆ ಯಾವುದಾದರೂ ಧೂಮಕೇತು ಅಥವಾ ನಕ್ಷತ್ರಕಾಯ ಅಪ್ಪಳಿಸಿ ಬೃಹತ್ ಪ್ರಮಾಣದಲ್ಲಿ ಮಂಗಳನ ಕಲ್ಲು ಮಣ್ಣು ಸಿಡಿಸಿರಬಹುದು. ಆ ರೀತಿ ಸಿಡಿದ ಕಲ್ಲು ಮಣ್ಣಿನ ಸ್ವಲ್ಪ ಭಾಗ ಭೂಮಿಯ ಕಕ್ಷೆಗೂ ಸೇರಿ ಅಲ್ಲೇ ಸುತ್ತುತ್ತಾ ಇದ್ದು ಕೊನೆಗೊಂದು ದಿನ ಭೂಮಿ ತಲುಪಿರಬಹುದು. ಆ ಶಿಲೆಗಳ ರಂಧ್ರಗಳಲ್ಲಿದ್ದಿರಬಹುದಾದ ಸೂಕ್ಷ್ಮಾಣುಜೀವಿಗಳೇ ಭೂಮಿಯ ಮೇಲಿನ ಜೀವವಿಕಾಸಕ್ಕೆ ನಾಂದಿಯಾಗಿರಬಹುದು. ಈಗಲೂ ಸಹ ಪ್ರತಿ ವರ್ಷ 500 ಕಿ.ಗ್ರಾಂನಷ್ಟು ಮಂಗಳ ಗ್ರಹದ ಶಿಲೆಗಳು ಭೂಮಿಯನ್ನು ತಲುಪುತ್ತಲೇ ಇವೆ. ಅದೇ ರೀತಿ ಈ ಹಿಂದೆ ಸಿಡಿದಿರಬಹುದಾದ ಭೂಮಿಯ ಶಿಲೆಗಳೂ ಮಂಗಳವನ್ನು ತಲುಪುತ್ತಲೂ ಇರಬಹುದು.


1984ರಲ್ಲಿ ಅಂಟಾರ್ಟಿಕಾದಲ್ಲಿ ಬ್ರಿಟಿಶ್ ವಿಜ್ಞಾನಿಗಳಿಗೆ ಉಲ್ಕಾಶಿಲೆಯ ಚೂರೊಂದು ಸಿಕ್ಕಿತು. ಅವರು ಅಧ್ಯಯನ ಮಾಡಿ ಆ ಚೂರು ಮಂಗಳ ಗ್ರಹದ್ದೆಂದೂ ಅದು ಮಂಗಳ ಗ್ರಹ ರಚನೆಯಾದ ಸ್ವಲ್ಪ ಸಮಯದ ನಂತರ ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಸಿಡಿದು 13000 ವರ್ಷಗಳ ಹಿಂದೆ ಭೂಮಿಗೆ ಬಿದ್ದಿದೆಯೆಂದು ತಿಳಿಸಿದರು. ಆ ಚೂರನ್ನು ಎಲಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಅದರಲ್ಲಿ ಭೂಮಿಯಲ್ಲಿನ ಬ್ಯಾಕ್ಟೀರಿಯಾ ತರಹದ ಸೂಕ್ಷ್ಮಾಣುಜೀವಿಯ `ಪಳೆಯುಳಿಕೆ' ಕಂಡುಬಂದಿತು. ಅಂತರರಾಷ್ಟ್ರೀಯ ವಾದವಿವಾದಗಳ ನಂತರ ಅದು ಯಾವುದೇ ಜೀವಿಯ ಪಳೆಯುಳಿಕೆ ಅಲ್ಲವೆಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. ಮಂಗಳ ಗ್ರಹದ ಮೇಲ್ಮೈನ ಅಧ್ಯಯನದ ಮೂಲಕ ಈಗ ಯಾವುದೇ ರೀತಿಯ ಜೀವರಾಶಿ ಮಂಗಳನಲ್ಲಿ ಇಲ್ಲವೆಂದಿದ್ದರೂ ಸಹ, ಲಕ್ಷಾಂತರ ವರ್ಷಗಳ ಹಿಂದೆ ಅಲ್ಲಿ ಜೀವರಾಶಿ ಇದ್ದಿದ್ದಿರಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ.

ಮಂಗಳನ ಅಂಗಳದಲ್ಲಿ ಜೀವರಾಶಿ ಕಾಣಸಿಗದಿದ್ದರೂ ಮಂಗಳನ ಆಳದಲ್ಲಿ ಜೀವರಾಶಿ ಇರಬಹುದಾದ ಸಾಧ್ಯತೆಯಿದೆ. ಭೂಮಿಯ ಸಾಗರ ತಳದಲ್ಲಿ, ಹಲವಾರು ಕಿಲೋಮೀಟರ್ ಆಳದಲ್ಲಿ, ಸೂರ್ಯನ ಬೆಳಕೂ ಹೊಗದ, 100 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚು ಉಷ್ಣಾಂಶವಿರುವ ಅಗ್ನಿಪರ್ವತದ ಬಿರುಕುಗಳಲ್ಲಿಯೂ ಸೂಕ್ಷ್ಮಾಣುಜೀವಿಗಳು ಜೀವಿಸುತ್ತಿರುವುದು ಕಂಡುಬಂದಿದೆ. ಅಂತಹ ಅಗ್ನಿಪರ್ವತದ ಬಿರುಕುಗಳಿಂದ ಹೊರಸೂಸುವ ಗಂಧಕ ಹಾಗೂ ಇನ್ನಿತರ ರಾಸಾಯನಗಳು ನಮಗೆ ತಿಳಿದಿರುವ ಜೀವರಾಶಿಯನ್ನು ನಾಶಮಾಡಬಲ್ಲವು. ಆದರೆ ಇಂತಹ ಪರಿಸರದಲ್ಲೂ ಸಹ ಉಷ್ಣಾಪೇಕ್ಷಿ ಮತ್ತು ಆಮ್ಲಜನಕ ಬಯಸದ ಸೂಕ್ಷ್ಮಾಣುಜೀವಿಗಳು ಬದುಕುತ್ತಿವೆ. ನಮ್ಮ ಭೂಗರ್ಭದಲ್ಲಿ, ಅಧಿಕ ಉಷ್ಣಾಂಶದ ಪರಿಸರದಲ್ಲೂ ಸೂಕ್ಷ್ಮಾಣುಜೀವಿಗಳಿವೆ. ಹಾಗಿರುವಾಗ ಮಂಗಳನ ಆಳದಲ್ಲಿಯೂ ಸೂಕ್ಷ್ಮಾಣುಜೀವಿಗಳಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಗುರುಗ್ರಹದ ಉಪಗ್ರಹವಾದ ಯೂರೋಪ ನಮ್ಮ ಚಂದ್ರನಿಗಿಂತ ಚಿಕ್ಕದಾದ ಗ್ರಹ. ಆದರೆ ಅದರ ಮೇಲ್ಮೈ 150ರಿಂದ 300 ಕಿ.ಮೀ. ದಪ್ಪದ ಹಿಮದಿಂದ ಆವೃತವಾಗಿದೆ. ಅದರ ಕೆಳಗೆ ದ್ರವ ರೂಪದ ಸಾಗರವಿರಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಆ ನೀರಕೆಳಗೆ ಆ ಉಪಗ್ರಹದ ಕೆಂದ್ರದ ಉಷ್ಣತೆಯಿಂದಾಗಿ ಅಲ್ಲಿ ಜೀವ ವಿಕಾಸವಾಗಿರುವ ಸಾಧ್ಯತೆಯಿದೆ ಎನ್ನುತ್ತಾರೆ.

ವಿಶ್ವದ ಇನ್ನಿತರೆಡೆ ಯಾವುದಾದರೂ ನಾಗರಿಕತೆ ಇರುವುದು ತಿಳಿದುಬಂದಲ್ಲಿ ನಾವು ಅಲ್ಲಿಗೆ ಹೋಗಿ ಅವರನ್ನು ಭೇಟಿಯಾಗಿ ಕೈ ಕುಲುಕಿ ಬರಲು ಸಾಧ್ಯವೆ? ಈಗ ಲಭ್ಯವಿರುವ ನಮ್ಮ ತಂತ್ರeನದಲ್ಲಿ ಅದು ಸಾಧ್ಯವೇ ಇಲ್ಲ. ಏಕೆಂದರೆ, ಈ ವಿಶ್ವದಲ್ಲಿನ ನಕ್ಷತ್ರಗಳ ನಡುವಿನ ಅಂತರ ತೀರಾ ಅಗಾಧವಾದುದು. ನಾವು ಹತ್ತಿರದ ನಕ್ಷತ್ರದ ಗ್ರಹಗಳನ್ನು ತಲುಪಲೇ ಸಾವಿರಾರು ವರ್ಷಗಳ ಸಮಯ ಬೇಕಾಗುತ್ತದೆ. ಉದಾಹರಣೆಗೆ ನೊಡಿ, ಬೀಟಾ ಆಂಡ್ರೋಮೆಡ ಎನ್ನುವ ನಕ್ಷತ್ರ ನಮ್ಮಿಂದ 75 ಜ್ಯೋತಿರ್ವರ್ಷಗಳ ದೂರದಲ್ಲಿದೆ. 75 ಜ್ಯೋತಿರ್ವರ್ಷ ಎಂದರೆ ಬಾಹ್ಯಾಕಾಶದಲ್ಲಿ ಕೇವಲ ಒಂದು ಕಲ್ಲೆಸೆತದ ದೂರ ಅಷ್ಟೆ. ಒಂದು ಜ್ಯೋತಿರ್ವರ್ಷ ದೂರ ಎಂದರೂ ನಾವು ಅದನ್ನು ಕ್ರಮಿಸಲು ಬೆಳಕಿನ ವೇಗದಲ್ಲಿ ಚಲಿಸಿದರೂ ಒಂದು ವರ್ಷ ಸಮಯ ಬೇಕಾಗುತ್ತದೆ. ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿಲೋಮೀಟರುಗಳು. ಅಷ್ಟು ವೇಗದಲ್ಲಿ ಚಲಿಸುವ ಬಾಹ್ಯಾಕಾಶ ನೌಕೆಗಳನ್ನು ನಿರ್ಮಿಸುವುದು ಕನಸಿನ ಮಾತೇ ಸರಿ.

1972ರ ಮಾರ್ಚ್ 2ರಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನ್ಯಾಸಾ' ಪಯೊನೀರ್ 10 ಎಂಬ ಬಾಹ್ಯಾಕಾಶ ನೌಕೆಯನ್ನು ಅಂತರಿಕ್ಷಕ್ಕೆ ಉಡಾಯಿಸಿತು. ಅದನ್ನು 21 ತಿಂಗಳುಗಳ ಕಾಲ ಕಾರ್ಯನಿರ್ವಹಿಸುವಂತೆ ತಯಾರಿಸಲಾಗಿತ್ತು. ಆದರೆ ಅದು 30 ವರ್ಷಗಳಿಗೂ ಹೆಚ್ಚುಕಾಲ ತನ್ನ ಕಾರ್ಯ ನಿರ್ವಹಿಸಿದೆ. ಅದರ ವಿಶೇಷತೆಯೆಂದರೆ ಆ ನೌಕೆಯೆಂದೂ ಭೂಮಿಗೆ ವಾಪಸ್ಸು ಬರುವುದಿಲ್ಲ. ಅದು ಲಕ್ಷಾಂತರ ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ, ಭೂಮಿಯಿಂದ ದೂರ ದೂರ ಚಲಿಸುತ್ತಿರುತ್ತವೆ. ನಮ್ಮ ಸೌರವ್ಯೂಹದ ಗ್ರಹಗಳನ್ನು ನಾವು ಅರಿಯಲು ಈ ನೌಕೆ ಬಹಳಷ್ಟು ಸಹಕಾರಿಯಾಗಿವೆ. ಗ್ರಹಗಳ ಗುರುತ್ವಾಕರ್ಷಣ ಶಕ್ತಿಯನ್ನೇ ತಮ್ಮ ಇಂಧನವನ್ನಾಗಿಸಿಕೊಂಡು ಆ ನೌಕೆ ಈ ಸೌರವ್ಯೂಹವನ್ನೇ ಬಿಟ್ಟು ಹೊರಹೋಗಿದೆ. ನಮ್ಮ ಸೌರವ್ಯೂಹವನ್ನು ಬಿಟ್ಟು ಹೊರಹೋದ ಮೊಟ್ಟಮೊದಲ ಮಾನವ ನಿರ್ಮಿತ ನೌಕೆ ಇದಾಗಿದೆ. ಬಹುಶಃ ಮೂರು ಲಕ್ಷ ವರ್ಷಗಳ ನಂತರ ಅದು ಯಾವುದಾದರೂ ಅನ್ಯಗ್ರಹ ನಾಗರಿಕತೆಯಿದ್ದಲ್ಲಿ ಅದಕ್ಕೆ ದೊರಕಬಹುದು. ಇಲ್ಲದಿದ್ದಲ್ಲಿ ಮುಂದಿನ ಹತ್ತು ಲಕ್ಷ ವರ್ಷಗಳಲ್ಲಿ ಅದು ಹಾಗೆಯೇ ಸುಮಾರು ಹತ್ತು ನಕ್ಷತ್ರಗಳನ್ನು ಹಾದುಹೋಗುತ್ತದೆ. ನಮ್ಮ ಸೂರ್ಯ ಇನ್ನು ಐದು ಬಿಲಿಯನ್ ವರ್ಷಗಳಲ್ಲಿ ಕೆಂಪು ಕುಬ್ಜವಾಗಿ ನಮ್ಮ ಭೂಮಿ ನಾಶವಾದಾಗ ಅದು ಇನ್ನೂ ನಮ್ಮ ಹಾಲುಹಾದಿ ಆಕಾಶಗಂಗೆಯಲ್ಲಿ ತನ್ನ ಪ್ರಯಾಣ ಮುಂದುವರಿಸುತ್ತಲೇ ಇರುತ್ತದೆ.
ಅಂತರಿಕ್ಷದಲ್ಲಿ ಪಯೊನೀರ್ 10- ಕಲಾವಿದನೊಬ್ಬನ ಕಲ್ಪನೆ

ಪಯೊನೀರ್ 10 ಬಾಹ್ಯಾಕಾಶ ನೌಕೆಯಲ್ಲಿ 6 x 9 ಅಂಗುಲದ ಚಿನ್ನ ಲೇಪಿಸಿರುವ ಅಲ್ಯೂಮಿನಿಯಂ ಬಿಲ್ಲೆಯೊಂದನ್ನು ಇರಿಸಲಾಗಿದೆ. ಅದರ ಮೇಲೆ ಗಂಡು, ಹೆಣ್ಣಿನ ಚಿತ್ರವಿದೆ (ಚಿತ್ರ ನೋಡಿ), ಸೌರವ್ಯೂಹದ ಚಿತ್ರವೂ ಇದೆ. ಮನುಷ್ಯನ ಎತ್ತರ, ಗಾತ್ರದ ಪ್ರಮಾಣ ತಿಳಿಯಲೆಂದು ಅವರ ಚಿತ್ರವನ್ನು ಪಯೊನೀರ್ ನೌಕೆಯ ಚಿತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ರಚಿಸಲಾಗಿದೆ. ಆ ನೌಕೆ ಸೌರವ್ಯೂಹ ಬಿಟ್ಟು ಹೊರಹೋಗಿ, ವಿಶ್ವದ ಬೇರೆ ಭಾಗದಲ್ಲಿ ಯಾವುದಾದರೂ ನಾಗರಿಕತೆಗೆ ಆ ನೌಕೆ ಸಿಕ್ಕಲ್ಲಿ ಅದರಲ್ಲಿನ ಈ ಬಿಲ್ಲೆಯಿಂದ ಮನುಷ್ಯನ ಬಗ್ಗೆ ಹಾಗೂ ಆ ನೌಕೆಯನ್ನು ಕಳುಹಿಸಿದವರು ಆ ಮನುಷ್ಯರೇ ಎಂಬುದನ್ನು ತಿಳಿಯಲೆಂದು ಆ ಬಿಲ್ಲೆಯನ್ನು ಇರಿಸಲಾಗಿದೆ. ಆ ಬಿಲ್ಲೆಯಲ್ಲಿನ ಮನುಷ್ಯನ ಚಿತ್ರದಲ್ಲಿ ಆತ ಒಳ್ಳೆಯದನ್ನು ಬಯಸುವ ಹಾಗೆ ಬಲಗೈಯನ್ನು ಮೇಲಕ್ಕೆ ಎತ್ತಿರುವಂತಿದೆ. ಆ ಚಿತ್ರವನ್ನು ಡಾ.ಕಾರ್ಲ್ ಸಾಗನ್ ಮತ್ತು ಡಾ.ಫ್ರಾಂಕ್ ಡ್ರೇಕ್ ವಿನ್ಯಾಸಗೊಳಿಸಿದ್ದಾರೆ ಮತ್ತು ಚಿತ್ರವನ್ನು ಲಿಂಡಾ ಸಾಲ್ಜ್ಮನ್ ಸಾಗನ್ ಬಿಡಿಸಿದ್ದಾರೆ. ಆ ಬಿಲ್ಲೆಯಲ್ಲಿನ ಗಂಡು ಮತ್ತು ಹೆಣ್ಣಿನ ಚಿತ್ರದ ಭೌತಿಕ ರೂಪವನ್ನು ನಮ್ಮ ಭೂಮಿಯ ಮೇಲಿನ ಸರಾಸರಿ ಮಾನವರ ಕಂಪ್ಯೂಟರ್ ವಿಶ್ಲೇಷಣೆಯಿಂದ ಪಡೆಯಲಾಗಿದೆ.


ಪಯೊನೀರ್ 10 ಇರಿಸಲಾಗಿರುವ ಬಿಲ್ಲೆ

ಅಕಸ್ಮಾತ್ ಆ ಬಿಲ್ಲೆ ಲಕ್ಷಾಂತರ ವರ್ಷಗಳನಂತರ ಅನ್ಯಗ್ರಹ ಜೀವಿಗಳಿಗೆ ಸಿಕ್ಕಲ್ಲಿ ಅವರು ನಮ್ಮನ್ನು ಮತ್ತು ಈ ಭೂಮಿಯನ್ನು ಅರಿತುಕೊಳ್ಳಲು ಸಾಧ್ಯವೆ? ಆ ಬಿಲ್ಲೆಯನ್ನು ಅರ್ಥಮಾಡಿಕೊಳ್ಳುವ ಮೊದಲ ಹೆಜ್ಜೆ ಜಲಜನಕದ ರಚನೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ. ಜಲಜನಕ ಈ ವಿಶ್ವದಲ್ಲಿ ಇರುವ ಅತ್ಯಂತ ಸಾಮಾನ್ಯ ಧಾತು. ಇದನ್ನು ಬಿಲ್ಲೆಯ ಎಡಭಾಗದ ಚಿತ್ರರೂಪದಲ್ಲಿ ನ್ಯೂಟ್ರಲ್ ಅಟಾಮಿಕ್ ಜಲಜನಕದ ಹೈಪರ್ಫೈನ್ ರೂಪಾಂತರವನ್ನು ತೋರಿಸಲಾಗಿದೆ. ವೈಜ್ಞಾನಿಕವಾಗಿ ಮುಂದುವರಿದ ಹಾಗೂ ಜಲಜನಕದ ಬಗ್ಗೆ ತಿಳಿದಿರುವ ನಾಗರಿಕತೆಗೆ ಈ ಸಂದೇಶ ಸುಲಭವಾಗಿ ಅರ್ಥವಾಗುತ್ತದೆ ಎನ್ನುವುದು ಇಲ್ಲಿನ ವಿಜ್ಞಾನಿಗಳ ನಂಬಿಕೆ. ಆ ಬಿಲ್ಲೆಯಲ್ಲಿ ನಮ್ಮ ಸೌರವ್ಯೂಹದ ಗ್ರಹಗಳು ಹಾಗೂ ಅದರಲ್ಲಿ ಭೂಮಿಯ ಸ್ಥಾನ, ಸೂರ್ಯನ ಸ್ಥಾನ ಇತ್ಯಾದಿಗಳ ಬಗೆಗೆ ಸಾಂಕೇತಿಕವಾಗಿ ಚಿತ್ರಿಸಲಾಗಿದೆ.

ಈ ಪಯೋನೀರ್ 10 ಕಳುಹಿಸಿದ ನಂತರ ಬಹಳಷ್ಟು ವಾದವಿವಾದಗಳು ನಡೆದವು. ಈ ಬಿಲ್ಲೆಯಲ್ಲಿ ನಮ್ಮ ಸೌರವ್ಯೂಹದ ಸ್ಥಾನವನ್ನು ಸುಲಭವಾಗಿ ತಿಳಿಸಿಕೊಟ್ಟುಬಿಟ್ಟಿದ್ದೇವೆ. ಯಾರಾದರೂ ಅನ್ಯಗ್ರಹ ಜೀವಿಗಳು ನಮಗಿಂತ ವೈಜ್ಞಾನಿಕವಾಗಿ ಮುಂದುವರಿದವರಿದ್ದಲ್ಲಿ ಅವರಿಗೆ ನಮ್ಮ ವಿಳಾಸವನ್ನು ಕೊಟ್ಟುಬಿಟ್ಟಿರುವುದರಿಂದ ಅವರು ನಮ್ಮಲ್ಲಿಗೆ ಬಂದು ನಮ್ಮ ಮೇಲೆ ದಾಳಿ ಮಾಡಬಹುದು, ಮನುಷ್ಯರನ್ನು ತಮ್ಮ ಪ್ರಯೋಗಗಳಿಗೆ ಬಲಿಪಶುಗಳನ್ನಾಗಿ ಮಾಡಿಕೊಳ್ಳಬಹುದು ಎಂದರು ಕೆಲವರು. ನಾವು ರೇಡಿಯೋ, ವೈರ್ಲೆಸ್, ಟೆಲಿವಿಶನ್, ರಾಡಾರ್ ಮುಂತಾದ ಸಂಕೇತಗಳ ಬಿತ್ತರ ಆರಂಭವಾದಾಗಲೇ ನಮ್ಮ ವಿಳಾಸವನ್ನು ಬಿಟ್ಟುಕೊಟ್ಟಿದ್ದೇವೆ. ನಮ್ಮ ಭೂಮಿಯಿಂದ ಹೊರಟ ಅವು ಈಗಾಗಲೇ ಎಲ್ಲೆಲ್ಲಿಗೆ ತಲುಪಿದೆಯೋ ಯಾರಿಗೆ ಗೊತ್ತು? ಎಂದರು ಇತರರು. ಮೊದಮೊದಲಿಗೆ ದೂರದರ್ಶನದಲ್ಲಿ ಬಿತ್ತರವಾದ `ಐ ಲವ್ ಲೂಸಿ' ಎಂಬ ದೂರದರ್ಶನದ ಕಾರ್ಯಕ್ರಮಗಳು ಈಗಾಗಲೇ ಆರು ಸಾವಿರ ನಕ್ಷತ್ರ ಸಮೂಹಗಳನ್ನು ಹಾದುಹೋಗಿದೆಯೆಂದು ನ್ಯೂ ಸೈಂಟಿಸ್ಟ್ ಪತ್ರಿಕೆ ವರದಿ ಮಾಡಿದೆ. ಆ ತರಂಗಗಳು ದೂರ ಹೋದಂತೆ ದುರ್ಬಲವಾಗುವುದಾದರೂ ಅಲ್ಲಿ ಇರಬಹುದಾದ ಅನ್ಯಜೀವಿಗಳು ನಮಗಿಂತ ತಂತ್ರಜ್ಞಾನದಲ್ಲಿ ಮುಂದುವರಿದವರಾಗಿದ್ದಲ್ಲಿ ದುರ್ಬಲ ಮತ್ತು ಕ್ಷೀಣ ತರಂಗಗಳನ್ನು ಸಹ ಗ್ರಹಿಸಬಲ್ಲರು. ಆ ಬಿಲ್ಲೆಯಲ್ಲಿ ಭೂಮಿಯ ಸ್ಥಾನವನ್ನು ಹಾಗೂ ಅದರಿಂದ ಉಪಗ್ರಹ ಹೊರಟಿದೆ ಎಂದು ತೋರಿಸಲು ಬಾಣದ ಗುರುತನ್ನು ಉಪಯೋಗಿಸಿದ್ದೇವೆ. ಭೂಮಿಯ ಮೇಲೆ ಮಾನವನ ವಿಕಾಸದ ಹಾದಿಯಲ್ಲಿ ಅವನು ಬಿಲ್ಲು ಬಾಣಗಳನ್ನು ಉಪಯೋಗಿಸಿರುವುದರಿಂದ ನಮಗೆ ಬಾಣವೆಂದರೇನೆಂದು ತಿಳಿದಿದೆ. ಆ ಬಿಲ್ಲೆಯನ್ನು ಅನುವಾದಿಸಲು ಯತ್ನಿಸುವ ಅನ್ಯಗ್ರಹ ಜೀವಿಗಳೂ ಸಹ ಅದೇ ರೀತಿ ವಿಕಾಸ ಹೊಂದಿದ್ದಲ್ಲಿ ಹಾಗೂ ಬಿಲ್ಲು ಬಾಣಗಳನ್ನು ಬಳಸಿದ್ದಲ್ಲಿ ಅವರಿಗೆ ಅದು ಅರ್ಥವಾಗುತ್ತದೆ, ಇಲ್ಲದಿದ್ದರೆ ಅರ್ಥವೇ ಆಗುವುದಿಲ್ಲ ಎಂದರು ಕೆಲವರು. ಕೆಲವು ಮಹಿಳಾ ಸಂಘಟನೆಗಳು ಆ ಬಿಲ್ಲೆಯಲ್ಲಿ ಹೆಣ್ಣಿನ ಜನನಾಂಗಗಳನ್ನು ಸರಿಯಾಗಿ ಚಿತ್ರಿಸಿಲ್ಲ, ಅನ್ಯಗ್ರಹ ಜೀವಿಗಳಿಗೆ ಹೆಣ್ಣಿನ ದೇಹರಚನೆಯ ಬಗೆಗೆ ತಪ್ಪುಕಲ್ಪನೆ ಬರಬಹುದೆಂದರು!

ಹಾರುವ ತಟ್ಟೆಗಳು
ಹಾರುವ ತಟ್ಟೆಗಳು ಅಥವಾ ಗುರುತಿಸಲಾಗದ ಹಾರುವ ವಸ್ತುಗಳ ಮೂಲಕ ಅನ್ಯಗ್ರಹ ಜೀವಿಗಳು ಭೂಮಿಗೆ ಭೇಟಿ ನೀಡುತ್ತಿದ್ದಾರೆಂದು ಬಹಳಷ್ಟು ಜನ ನಂಬಿದ್ದಾರೆ. ಎರಿಕ್ ವಾನ್ ಡೆನಿಕನ್ ಎಂಬ ಲೇಖಕನ ಪುಸ್ತಕಗಳು (ಅಕಾರ್ಡಿಂಗ್ ಟು ದ ಎವಿಡೆನ್ಸ್, ಚಾರಿಯಟ್ಸ್ ಆಫ್ ಗಾಡ್ಸ್, ಮುಂತಾದವು) ಬಹಳಷ್ಟು ಜನಪ್ರಿಯವಾಗಿ ಚರ್ಚೆಗೆ ಗ್ರಾಸವಾಗಿದ್ದವು. ಆತನ ಪ್ರಕಾರ ಭೂಮಿಯಲ್ಲಿ ಜೀವ ಬಿತ್ತಿರುವುದೇ ಅನ್ಯಗ್ರಹ ಜೀವಿಗಳು. ಈಗಲೂ ಆ ಜೀವಿಗಳುಅವರು ಭೂಮಿಗೆ ಭೇಟಿ ನೀಡುತ್ತಲೇ ಇವೆದ್ದಾರೆ. ಅಲ್ಲದೆ ಇಲ್ಲಿನ ಮಹಾನ್ ರಚನೆಗಳಾದಂತಹ ಈಜಿಪ್ಟ್ನ ಪಿರಮಿಡ್ಗಳು, ಲ್ಯಾಟಿನ್ ಅಮೆರಿಕಾದಲ್ಲಿನ ಪಿರಮಿಡ್ಗಳು, ತಂಜಾವೂರಿನ ಬೃಹದೀಶ್ವರ ದೇವಾಲಯ, ಕಾಶ್ಮೀರದ ಸೂರ್ಯದೇವಾಲಯ, ನಾಜ್ಕಾದ ಬೃಹತ್ ರೇಖಾ ಚಿತ್ರಗಳು, ಆ ರೀತಿಯ ಇನ್ನೂ ಹತ್ತು ಹಲವಾರು ರಚನೆಗಳನ್ನು ಅನ್ಯಗ್ರಹ ಜೀವಿಗಳ ಸಹಾಯದಿಂದಲೇ ನಿರ್ಮಿಸಲಾಗಿದೆ, ಇಲ್ಲದಿದ್ದಲ್ಲಿ ಮೂರು ನಾಲ್ಕು ಸಾವಿರ ವರ್ಷಗಳ ಹಿಂದಿನ ಜನರಿಗೆ ಅವುಗಳನ್ನು ನಿರ್ಮಿಸುವ ತಂತ್ರಜ್ಞಾನವೆಲ್ಲಿತ್ತು ಎಂದು ಪ್ರಶ್ನಿಸುತ್ತಾನೆ ಆತ. ಆದರೆ ಎರಿಕ್ ವಾನ್ ಡೆನಿಕನ್ನ ವಾದಗಳೆಲ್ಲವನ್ನೂ ತಿರಸ್ಕರಿಸುವ ವಿಜ್ಞಾನಿಗಳು ಆತ ಡಾರ್ವಿನ್ನ ಜೀವವಿಕಾಸವಾದವನ್ನು ಸುಳ್ಳು ಎಂದು ಹೇಳುವ ಹಾಗೂ ಧಾರ್ಮಿಕ ಸೃಷ್ಟಿವಾದವನ್ನು ಪುಷ್ಟೀಕರಿಸುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದಾನೆ ಎನ್ನುತ್ತಾರೆ. ಎರಿಕ್ ವಾಕ್ ಡೆನಿಕನ್ನ ಬಹುಪಾಲು ಎಲ್ಲಾ ವಾದಗಳನ್ನು ಸುಳ್ಳೆಂದು ವಿಜ್ಞಾನಿಗಳು ವೈಜ್ಞಾನಿಕವಾಗಿ ರುಜುವಾತುಪಡಿಸಿದ್ದಾರೆ. ತಾನು ನೀಡಿದ್ದ ಎಷ್ಟೋ ಪುರಾವೆಗಳು ಸುಳ್ಳೆಂದು ಆತನೇ ಸ್ವತಃ ಒಪ್ಪಿಕೊಂಡಿದ್ದಾನೆ.

ಹಾರುವ ತಟ್ಟೆಗಳನ್ನು ಕಂಡವರಿದ್ದಾರೆಂದೂ, ಹಾಗೂ ಹಾರುವ ತಟ್ಟೆಗಳಲ್ಲಿನ ಅನ್ಯಗ್ರಹ ಜೀವಿಗಳು ಮನುಷ್ಯರನ್ನು ಅಪಹರಿಸಿ ಅವರ ಪ್ರಯೋಗಗಳಲ್ಲಿ ಬಳಸಿಕೊಂಡಿದ್ದಾರೆಂದು ಹೇಳುವ ವರದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ವಿಜ್ಞಾನಿಗಳ ಪ್ರಕಾರ ಆ ರೀತಿಯ `ಹಾರುವ ತಟ್ಟೆಗಳನ್ನು' ಹಾಗೂ ಅಪಹರಣದ ವರದಿಗಳನ್ನು ವೈಜ್ಞಾನಿಕವಾಗಿ ವಿವರಿಸಿ ಹೇಳಬಹುದು. ಬಹಳಷ್ಟು ಸಾರಿ ಹಾರುವ ತಟ್ಟೆಗಳು ವಿಜ್ಞಾನಿಗಳು ಹಾರಿಸಿರುವ ಉಪಗ್ರಹಗಳು, ವಿಮಾನಗಳು, ವೈಜ್ಞಾನಿಕ ಪ್ರಯೋಗಗಳ ಬಲೂನುಗಳು, ಕೆಲವೊಮ್ಮೆ ಮೋಡಗಳ ರಚನೆಗಳು ಇತ್ಯಾದಿಗಳಾಗಿರುತ್ತವೆ. ಆದರೂ ಸದ್ಯಕ್ಕೆ ಇನ್ನೂ ವಿವರಿಸಲಾಗದ `ಹಾರುವ ತಟ್ಟೆ'ಗಳ ವೀಕ್ಷಣೆಗಳು ಮತ್ತು ಅನುಭವಗಳೂ ಇವೆ. ಅತಿ ಹೆಚ್ಚು `ಗುರುತಿಸಲಾಗದ ಹಾರುವ ತಟ್ಟೆ'ಗಳ ವೀಕ್ಷಣೆಗಳು ಅಮೆರಿಕ ಮತ್ತು ರಷ್ಯಾಗಳ ನಡುವಿನ ಶೀತಲ ಸಮರದ ಸಮಯದಲ್ಲಿ ಆಗಿರುವುದು ಸೋಜಿಗದ ವಿಷಯ.

ಹಾರುವ ತಟ್ಟೆಗಳ ಬಗೆಗೆ ಮೊದಲು ವರದಿಯಾಗಿದ್ದು ಜೂನ್ 1947ರಲ್ಲಿ. ಕೆನೆತ್ ಅರ್ನಾಲ್ಡ್ ಎಂಬ ಪೈಲಟ್ ಒಂದು ದಿನ ವಾಷಿಂಗ್ಟನ್ನಲ್ಲಿನ ಮೌಂಟ್ ರೈನಿಯರ್ ಬಳಿ ನಿಗೂಢ ಹೊಳೆಯುವ ತಟ್ಟೆಗಳಂತಹ ಆಕಾರಗಳನ್ನು ಕಂಡ. ಅದನ್ನು ವರದಿ ಮಾಡಿದ ಪತ್ರಿಕೆಗಳು `ಹೊಳೆಯುವ ತಟ್ಟೆಗಳಂತಹ ಆಕಾರ' ಎಂದು ಬರೆದದ್ದರಿಂದ ಹಾರುವ ತಟ್ಟೆಗಳು ಎನ್ನುವ ಪದ ಉಳಿದುಕೊಂಡುಬಂದಿದೆ. 1948ರಲ್ಲಿ ಅಮೆರಿಕದ ಏರ್ ಫೋರ್ಸ್ ಹಾರುವ ತಟ್ಟೆಗಳ ಹಲವಾರು ವರದಿಗಳ ಬಗೆಗೆ ತನಿಖೆ ಆರಂಭಿಸಿತು. ಹಲವಾರು ಹೆಸರುಗಳನ್ನು ಬದಲಿಸಿಕೊಂಡ ಆ ತನಿಖೆ ಕೊನೆಗೆ ಪ್ರಾಜೆಕ್ಟ್ ಬ್ಲೂ ಬುಕ್ ಹೆಸರಿನಲ್ಲಿ ಮುಂದುವರಿಯಿತು. 1952ರಿಂದ 1969ರವರೆಗಿನ 12618 ವರದಿಗಳ ಬಗೆಗೆ ತನಿಖೆ ನಡೆಸಿ 1969ರ ಡಿಸೆಂಬರ್ನಲ್ಲಿ ಆ ತನಿಖೆಯನ್ನು ಅಂತ್ಯಗೊಳಿಸಿತು. ಅದು ಸಲ್ಲಿಸಿದ ವರದಿಯ ಸಾರಾಂಶ ಈ ಮುಂದಿನಂತಿದೆ:
(1) ಕಂಡ ಯಾವುದೇ ಹಾರುವ ತಟ್ಟೆಗಳ ವರದಿಗಳು ರಾಷ್ಟ್ರೀಯ ಸುಭದ್ರತೆಗೆ ಯಾವುದೇ ರೀತಿಯಲ್ಲಿ ಕಂಟಕಕಾರಿಯೆಂದು ಕಂಡುಬಂದಿಲ್ಲ. (2) `ಗುರುತಿಸಲಾಗದ' ಎಂದಿರುವ ಯಾವುದೇ ವೀಕ್ಷಣೆ ಅಥವಾ ಅನುಭವ ಪ್ರಸ್ತುತ ತಾಂತ್ರಿಕ ಮತ್ತು ವೈಜ್ಞಾನಿಕ ಗ್ರಹಿಕೆಗೆ ಅಥವಾ ವಿವರಣೆಗೆ ನಿಲುಕದಂಥವಲ್ಲ (3) `ಗುರುತಿಸಲಾಗದ' ಎಂದಿರುವ ಯಾವುದೇ ಅಂತರಿಕ್ಷ ನೌಕೆಗಳ ವೀಕ್ಷಣೆ ಅನ್ಯಗ್ರಹ ಜೀವಿಗಳದ್ದು ಎನ್ನಲು ಯಾವುದೇ ಪುರಾವೆಗಳಿಲ್ಲ.

ಪ್ರಾಜೆಕ್ಟ್ ಬ್ಲೂ ಬುಕ್ನಲ್ಲಿ 12618 ವೀಕ್ಷಣೆಗಳನ್ನು ಅಧ್ಯಯನ ಮಾಡಿದ್ದರೂ ಆ ಪ್ರಾಜೆಕ್ಟ್ ಅಂತ್ಯಗೊಂಡಾಗ ಅವುಗಳಲ್ಲಿ 701 ವೀಕ್ಷಣೆಗಳು `ವಿವರಿಸಲಾಗದೆ' ಉಳಿದಿದ್ದವು. `ಗುರುತಿಸಲಾಗದ ಹಾರುವ ತಟ್ಟೆ'ಗಳ ವೀಕ್ಷಣೆಗಳನ್ನು ತರ್ಕಬದ್ಧವಾಗಿ ವಿವರಿಸಲೂ ಸಾಧ್ಯವಿಲ್ಲವೆನ್ನುತ್ತಾರೆ ವಿಜ್ಞಾನಿಗಳು. ಈ ವಿಶ್ವದ ಇತರೆಡೆ ಜೀವ ವಿಕಾಸವಾಗಿರಬಹುದು ಹಾಗೂ ತಾಂತ್ರಿಕವಾಗಿ ಮುಂದುವರಿದ ನಾಗರಿಕತೆಗಳಿರಬಹುದು. ಆದರೆ ಅಂಥಹ ಜೀವಿಗಳು ಭೂಮಿಗೆ ಭೇಟಿ ನೀಡಿದಾಗ ಆ ರೀತಿಯ ವೈಜ್ಞಾನಿಕವಾಗಿ ಮುಂದುವರಿದ ನಾಗರಿಕತೆ ಈ ರೀತಿ ಕಳ್ಳಕಳ್ಳಗೆ ವಿಜ್ಞಾನಿಗಳನ್ನು ಬಿಟ್ಟು ಇತರರ ಕಣ್ಣಿಗೆ ಬೀಳುವುದೇಕೆ? ನಾವು ಅರ್ಥಮಾಡಿಕೊಂಡಿರುವ ಭೌತಶಾಸ್ತ್ರದ ತತ್ವಗಳ ಅನ್ವಯ ಈ ರೀತಿಯ ಅಂತರಿಕ್ಷ ಯಾನ ಅತ್ಯಂತ ಕಷ್ಟಸಾಧ್ಯವಾದದ್ದು. ಆ ರೀತಿಯ ಯಾನವನ್ನು ಸಾಧಿಸಿರುವ ಅನ್ಯಗ್ರಹ ಜೀವಿಗಳು ಭೂಮಿಗೆ ಬರದೆ ತಾವು ಇರುವೆಡೆಯಿಂದಲೇ ನಮ್ಮ ಅರಿವಿಗೆ ಬರದಂತೆ ಭೂಮಿಯನ್ನು ಹಾಗೂ ಭೂಮಿಯ ಮೇಲಿನ ಜೀವರಾಶಿಯನ್ನು ಅಧ್ಯಯನ ಮಾಡಬಲ್ಲ ತಂತ್ರಜ್ಞಾನವನ್ನು ಹೊಂದಿರುತ್ತವೆ. ಆದರೆ ಅವರು ನಮ್ಮ ಬಳಿಗೆ ಬಂದು ನಮ್ಮನ್ನು ಹತ್ತಿರದಿಂದಲೇ ಅಧ್ಯಯನ ಮಾಡಬೇಕಾದಲ್ಲಿ ಖಂಡಿತವಾಗಿಯೂ ಅವರು ಜನನಿಬಿಡ ಪ್ರದೇಶಗಳಲ್ಲಿ ಇಳಿದು ಬರುತ್ತಿದ್ದರು; ವಿಜ್ಞಾನಿಗಳು ಅಥವಾ ಇತರ ಅಧಿಕಾರವಿರುವವರನ್ನು ಸಂಪರ್ಕಿಸುತ್ತಿದ್ದರು. ಯಾವುದೇ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿ ಆ ರೀತಿ ಮಾಡಿಲ್ಲ. ಏಕೆ ಮನುಷ್ಯರೆಂದರೆ ಅವುಗಳಿಗೆ ಅಷ್ಟು ನಿರಾಸಕ್ತಿಯೆ?

ಒಟ್ಟಾರೆಯಾಗಿ ಮನುಷ್ಯನಿಗೆ ಮೊದಲಿನಿಂದಲೂ ನಿಗೂಢಗಳೆಂದರೆ ಎಲ್ಲಿಲ್ಲದ ಆಸಕ್ತಿ. ಮ್ಯಾಜಿಕ್ ಶೋನಲ್ಲಿ ಅದು `ಕಣ್ಣುಕಟ್ಟೆಂದು' ಹಾಗೂ ಅದು ಯಕ್ಷಿಣಿಗಾರನ `ಕೈಚಳಕ'ವೆಂದು ತಿಳಿದಿದ್ದರೂ ಅದನ್ನು ಮಕ್ಕಳ ಜೊತೆಗೆ ದೊಡ್ಡವರೂ ಸಹ ನೋಡಿ ನಿಬ್ಬೆರಗಾಗುತ್ತಾರೆ. ಅದೇ ರೀತಿ ಇಂದಿಗೂ ಕತೆಗಾರರು ಇಲ್ಲದ ದೆವ್ವ, ಪ್ರೇತಾತ್ಮಗಳ, ನಿಗೂಢಗಳ ಕತೆ ಹೇಳಿ ಕೇಳುಗರ, ಓದುಗರನ್ನು ಕುತೂಹಲದ, ಹೆದರಿಕೆಯ ಜಗತ್ತಿನೊಳಗೆ ಕರೆದೊಯ್ಯುತ್ತಾರೆ. ಅದೇ ರೀತಿ `ಗುರುತಿಸಲಾಗದ ಹಾರುವ ತಟ್ಟೆ'ಗಳ ಕತೆಗಳು ಜನರ ನಿಗೂಢತೆಯ, ಕುತೂಹಲದ ದಾಹವನ್ನು ತಣಿಸುತ್ತಿವೆ.

ಅನ್ಯಗ್ರಹ ಜೀವಿಗಳು ನೋಡಲು ಹೇಗಿರಬಹುದು?
ಅನ್ಯಗ್ರಹ ಜೀವಿಗಳು ಇರುವುದಾದಲ್ಲಿ ಅವು ಹೇಗಿರಬಹುದೆಂಬುದು ಯಾರಿಗೂ ತಿಳಿದಿಲ್ಲ. ಅನ್ಯಗ್ರಹ ಜೀವಿಗಳ ಬಗೆಗೆ ಬಂದಿರುವ ಹಲವಾರು ಚಿತ್ರಗಳಲ್ಲಿ ಅನ್ಯಗ್ರಹ ಜೀವಿಗಳನ್ನು ಅವುಗಳನ್ನು ಎಷ್ಟೇ ಚಿತ್ರವಿಚಿತ್ರವಾಗಿ ಚಿತ್ರಿಸಿದ್ದರೂ ಅವು ಮೂಲಭೂತವಾಗಿ ಬಹುಪಾಲು ಮನುಷ್ಯರನ್ನೇ ಹೋಲುತ್ತವೆ- ಅವುಗಳಿಗೆ ಕಣ್ಣುಗಳಿರುತ್ತವೆ, ಕೈಕಾಲುಗಳಿರುತ್ತವೆ, ಹಲ್ಲುಗಳಿರುತ್ತವೆ, ಕ್ರೂರಿಗಳಾಗಿರುತ್ತವೆ - ಅಂದರೆ ಅನ್ಯಗ್ರಹ ಜೀವಿಗಳು ನಮ್ಮ ಹಾಗೆಯೇ ಹಾಗೂ ಈ ಭೂಮಿಯ ಮೇಲೆ ವಿಕಾಸಗೊಂಡಿರುವ ಎಲ್ಲ ಜೀವಿಗಳಲ್ಲಿಯೂ ನಾವೇ ಸರ್ವೋತ್ತಮರು ಎನ್ನುವಂತೆ ನಮ್ಮ ರೀತಿಯೇ ಇರಬೇಕೆಂದು ನಾವು ನಿರ್ಧರಿಸಿಕೊಂಡಂತಿದೆ. ಅನ್ಯಗ್ರಹ ಜೀವಿಗಳ ಬಗೆಗೆ ಬಂದ ಮೊಟ್ಟ ಮೊದಲ ಚಲನಚಿತ್ರ ಹ್ಯಾರಿ ಬೇಟ್ಸ್ ಎಂಬಾತನ ಸಣ್ಣ ಕತೆಯೊಂದನ್ನು ಆಧರಿಸಿ 1951ರಲ್ಲಿ ತೆಗೆದ `ದ ಡೇ ದ ಅರ್ಥ್ ಸ್ಟುಡ್ ಸ್ಟಿಲ್'. ಅದನ್ನೇ 2008ರಲ್ಲಿ ಕೊಂಚ ಆಧುನಿಕೀಕರಿಸಿ ತೆಗೆಯಲಾಗಿದೆ. ಅದರಲ್ಲಿ ಭೂಮಿಗೆ ಅನ್ಯಗ್ರಹ ಜೀವಿಗಳ ಪ್ರತಿನಿಧಿಯಾಗಿ ಬರುವ `ಹ್ಯೂಮನಾಯ್ಡ್' ಕ್ಲಾಟು ಮತ್ತು ರೋಬೋ ಭೂಮಿಯ ಮೇಲೆ ಆಕ್ರಮಣ ಮಾಡುವುದಿಲ್ಲ, ಬದಲಿಗೆ ಮಾನವರು ಅಣ್ವಸ್ತ್ರಗಳ ಅನ್ವೇಷಣೆಯಿಂದಾಗಿ ಹಾಗೂ ಪರಸ್ಪರ ದ್ವೇಷದಿಂದಾಗಿ ವಿನಾಶದ ಅಂಚಿನಲ್ಲಿದ್ದು ಶಾಂತಿಯುತವಾಗಿ ಬದುಕಲು ತಿಳಿಸಲು ಬಂದಿರುತ್ತದೆ; ಯಾವುದೇ `ನಾಗರಿಕ' ಆಕಾಶಗಂಗೆಯಲ್ಲಿ ಮಾನವರಂತಹ ಆಕ್ರಮಣಶೀಲ ಪ್ರಭೇದಗಳಿಗೆ ಸ್ಥಾನವಿಲ್ಲವೆಂದು ಎಚ್ಚರಿಕೆ ನೀಡಲು ಬಂದಿರುತ್ತದೆ.

ಎಚ್.ಜಿ.ವೆಲ್ಸ್ರವರ 1898ರ `ವಾರ್ ಆಫ್ ದ ವರ್ಲ್ಸ್ಡ್' ಕಾದಂಬರಿ ಆಧರಿಸಿ ಅದೇ ಹೆಸರಿನ ಚಲನಚಿತ್ರಗಳು ಬಂದಿವೆ. ಭೂಮಿಯ ಮೇಲೆ ಆಕ್ರಮಣ ನಡೆಸುವ ಮಂಗಳಗ್ರಹ ವಾಸಿಗಳು ಕೊನೆಗೆ ಭೂಮಿಯ ಮೇಲಿನ ಬ್ಯಾಕ್ಟೀರಿಯಾಗಳ ಸೋಂಕಿಗೆ ಬಲಿಯಾಗಿ ನಾಶಹೊಂದುತ್ತವೆ. ಸ್ಟೀವನ್ ಸ್ಪಿಲ್ಬರ್ಗ್ನ `ಕ್ಲೋಸ್ ಎನ್ಕೌಂಟರ್ಸ್ ಆಫ್ ದ ಥರ್ಡ್ ಕೈಂಡ್' ಮತ್ತು `ಇ.ಟಿ. ದ ಎಕ್ಸ್ಟ್ರಾಟೆರೆಸ್ಟ್ರಿಯಲ್' ಅನ್ಯಗ್ರಹ ಜೀವಿಗಳ ಬಗೆಗಿನ ಅತ್ಯಂತ ಜನಪ್ರಿಯ ಚಲನಚಿತ್ರಗಳು. ಅನ್ಯಗ್ರಹ ಜೀವಿಗಳನ್ನು ಅತ್ಯಂತ ಕ್ರೂರವಾಗಿ ಚಿತ್ರಿಸಿರುವ ಚಲನಚಿತ್ರಗಳೆಂದರೆ `ಏಲಿಯನ್', `ಪ್ರಿಡೇಟರ್' ಮುಂತಾದವು.

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅನ್ಯಗ್ರಹ ಜೀವಿಗಳು ಭೂಮಿಗೇನಾದರೂ ಭೇಟಿ ನೀಡಿದಲ್ಲಿ ನಾವು ಅತ್ಯಂತ ಎಚ್ಚರದಿಂದಿರಬೇಕೆಂದಿದ್ದಾರೆ. ಅಂತಹ ಜೀವಿಗಳು ಭೂಮಿಯವರೆಗೂ ಬರಬಲ್ಲವರೆಂದರೆ ಅವರದು ತಾಂತ್ರಿಕವಾಗಿ ಅತ್ಯಂತ ಮುಂದುವರಿದ ನಾಗರಿಕತೆಯೇ ಆಗಿರುತ್ತದೆ. ಅಮೆರಿಕಕ್ಕೆ ಯೂರೋಪಿಯನ್ನರು ಕಾಲಿಟ್ಟಾಗ ಅಲ್ಲಿನ ಮೂಲನಿವಾಸಿಗಳ ಕತೆ ಏನಾಯಿತು? ಅದೇ ರೀತಿ ನಮ್ಮ ಕತೆಯೂ ಆಗುತ್ತದೆ ಎಂದು ಅವರ ಎಚ್ಚರ ನೀಡಿದ್ದಾರೆ. ಹಾಗಾಗಿ ಹಲವಾರು ವಿಜ್ಞಾನಿಗಳು ಆ ರೀತಿ ಭೂಮಿಯಿಂದ ಯಾವುದೇ ತರಂಗಗಳು ಅಂತರಿಕ್ಷಕ್ಕೆ ಹೋಗದಂತೆ ತಡೆಯಬೇಕೆಂದು ಸಲಹೆ ನೀಡಿದ್ದಾರೆ. ಆದರೆ ಅದಕ್ಕೆ ಈಗಾಗಲೇ ತುಂಬಾ ತಡವಾಗಿದೆ!

ಮನೋವಾದಲ್ಲಿನ ಹವಾಯ್ ವಿಶ್ವವಿದ್ಯಾನಿಲಯದ ಬೆನ್ ಫಿನ್ನೆ ಎಂಬ ಮಾನವಶಾಸ್ತ್ರಜ್ಞ ಅನ್ಯಗ್ರಹ ಜೀವಿಗಳೊಂದಿಗಿನ ಸಂಪರ್ಕದ ಬಗೆಗೆ ಆಧುನಿಕ ಮಾನವ `ಅತೀವ ಆತಂಕ'ಗೊಂಡಿದ್ದಾನೆ ಎನ್ನುತ್ತಾರೆ. ಅನ್ಯಗ್ರಹ ಜೀವಿಗಳು ಕ್ರೂರಿಗಳಾಗಿರುತ್ತಾರೆ ನಮ್ಮನ್ನು ಚಿತ್ರಹಿಂಸೆ ನೀಡಿ ಕೊಂದುಬಿಡುತ್ತಾರೆ, ಇತ್ಯಾದಿಗಳ ಬಗೆಗೆ ಚಿಂತಿಸಿ ಹೆದರಿಕೊಂಡಿದ್ದಾನೆ ಎನ್ನುತ್ತಾರೆ. 1898ರಲ್ಲಿ ಪ್ರಕಟವಾದ ಎಚ್.ಜಿ.ವೆಲ್ಸ್ರವರ `ವಾರ್ ಆಫ್ ದ ವರ್ಲ್ಸ್ಡ್' ಕೃತಿಯೇ ಇದಕ್ಕೆ ಉದಾಹರಣೆ. ವಾಶಿಂಗ್ಟನ್ನ ಬ್ರೂಕಿಂಗ್ಸ್ ಇನ್ಸ್ಟಿಟ್ಯೂಶನ್ 1960ರಲ್ಲಿ `ಇತರ ಗ್ರಹಗಳಲ್ಲಿ ನಾಗರಿಕತೆಯ ಆವಿಷ್ಕಾರ ಭೂಮಿಯ ನಾಗರಿಕತೆಯನ್ನೇ ನಾಶಪಡಿಸುತ್ತದೆ' ಎಂಬ ಸಾರಾಂಶದ ವರದಿಯೊಂದನ್ನು ನ್ಯಾಸಾಗೆ ಸಲ್ಲಿಸಿತ್ತು. ಎಮೊರಿ ವಿಶ್ವವಿದ್ಯಾನಿಲಯದ ವೈದ್ಯಕೀಯ ಮಾನವಶಾಸ್ತ್ರಜ್ಞ ಮೆಲ್ವಿನ್ ಕೋನರ್ ಹೇಳುವಂತೆ, `ಇತರ ಗ್ರಹಗಳಲ್ಲಿ ಜೀವವಿಕಾಸವಾಗಿದ್ದಲ್ಲಿ ಅದು ಬುದ್ಧಿಮತ್ತೆಗಿಂತ ಹೆಚ್ಚಿಗೆ ಸ್ವಾರ್ಥ, ಅಹಂಕಾರ, ಹಿಂಸೆ ಇರುವುದರ ಸೂಚಕವಾಗಿದೆ. ಅಂತಹ ಗ್ರಹದ ಜೀವಿಗಳೇನಾದರೂ ಭೂಮಿಗೆ ಬಂದಲ್ಲಿ ನಾವು ಇತರ `ಕೀಳು' ಪ್ರಾಣಿಗಳನ್ನು ಶತಶತಮಾನಗಳಿಂದ ನಡೆಸಿಕೊಳ್ಳುತ್ತಿರುವ ಹಾಗೆ ನಮ್ಮನ್ನು ನಡೆಸಿಕೊಳ್ಳುತ್ತಾರೆ'. `ನಾವು ಎಂಥದೇ ಅನ್ಯಗ್ರಹ ಜೀವಿಯನ್ನು ಭೇಟಿಯಾಗಲಿ, ಆ ಜೀವಿಗಳು ನಮ್ಮಷ್ಟೇ ಕೆಟ್ಟವರಾಗಿರುತ್ತಾರೆ' ಎನ್ನುತ್ತಾರೆ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಮೈಕೆಲ್ ಆರ್ಚರ್. ಅವರ ಪ್ರಕಾರ ನಾವು ಕಳುಹಿಸುತ್ತಿರುವ ಸಂಕೇತಗಳು, ನೌಕೆಗಳು ಎಲ್ಲವೂ `ಊಟ'ದ ಆಹ್ವಾನವಾಗಿದೆಯಷ್ಟೆ!
ಆದರೆ ಕಾರ್ಲ್ ಸಾಗನ್ ಮತ್ತು ವಿಲಿಯಂ ನ್ಯೂಮನ್ನಂತಹ ವಿಜ್ಞಾನಿಗಳು ಆಶಾವಾದಿಗಳು. ಅವರ ಪ್ರಕಾರ `ನಾಗರಿಕ' ಹಾಗೂ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿಗಳು ಆ ರೀತಿ ಇತರ ಗ್ರಹವಾಸಿಗಳ ಮೇಲೆ ದಬ್ಬಾಳಿಕೆ, ಆಳ್ವಿಕೆ ನಡೆಸಲು ಕೆಲವು ತೊಡರುಗಳಿರುತ್ತವೆ. ಅಲ್ಲದೆ ಅಷ್ಟೊಂದು ದೀರ್ಘ ಚರಿತ್ರೆ ಹೊಂದಿರುವಂತಹ ಮುಂದುವರಿದ ನಾಗರಿಕತೆಗಳು `ಕೋಡೆಕ್ಸ್ ಗ್ಯಾಲಾಕ್ಟಿಕ' ಎಂಬ ನೀತಿ ಸಂಹಿತೆಯನ್ನು ಹೊಂದಿರಬಹುದು ಹಾಗೂ ಅವು ನಮ್ಮಂತಹ ಎಳಸು ನಾಗರಿಕತೆಗಳಿಗೆ ಇನ್ನೂ ಶಿಕ್ಷಣ ನೀಡಬಹುದು ಮತ್ತು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದಿದ್ದಾರೆ.

ಮಾನವ ಈ ವಿಶ್ವದಲ್ಲಿ ಒಬ್ಬಂಟಿಯೇ?
ಅನ್ಯಗ್ರಹ ಜೀವಿಗಳಿವೆಯೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಆದರೆ ಖ್ಯಾತ ವಿಜ್ಞಾನಿ ನೋಬೆಲ್ ಪಾರಿತೋಷಕ ವಿಜೇತ ಫ್ರಾನ್ಸ್ನ ಜಾಕ್ವೆಸ್ ಮೊನಾಡ್ ಹೇಳಿರುವಂತೆ ಈ ವಿಶ್ವದಲ್ಲಿ ಮಾನವ ಒಬ್ಬಂಟಿ. ಖ್ಯಾತ ಬ್ರಿಟಿಶ್ ವಿಜ್ಞಾನಿ ರಿಚರ್ಡ್ ಡಾಕಿನ್ಸ್, `ನಾವು ಗಮನಿಸುತ್ತಿರುವ ಈ ವಿಶ್ವ ನಾವು ನಿರೀಕ್ಷಿಸುವ ಲಕ್ಷಣಗಳನ್ನೇ ಹೊಂದಿದೆ- ಅದಕ್ಕೆ ಯಾವುದೇ ವಿನ್ಯಾಸವಿಲ್ಲ, ಯಾವುದೇ ಉದ್ದೇಶವಿಲ್ಲ, ಒಳಿತೆಂಬುದಾಗಲಿ, ಕೆಟ್ಟದೆಂಬುದಾಗಲಿ ಇಲ್ಲ. ಇದೊಂದು ಕುರುಡು, ನಿಷ್ಕರುಣಿ ಅನಾದರದ ವಿಶ್ವ' ಎಂದಿದ್ದಾರೆ. ಧರ್ಮದ ಹುಸಿ ಸರಳುಗಳನ್ನು ಬಗೆದು ಹೊಸ ಚಿಂತನೆಯ ಕೊಡುಗೆಯನ್ನು ನೀಡಿದ ಮೊದಲ ವ್ಯಕ್ತಿ ಚಾರ್ಲ್ಸ್ ಡಾರ್ವಿನ್. ಭೂಮಿಯ ಮೇಲಿನ ಎಲ್ಲ ಜೀವರಾಶಿಯೂ- ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮಜೀವಿಗಳನ್ನೊಳಗೊಂಡಂತೆ- ಒಂದೇ ಮೂಲದಿಂದ ಬಂದವು. ಅವುಗಳ ರಚನೆಯಲ್ಲಿ ಯಾವ ಉನ್ನತ ಶಕ್ತಿಯ ಕೈವಾಡವೂ ಇಲ್ಲ. ವಿಜ್ಞಾನದ ಆದರ್ಶದಲ್ಲಿ ಮುಳುಗಿದ ಬರ್ಟ್ರೆಂಡ್ ರಸೆಲ್ ಸಹ, `ನಮಗೆ ವಿಜ್ಞಾನ ನೀಡುತ್ತಿರುವ ನಂಬಿಕೆಗಳು ಸಹ ಅರ್ಥವಿಲ್ಲದ್ದು, ಉದ್ದೇಶರಹಿತವಾದದ್ದು. ಯಾವುದೇ ಪೂರ್ವೋದ್ದೇಶವಿಲ್ಲದ ರಚನೆ ಈ ಮಾನವ. ಈ ಮಾನವನ ಮೂಲ, ಅವನ ಬೆಳವಣಿಗೆ, ಅವನ ಹೆದರಿಕೆ, ಪ್ರೀತಿ ಪ್ರೇಮ ಮತ್ತು ನಂಬಿಕೆಗಳೆಲ್ಲವೂ ಅಣುಗಳ ಆಕಸ್ಮಿಕ ರಚನೆಗಳಷ್ಟೆ. ಯಾವುದೇ ಶೌರ್ಯ, ಪ್ರೇಮದ ತೀವ್ರತೆ, ಭಾವೋನ್ಮಾದತೆ ವ್ಯಕ್ತಿಯನ್ನು ಅವನ ಸಾವಿನ ನಂತರ ಉಳಿಸುವುದಿಲ್ಲ. ಮಾನವನ ಎಲ್ಲ ಪ್ರಜ್ವಲ ಬುದ್ದಿಮತ್ತೆ, ಸೃಜನಶೀಲತೆ ಎಲ್ಲವೂ ಈ ಸೌರವ್ಯೂಹದ ಸಾವಿನೊಂದಿಗೆ ಹೋಗಲೇಬೇಕು ಹಾಗೂ ಮಾನವನ ಎಲ್ಲ ಸಾಧನೆಗಳೂ ಈ ವಿಶ್ವದ ಭಗ್ನಾವಶೇಷಗಳಲ್ಲಿ ಕೊನೆಗಾಣಲೇಬೇಕು' ಎಂಬ ಕಟುಸತ್ಯವನ್ನು ನುಡಿದಿದ್ದಾನೆ. ವಿಜ್ಞಾನಿ ಜಾಕ್ವೆಸ್ ಮೊನಾಡ್ ಹೇಳಿರುವಂತೆ ಈ ಭೂಮಿಯಲ್ಲಿ ಇಂದು ಮಾನವನಿದ್ದಾನೆಂದರೆ ಅದು ಜೀವ ವಿಕಾಸದ ಹಾದಿಯಲ್ಲಿನ ಕೇವಲ ಆಕಸ್ಮಿಕಗಳಿಂದ ಮಾತ್ರ. ನಾವು ಈ ವಿಶ್ವದಲ್ಲಿ ಒಬ್ಬಂಟಿಗರು. ನಮ್ಮ ಅಸ್ತಿತ್ವಕ್ಕೆ ಯಾವುದೇ ಅರ್ಥವಿಲ್ಲ- ನಾವು ರೂಪಿಸಿಕೊಂಡದ್ದೇ ಅರ್ಥ. ಕೊನೆಗೂ ಮಾನವನಿಗೆ ತಾನು ಈ ವಿಶ್ವದಲ್ಲಿ ಒಬ್ಬಂಟಿಯೆಂಬುದು ತಿಳಿದಿದೆ. ಅವನ ವಿಧಿಯೆಂಬುದು ಎಲ್ಲೂ ಇಲ್ಲ, ಅವನ ಕರ್ತವ್ಯವೇನೆಂಬುದೂ ತಿಳಿದಿಲ್ಲ. ಆಯ್ಕೆಯ ಅವಕಾಶ ಅವನಿಗೆ ಮಾತ್ರವಿದೆ- ಮೇಲಿನ ಬೆಳಕಿನ ಸಾಮ್ರಾಜ್ಯ ಅಥವಾ ಕೆಳಗಿನ ಕತ್ತಲ ಸಾಮ್ರಾಜ್ಯ. ಈ ಭೂಮಿಯ ಮೇಲಿನ ನಮ್ಮ ಅಸ್ತಿತ್ವ ಕೇವಲ ಆಕಸ್ಮಿಕದ್ದಾದಲ್ಲಿ ಅದು ಅತ್ಯಮೂಲ್ಯವೂ ಹೌದು. ಈ ವಿಶಿಷ್ಟ ಹಾಗೂ ಅಪರೂಪದ ಅಸ್ತಿತ್ವವನ್ನು ನಾವು ಕಾಪಾಡಿಕೊಳ್ಳುವ ದಿಸೆಯಲ್ಲಿ ಜಾಕ್ವೆಸ್ ಮೊನಾಡ್ ಹೇಳುವ ಆಯ್ಕೆಯ ಅವಕಾಶದ ಮಹತ್ವದ ಅರಿವಾಗುತ್ತದೆ. ಅದಕ್ಕಾಗಿ ನಾವು ಈ ಅನಂತ ವಿಶ್ವದಲ್ಲಿ ಅನ್ಯಗ್ರಹ ಜೀವಿಗಳ ಶೋಧ ನಡೆಸುವ ಜೊತೆಗೇ ನಮ್ಮ ಅಂತರಂಗಗಳ ಶೋಧ ನಡೆಸಬೇಕಾಗಿದೆ. ಏಕೆಂದರೆ ನಾವು ನಮ್ಮ ನಡುವೆಯೇ ಪರಕೀಯರಾಗಿದ್ದೇವೆ, ಪರಸ್ಪರ ದ್ವೇಷಿಸುವ, ಯುದ್ಧಗಳಿಗೆ ತುದಿಗಾಲ ಮೇಲೆ ನಿಂತಿರುವ `ಅನ್ಯಗ್ರಹ' ಜೀವಿಗಳಾಗಿದ್ದೇವೆ.

ಬುಧವಾರ, ಏಪ್ರಿಲ್ 17, 2013

Indian Army.

Indian Army
Introduction
 
Grit and experience affect the growth of an institution. Fighting four major wars, insurgency and other low intensity wars has indeed made the Indian Army an eminently and efficient battle trained, war machine.
Changing times bring changing needs. Battle training must tell also on the structuring of the army, for it is this function that extracts the most from the assets available, both men and material. A look at the command and structuring of the Indian Army shows how finely these have been tuned to meet India's threat perceptions, based on the experience of the major wars that it has fought and the present-day geo-political context.
The largest standing volunteer Army in the world has never had to scour the populace for draft or conscription. There are always more men eager to don olive green than the demand at any one time. But this does not reflect a situation where a large unemployed workforce would get into uniform to keep body and soul together. More to the point is the basic attitude of our people to the call of arms, discovered also by the British, some three centuries before. There are very many who join up for long service tenures under the colours, by inclination and choice - also familial habit and honour. If a young man or woman, sound of body and mind, and of Indian origin, is inclined to spend most of his useful working years in the kind of desolation that the country's Field areas' adjoining the borders provide, can he or she cannot be refused.
For the purpose of recruitment, the country is divided into recruiting zones. Every zone is allotted a quota for recruitment based on a percentage of its population and ethnic grouping. A legacy, slowly being diluted, is that of combat arm units or regiments recruiting from a particular zone or mixture of ethnic groups.
Once a man has joined up, it is for keeps. Many fall out at the basic training stage when they find that there is much more to it than getting into a smart uniform. The one who hear the sound of the trumpet clearly without missing a note, take their oath and for the greatness of the nation go into service - not servitude.
Indian Army Headquarters began its life in the Red Fort - Delhi. Imposing edifice that it is, it was hardly suitable to house a complex entity such as this. Supreme Headquarters at that time retained its seat in South Block and refused to share space. Mercifully, it was wound up in short order. Today Army Headquarters occupies portions of South Block along with a gigantic, architecturally modern Sena Bhavan adjacent.
In the Indian context, Command Headquarter can be likened to a Field Army or even an Army Group Headquarter with a General Officer Commanding-in-Chief presiding over matters in the rank of a (three-star) Lieutenant General. Next the line are the Corps Headquarters, which are Field Army Headquarters elsewhere. The Indian Army's combat formations are now grouped and tailored under many such Corps Headquarters (with some forces being retained under static Area Commands).
The static Areas, Sub Areas, or Independent Sub Areas span the length and breadth of the country. These look after infrastructural (and lines of communications) assets, relieving field formations from the tedium of administering a multiplicity of support installations located in an area. Area boundaries conform to state (or a group of states) administrative boundaries. All Headquarters are tasked also to maintain full civil-military liaison. Static Areas (or even field formations in some cases) set up Station Headquarters whose area of responsibility usually coincides with a district or a group of districts. Field formations located in Areas are always contingently tasked to assist the civil administration through these static Headquarters. Strangely enough, this system works.
The Chief of Army Staff (COAS) wears multiple hats. To the entire army, now some 1.1 million men and women strong, he is the Chief. A number of Staff Officers assist him, such as Principal Staff Officers (PSOs), Heads of Arms and Services, etc. It would take a book of considerable length to even set down their designations and functions.
Until the 1960s, staff coordination was a one-man affair in the form of a three-star General Officer designated the Chief of the General Staff, with direct access to the Chief available to 'some' - the PSOs. Today a Vice Chief and two Deputy Chiefs of Army Staff handle coordination. The command channel is absolutely one to one between the Chief and his Army Commanders -with no one - but no one authorized even to say hold the line'.
PSOs at Army Headquarters (and others down the line) have retained their nineteenth-century designations, not having succumbed to new managerial nomenclatures or alpha-numeric designations. The Quartermaster General, Master General of Ordnance, Adjutant General, Military Secretary, Engineer-in-Chief, Signal Officer-in-Chief, therefore, find traditional mention. At the sharp end a brigade-level General Staff Officer and his logistic equivalents are still called GSO, Deputy Assistant Adjutant General and Deputy Assistant Quartermaster General respectively.
The field force is grouped into Corps. Some of these are defensively oriented and have, over the years, acquired an unofficial - 'Holding'. The others are called reserve or, unofficially again, 'Strike' Corps. The former is really a misnomer since these contain ample offensive potential.
Corps Headquarters are designed to handle an all-arms field army- of three to five divisions or their equivalents. Army Headquarters reserves could be mammoth-size or small, but powerful in either case. Heavy-tracked-Corps are an instance of the former, and the three parachute commandos (battalion-size units),   which perform special-forces duties, of the latter. Airborne, Air Assault or Parachute troops are usually held centralized. The mounts', in all cases, are provided by the Indian Air Force.
The Army has in its Order of Battle, mountain divisions, infantry divisions, armoured divisions (in which tank units predominate) and mechanized divisions (in which mechanized infantry units predominate). Independent brigade groups may be armoured, mechanized, air defence (missile or gun), parachute, engineer, field artillery, electronic warfare or even standard infantry and mountain. These form 'Corps/Army troops', that is, they are held at Corps and Army levels for balancing out missions and task forces. At these levels, one would find heavy logistic support units in terms of supply, transport, field ordnance depots, and medical facilities.
Organizationally, the field forces have never been static. Reorganization and creation of new field forces is the norm, prompted by constant rethinking on threats and the emergence of new technology. To put it simply, if our organizations are basically triangular, there is no bar on making them square or pentagonal for a given mission.
Piecemeal 'modernisation' is of no use to anyone. All arms have gone through two and a half modernisation cycles since independence. For people with less than the usual quota of a sense of humour it amounts to a three-legged arms race in which the Joneses are driving the Javeds, Joshis and Jiangs to follow suit.
At least with the Indian Army it is not really so. It is conscious of working out an edge or even proximate ability to see that a  catastrophic  disadvantage  does   not   undermine  operational viability. Even the most articulate and vehement critic would agree that the army is appreciative of what the country has provided to it in material, though it is somewhat hard pressed to do so.
The Underpinning     The timeless creed of the warriors and their feeling of comradeship in war and pestilence. The individual styles of the arms actually complement each other in combat.  
The pivot     The ability of our field commanders to accept organizational, doctrinal, and equipment changes (not in that order) plus a finer perception of the strategic issues involved. With that, is their ability to mix individual assets into a combined arms and logistics team of very high combat worth.
Technology and Equipment     It is in this narrow area that modernization is usually talked about. By themselves, 'equipment' may just remain well-produced ironmongery or an intricate series of integrated circuits. But when these are synthesized in a complementary mix, they come to life - and present a threat out of all proportion to their arithmetical aggregate on inventory.
Overall, the Indian Army is adequately equipped. There certainly remain areas where improvements or 'modernization' is pending, but that does not, in any way, detract from the fact that overall the Army has achieved a dissuasive quality, in which a potential aggressor will go into lip-biting conclave before deciding upon a violent course of action.
The mechanized armies in the Western Sector are mobile, balanced groupings of high striking power. The fine synthesization of cutting-edge weaponry into high-value, capital-intensive combat groups is seen at its best here. The T-72, BMP series Infantry Combat Vehicle, Anti-tank Guided Missiles of many varieties, Aviation, fast reconnaissance vehicles, the FH-77/B-02 Medium Gun together with a number of other field pieces indigenously designed and developed, varieties of self-propelled air defence missile and gun systems, Black' Electronic Warfare arrays, first-class assault bridging for dry and wet crossings are found together in supportive mixes. Here, all ballyhoo of ‘We are the queens/kings of the battlefield' is easily given a quiet burial.
In the mountains, it is light infantry and artillery, supported by engineers, signals, helicopters and animals, which make for the combined-arms approach. The most visible manifestation of modernization in equipment is in Siachen, which without these assets, cannot be garrisoned much less defended. This includes a combative logistical infrastructure to prevail 'AGAINST ALL ODDS'. Two things remain to be stated without equivocation.
The Indian Army gives due respect to its adversaries and finds no need to cozen itself with whistling in the dark about 'One of US is equal to ten of them.’
It does not accept being considered second to anyone - anywhere.
Leadership
 
The officer corps strength versus commanded strength averages 7 to 8 per cent. After independence there was only one period (1963-65) when a need arose to offer short-term emergency commissions. That was when a pre-1962 planned expansion was compressed in terms of time leading to this call. The main brunt of the fighting in 1965 and 1971 at junior command levels was taken up by this group. Just as in the Second World War, they, along with their regular counterparts, responded with traditional elan. Over the years, a number of Commission streams had merged together. The last of the Royal Military Academy, Sandhurst, graduates retired in 1969. The Indian Military Academy (IMA), Dehra Dun, graduates, as well as the Short Service/Emergency Commissioned Officers of the Second World War formed the overwhelming bulk filling the fighting command slots in 1947-49; the King's Commission Indian Officers taking over the higher command appointments.
In 1949 a unique experiment was launched - that of cadet-level training for all the three Services together for three years and thereafter moving on to Service academies for pre-Commission training. This was the Joint Services Wing (Dehra Dun), which in later years became the National Defence Academy (NDA) Khadakvasla.
At present, the Army officer intake is from four distinct streams, namely the NDA; the graduate direct entry stream (IMA); cadets chosen from the ranks and initially trained at the Army Cadet College - an adjunct of the IMA; and a five-year Short Service Commission stream from the Officers Training Academy, Madras and Gaya. A few selected Junior Commissioned Officers (a grade existing only in the Indian and Pakistan Armies) are offered Regimental Commissions. The Short Service stream is offered Regular Commissions by choice and reassessment. Officers of the NDA have now reached three-star rank in all three Services. A common indicator of the type of leadership extent in the Army are casualty ratios. In all our wars, officer casualties have been high. This is an internal assessment criterion. Management experts point out that high casualties bespeak of poor command. The point, however, is that Officers of the combat arms lead from the front and do not manage from the rear.
The sacrificial content of the leadership ethos built up over decades has served the country well. But far more important, the ranks know for certain that there will be no directive commands by electronics or remote control.
A common perception of the army officer is that of a large, moustachioed, Neanderthal with overhanging brows getting very physical round the clock. Another is that the real creme de la creme of the high school levels would never think of joining up. It never strikes the common observer that neither a gorilla nor a budding CV Raman, nor a future chief executive of, say, an ice cream manufacturing company may necessarily have combat leadership traits. Academic brilliance is just one plus point, and that is all that has been displayed by a teenager prefering to move into the civilian professional life at that point. If a young man cannot translate his manifest intelligence and brilliance into fast life-and-death decision-making in the field - or wishes to preserve his attributes for 'better' occasions when faced with a sticky situation, he is better utilized in an office, college or laboratory than on a battlefield. That is where he naturally belongs.
The training of the Indian army officer is meant to subsume his persona under a very demanding but explicit code. It is the code given by FM Chetwode cited earlier.
As the young officer grows in services he obtains professional training which helps to slot him into his increasing responsibilities. These training institutions were created from scratch. At their apex stands the National Defence College. In between are the professional All Arms and Services 'colleges' and special managerial expertise is provided by Corps and Service schools and colleges. Standing at the top here is the College of Defence Management. At the Higher Command levels the leader and the manager merge imperceptibly.
The phrase teeth and tail has been hounding the Army ever since a manager with a piquant turn of phrase slotted it into the military lexicon some forty years ago. Someone will have to decide that if the teeth, (meaning the arms) are really to be effective, should not the tail (the logistic corps and services) be more aptly called the gums?
The underpinning of any force is the support services especially in the context of the terrain that we fight in. it is also an unfortunate fact that the more modern and sophisticated a field force, the logistic back-up rises exponentially to maintain it in reasonable shape. When a 50-tonne tank trundles past a saluting base, having replaced a 40-tonne tank, the general populace are appreciative of this new war machine not realizing that, probably, the logistic support to it has gone up 2.5 times. This needs to be known.
The Army Medical Corps gives pride of place in protocol and otherwise to the Military Nursing Service. Together with the Army Dental Corps, the medical services provide a composite, wide-spectrum, morale-boosting blanket of comfort. The men of this corps commence work from the forward-most line of contact. Their war record citations and awards bear testimony to their crucial function. 60 (Parachute) Field Ambulance became a favourite not only in the Commonwealth Division but with all formations of the United Nations Army in Korea. They brought home a Presidential Unit Citation.
The Army Service Corps (ASC) handles all supply and transport aspects while the Army Ordnance Corps (AOC) holds and issues close on half a million items held on inventory. The troika is formed by the Electrical and Mechanical Engineers who provide light to factory-level repairs to everything the Army uses. With their forward repair teams based on customized armoured vehicles, they function within a battlefield, recovering equipment casualties from their point of collapse. In Chhamb - 1971, six medium guns became immobile when their lyres burnt out. The enemy was sweeping the area with machine guns, at line of sight; yet working against time and hostile fire the guns were refitted, recovered, given a quick thump on the barrel and put back in action in less than 24 hours. Back at base workshop, they strip and rebuild anything that the Army owns be it fighting vehicles, electronics, or data processing equipment.
The Red Caps - the military police - are really not providing a service. It is a mix of service and combat visibility, the men being chosen for their presence'. They are the most visible form of military discipline and they do so even-handedly right to brigade levels.
Another keeper of the Army's morale is the Postal Corps. Today they dispense insurance, and other facilities of a standard post office of the Indian Union at any point where a unit of the Indian Army is sent. Mail and smiles go together.






Combat Edge
 
The Infantry
The least spectacular of all arms, but without which you can do nothing, nothing at all".  True to these words, Infantry has been the foremost fighting arm from the days of yore. History is testimony to the fact that the ultimate victory in any war is decided by the Infantry. It is the infantryman who pushes the enemy out of his bunker and forces him to accept defeat; or, resolutely holds ground against the assaults of the enemy till the "last man last round". Like all armies the world over, Infantry is the prime arm of the Indian Army. It is with the Infantry at the core that the rest of the Army is configured, both during war and peace. If Army is the last bastion of National security, Infantry remains its penultimate strength.
All wars since 1947 have been witness to the heroic deeds of Infantry troops who have performed their tasks successfully in adverse climatic conditions and terrain to protect the Nation's integrity and sovereignty. The Indian frontiers remain in the hands of infantrymen, from the staggering high altitudes of the Siachen Glacier, the impregnable jungles of the north-east to the scorching heat of the Thar Desert. The low-intensity conflict operations have been a constant, and perhaps the most prolonged operation for the Army. Insurgencies in the North - East, Jammu and Kashmir and, in the past, Punjab have been live examples of Infantry centric operations which are characteristically complex, delicate and sensitive. The Infantrymen have invariably performed well. Besides, the world over in various United Nations peace-keeping operations, our Infantry has earned tremendous good-will and carved a niche for itself and the Nation.

The Gunners
The Gunners are a breed apart. A phlegmatic bunch of men, they are not given to any uncertainties. Their professional attitude, work ethics and training regimen prepares them to face any contingency which may evolve in their flexible fire plan. Gunners exude confidence and infuse the same among others. This ability is reflected in their motto SARVATRA, IZZAT - O - IQBAL to provide fire-power for all eventualities, where-ever required, in whichever form required.

Army Aviation
Ability to observe deep into the enemy area has always been one of the quintessential pre-requisites of warfare and 20th century saw a major revolution in warfare when the advent of airpower added a third dimension to the battlefield on land and in sea. Building from those days, Army Aviation Corps, the youngest Corps in the Indian Army has notched up an enviable record of successes, awards and decorations. It is an amalgamation of diverse influence and traditions of the ‘Aviation’ and the ‘Army’. The motto ‘Suveg Va Sudrid’ clearly narrates the daily ongoing epic of Army Aviation’s ceaseless operational involvement across diverse terrains, in contrasting weather and climatic conditions in a variety of difficult situations. Nothing describes the omnipotence of Aviation’s reach and presence better than it’s ubiquitous round the clock application in the present day context. To add to this are the inborn demands of the environment as Aviation requires enormous reserves of physical, mental and moral stamina. The men and machines, of the Army Aviation Corps, have done yeoman service during the two major wars and innumerable missions of mercy in peace-time for which they have earned accolades far out of proportion to their small numbers.

Army Air Defence
The Corps of Army Air Defence, though a nascent arm, has evolved into a highly professional and modern arm of Indian Army. The personnel of Corps of Army Air Defence perform their duty with speed and flexibility; with utmost zeal and enthusiasm. In the contemporary battlefield  characterized by versatile aircraft, flying at speed well beyond that of sound, the Air Defence men have to be capable of  real time monitoring and rapid decision making, to live up to the Corps motto of  AKASHE SHATRUN JAHI (Kill the Enemy in the Sky). The Corps of Army Air Defence is always "First In and Last Out" in the gamut of operations and in addition to attacking the enemy's critical assets, provides credible air defence cover to vital assets of strategic importance and to critical assets of field forces.

The Corps of Engineers
The Corps of Engineers with their motto of SARVATRA (Ubique in Latin, or 'Everywhere' in common parlance) are a league apart. The officers of the Corps of Engineers are armed with a degree in engineering. The 'Sappers' (as the Engineers are commonly known) are adept at a wide variety of important operational tasks ranging from minefield laying and clearing, bridging, road construction, handling of explosives etc. Mobility and counter-mobility can be termed as some of the important aspects of warfare in which the Engineers play a major role.

The Corps of Signals
The Corps of Signals is responsible to provide, deploy and leverage the strength of communication networks and ensure cyber security, both during peace and war. The vast Information Communication and Technology (ICT) infrastructure created by the Corps of Signals brings about the necessary synergy amongst various arms/ services by   providing voice, video and data connectivity to units and formations thus fulfilling the motto TEEVRA CHAUKAS. They also connect soldiers deployed at far flung remote locations to their kith and kin. The Information Warriors, as they are popularly known, are more fortunate than others since they are constantly on the job, thus ensuring high state of training and morale. The importance of their role inculcates a sense of pride, confidence and sophistication that is unmatched. All said and done a Signaller's life is worth living and dying for.

The Army Medical Corps
The Armed Forces Medical Services (AFMS) relentlessly pursues professional excellence, and immensely dedicated to maintaining the morale of fighting forces both in war and peacetime by quality medical care and treatment. AFMS is a model of inter-service integration wherein all the three services are jointly committed to the task of providing comprehensive health care services to its clientele.
The ethos of the Army Medical Corps, are reflected in the Corps flag and its crest, with the three colours as "Dull Cherry, Old gold with Black, in-between. The flag and crest, denote positive health, succour, freedom from diseases, creativity, intellect and magnanimity, which epitomizes the Corps Motto SARVE SANTU NIRAMAYA - may all be free from disease and disability.
The AFMS delivers quality curative and preventive services and practice of social hygiene on a large scale. The Corps has some of the highest qualified super-specialist, specialists and medical officers in all branches of medicine. The AFMS not only implements all National Health Programmes to provide efficient preventive and curative services but has specialized treatment facilities for heart, lung, kidney diseases and cancer treatment. The Army Medical Corps (AMC) takes care of all the service personel, their families and pays equal importance in providing medical care to the Ex Servicemen (ESM) and their dependents  through ECHS, or by various medical camps conducted in remote areas, including Nepal. 
The AFMS have always been at the forefront in providing medical relief in times of disasters and natural calamities and has formed a very important integral part of UN Peace Keeping Forces. The rapid technical changes in the past two decades and the commitment of the Corps to provide a cradle-to-grave service, has led to advances in medical science and technology. AFMS has excelled in almost all branches of medicine and surgery especially in cardiology, cardio-thoracic surgery, neurology & neuro surgery, renal transplantation, malignant diseases treatment, joint replacement etc.

The Ordnance Corps
The Army Ordnance Corps today is an organization that has been transformed into a well connected logistic chain capable of withstanding all challenges. True to their motto of SHASTRA SE SHAKTI, they ensure that the fighting troops receive intimate and state-of-the-art support on the battlefield.
The 'Tuskers' ensure that the required wherewithal is delivered at the right time, right place, and of the right quality. Perfection is striven for so that the fighting soldier does not have to look over his shoulder for his needs. The great challenge today is that of balancing economy with effort and getting the 'best bang for the buck'. With automation and modern material management techniques, this is always the ultimate goal.

The Corps of EME
In sync with its motto, 'Work is Supreme Duty', the 'Soldier-Craftsman' of the Corps of Electronics Engineers (EME) popularly called Eagles have been rendering yeoman services by providing integrated engineering support to the entire range and depth of Army's equipment, be it vehicles, tanks, telecommunication devices, radars or any other conceivable equipment of the Army, right from design to discard i.e. support from 'womb to tomb'. Wars involve the employment of a great deal of modern and sophisticated equipment and the EME plays a major role in assisting the Army's operational preparedness status and combat effectiveness to win any war.
It ensures operational fitness of the entire range of equipment. It also spearheads the management of technology transition for advancing the force modernization programme. If combat arms are the teeth of the Army then EME has a vital function of keeping them sharp, fulfilling the motto: KARM HI DHARM.

The Army Dental Corps
Army Dental Corps is a family of dedicated professionals committed to maintaining the dental health of Armed Forces Officers, personnel and their families which in turn contributes to optimum force utilization and enhances operational capability.
The Core Values of the Corps are patient focused & comply with clinical and contemporary governance protocols; value each individual and their contribution; provide directed military & professional development and promote tri-service ethos.
The Corps Ethos have also been imbibed into the Corps Crest which has a laurel wreath enclosing elephant tusks and a lotus flower at the base. The beauty of the crest is highlighted by the noble Ashoka Lions at the top. The right tusk represents wisdom and the left, emotion.

Rashtriya Rifles
Rashtriya Rifles is a specialist elite force raised in 1990 to combat insurgency in the country and is the premier counter insurgency force of the Army, today. The Rashtriya Rifles is an excellent classical example of Olive Green integration with its rank and file drawn from all arms and services. Its efficacy is reflected in its phenomenal operational success which is the result of a stringent selection process, training, enhanced mobility, surveillance, fire-power and protection capabilities. Rashtriya Rifles adopts a relentless approach with human touch in the execution of tasks, true to its motto of DRIDTA AUR VEERTA which means Determination and Valour.

The Army Service Corps
"War is first and foremost a matter of movement; in the second place, a matter of supply.... and in the third, a matter of destruction". This quote aptly describes the function of the Army Service Corps. This is the Corps, which moves and sustains everything that is required for warfare i.e. from a soldier to any kind of equipment, big or small. Moving by vehicles, mules and porters, it ensures flawless logistics support to match up with the operational plans.

The Pioneer Corps
The oldest and least glamourous of all services, yet it is omnipresent in all stages of warfare. Pioneer Corps units provide disciplined and well trained manpower, where civilian labour is either not available, or its employment is not desirable for reasons of security. Pioneer units are mostly committed in forward and operational areas. They may also be employed as guards and escorts for headquarters, installations, ammunition trains and convoys.
"Through all major wars the contribution of the Pioneer has been tremendous. He is an important element in all spheres of activities with the engineers he builds bridges, repairs railways, maintains roads; with the service corps he brings up vital supplies and stores; with the ordnance corps he keeps up the flow of guns and ammunition; he works in hospitals or acts as stretcher bearers with frontline troops ".
True to these words, the Pioneers have been there to support the operations of all arms and services, both in war and peace. Their resilience and eagerness to undertake all type of duties is aptly summed up in their motto; SHRAM SARVA VIJAYEE -meaning 'With Labour, everything can be won'. The Pioneer Soldier is always true to his tasks.

Territorial Army
The concept of Territorial Army in India was introduced way back in the year 1897, when it was raised as 'Volunteers'. Since its raising on 9th October 1949 by Shri C Rajagopalachari, the then Governor General of India . The Territorial Army also known as TERRIERS has come a long way and earned a place for itself in the hearts of the people by its selfless devotion to duty, truly justifying the motto SAVDHANI VA SHURTA. The conceptual framework for the Territorial Army is based on the fundamental idea that it should exist for war time employment and should be maintainable at the lowest cost during peace time.
The concept encompasses the employment of disciplined, trained and dedicated citizens from all walks of life to support, supplement and augment the resources of the regular Army. The primary objective of raising the Terriers was to create a Citizens Army capable of augmenting and relieving the Regular Army of their static duties during national emergencies and for providing aid to the civil authorities in dealing with natural calamities and maintenance of essential services. TA is a vital adjunct of the Regular Army with the ability to augment the regular army. It is a flexible and dynamic system capable of resurrection from complete dormancy to full operational capability in an efficient manner within an operationally acceptable time-frame, as has been proved time and again.

The Ethos
 
 
The infusion of high technology based precision weaponry has enhanced the lethality of future warfare manifold. The spectrum of threat ranges from the nuclear to the conventional and the assymetric, with terrorism emerging like a hydra-headed monster. Add to this the rigours of climate i.e. the glacial heights and extreme cold, dense mountainous jungles and the heat and simoom of the deserts. Such are the trying environs in which a soldier operates. However, to a soldier facing such challenges and going beyond the call of duty is but second nature. Life's turbulences and turmoils have a special flavour for him. For those not exposed to a war or war like environment, this flavour is beyond the realms of imagination. The Indian Army soldier is infused by a set of values that make the soldier willingly face a plethora of challenges and difficulties, and when the call may come, to give the ultimate sacrifice in the service of the Nation. The ethos of the Army is ingrained in all soldiers with an unwavering will to succeed, accepting their grave responsibility and an unbridled ability to give their lives for others; confident that in return the nation will look after them and their families. The values of the army infused in the soldier through the years of training are enumerated below
  • Espirit-de-Corps     The spirit of comradeship and brotherhood of the brave, regardless of caste, creed or religion. The motto is, "One for all and all for one"!
  • Spirit of Selfless Sacrifice     The tradition is never to question, but to do or die for the three "Ns"; Naam, i.e. name-honour- of the unit/Army/Nation, 'Namak'(salt) i.e. loyalty to the Nation, and 'Nishan', i.e. the insignia  or flag of his unit/regiment/Army/Nation which the soldiers hold afloat willingly.
  • Valour     Fearlessness in combat and in the face of the enemy even when fighting against great odds or even when facing sure death.
  • Non-discrimination     The Indian Army does not discriminate on account of caste, creed or religion. A soldier is a soldier first and anything else later. He prays  under a common roof. It is this unique character, which makes him bind in a team despite such diversity.
  • Fairness and Honesty     The spirit of honesty and fair play. He fights for a just cause that extends even to the enemy (prisoner or wounded).
  • Discipline and Integrity     Discipline and integrity impart the feeling of patriotism, honesty and courage under all circumstances, however strong be the provocation otherwise.
  • Fidelity, Honour and Courage     He is a man on whose shoulders lies the honour and integrity of his nation. He knows that he is the last line of defence and he cannot fail the Nation.
  • Death to Dishonour     A close bond amongst soldiers forces them to choose death to dishonour. The concept of 'IZZAT' (HONOUR) in the clan / unit enables them to shun the fear of death; to be called a coward in the peer group is worse than death.
  • Forthrightness     A soldier has to be forthright, for on his word the men he leads are going to lay down their lives without questioning why.
  • These values stoke the attitude of Service before Self in every soldier. The famous credo of Chetwode Hall is deeply imbibed in the men in Olive Green. It is the spirit of this credo, imbibed in every officer that binds him with his men in an unshakeable bond of camaraderie.
  • The safety, honour and welfare of your country comes first
    always and every time.
  • The  honour, welfare and comfort of the men you command come next.
  • Your own ease, comfort and safety come last always and every time.
Organisation (Arms and Services ) of the Army  
The greatest binding force in the Indian Army remains unit cohesion and tradition. Truly heady is this mixture of Unit identification and traditions of sacrificial valour, handed down through centuries. At one point, victory or defeat becomes irrelevant. What matters  is - Has the unit measured up?
The Indian Army has time and again lived up to its tradition of valour, heroism, sacrifice and fortitude. It stands vigil along the border, watchful, prepared for any sacrifice so that the people of the country may live in peace and with honour. The Indian Army is that and much more.